ಸಾಗರದಲ್ಲಿ ಗಾಂಜಾ, ಮಾತ್ರೆ ಮಾರಾಟ ಡೌಟ್​, ಹಣ್ಣಿನ ವ್ಯಾಪಾರಿ ಅಕ್ಬರ್ ಅರೆಸ್ಟ್​!

ಹಂಚಿಕೊಳ್ಳಿ
WhatsApp Facebook X Telegram
Sagara Helpline Trust sagara news malenadutoday image
Sagara Helpline Trust sagara news malenadutoday image

Sagar Police / ಮಲೆನಾಡು ಟುಡೆ / ಶಿವಮೊಗ್ಗ / ಸಾಗರದಲ್ಲಿ ಗಾಂಜಾ ಮತ್ತು ಎಂಡಿಎಂ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಸಾಗರ ಪೇಟೆ ಠಾಣೆ ಪೊಲೀಸರು ನಿನ್ನೆದಿನ ಗುರುವಾರ ಮಾಲುಸಹಿತ ವಶಕ್ಕೆ ಪಡೆದಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಪಟ್ಟಣದ ಕೃಷ್ಣ ಗ್ಯಾರೇಜ್ ರಸ್ತೆಯಲ್ಲಿರುವ ಮನೆಯ ಎದುರಿನ ಗೋದಾಮಿನ ಮೇಲೆ ದಾಳಿ ನಡೆಸಿದಾಗ ಅಕ್ರಮವಾಗಿ ಗಾಂಜಾ ಮತ್ತು ಎಂಡಿಎಂ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ.

ದಾಳಿ ಸಂದರ್ಭದಲ್ಲಿ ಹಣ್ಣಿನ ವ್ಯಾಪಾರಿ ಅಕ್ಟರ್ ಬೇಗ್ ಎಂಬಾತನನ್ನು ವಶಕ್ಕೆ ಪಡೆದು 10ಸಾವಿರ ಮೌಲ್ಯದ 156 ಗ್ರಾಂ ಒಣಗಾಂಜಾ, 25 ಸಾವಿರ ರು. ಮೌಲ್ಯದ 10ಗ್ರಾಂ ತೂಕದ ಎಂಡಿಎಂ ವಶಕ್ಕೆ ಪಡೆದುಕೊಳ್ಳಲಾಗಿದೆ.

ಸದರಿ ತಂಡದ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಎಎಸ್‌ಪಿ ಡಾ.ಬೆನಕಪ್ರಸಾದ್‌ ಸಿಪಿಐ ಪುಲ್ಲಯ್ಯ ರಾಥೋಡ್, ಪಿಎಸ್‌ಐ ಶಾಂತರಾಜ್, ಸಿಬ್ಬಂದಿ ರವಿಕುಮಾ‌ರ್, ನರೇಂದ್ರ, ಕೃಷ್ಣಮೂರ್ತಿ, ಮೋಹನ್, ಚಿದಾನಂದ, ಲೋಹಿತ್ ಇನ್ನಿತರರು ಪಾಲ್ಗೊಂಡಿದ್ದರು.

ನಿಮ್ಮ ವಾಟ್ಸಾಪ್​ಗೆ ಸುದ್ದಿ ಕಳುಹಿಸಲು ಕ್ಲಿಕ್​ ಮಾಡಿ ಗ್ರೂಪ್​ಗೆ ಜಾಯಿನ್ ಆಗಿ :  Whatsapp / https://chat.whatsapp.com/JrsZ8He4nN600n0r3tJItz

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor