ಅಂಗಳದಲ್ಲಿ ಆಟವಾಡುತ್ತಿದ್ದ ಕಂದಮ್ಮನಿಗೆ ನಾಗರಹಾವು ಕಡಿತ; ಚಿಕಿತ್ಸೆ ಫಲಿಸದೆ ಮಗು ಸಾವು

ಸಾಗರ: ಬೇಸಿಗೆ ರಜೆಗೆಂದು ಅಜ್ಜಿ ಮನೆಗೆ ಬಂದಿದ್ದ ಎರಡೂವರೆ ವರ್ಷದ ಮಗುವೊಂದು ಹಾವಿನ ಕಡಿತಕ್ಕೆ ಬಲಿಯಾದ ಹೃದಯ ವಿದ್ರಾವಕ ಘಟನೆ ನಗರದ ಎಸ್‌ಎನ್ ನಗರದಲ್ಲಿ ನಡೆದಿದೆ. ಭವೀನ್ (2.5) ಮೃತಪಟ್ಟ ದುರ್ದೈವಿ ಬಾಲಕ. 

ಶಿವಮೊಗ್ಗ-ಬೆಂಗಳೂರು ವಿಮಾನ ಸ್ಥಗಿತ : ಸಚಿವರಿಗೆ ಬಿ.ವೈ. ರಾಘವೇಂದ್ರ ಪತ್ರ

ಮೃತ ಮಗು ಭವೀನ್ ತನ್ನ ತಂದೆ-ತಾಯಿಯೊಂದಿಗೆ ರಜೆ ಕಳೆಯಲು ಅಜ್ಜಿ ಮನೆಗೆ ಬಂದಿದ್ದನು. ಮನೆಯ ಮುಂದೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ನಾಗರಹಾವೊಂದು ಮಗುವಿನ ಕೈಗೆ ಕಚ್ಚಿದೆ. ತಕ್ಷಣವೇ ಎಚ್ಚೆತ್ತ ಪೋಷಕರು ಮಗುವನ್ನು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ
ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಸಂಜೆ ವೇಳೆಗೆ ಮಗು ಕೊನೆಯುಸಿರೆಳೆದಿದೆ.

Sagara 2-Year-Old Boy Dies After Cobra Bite

shivamogga car decor sun control house
shivamogga car decor sun control house
Sagara 2-Year-Old Boy Dies After Cobra Bite
Sagara 2-Year-Old Boy Dies After Cobra Bite