SHIVAMOGGA ದಲ್ಲಿ ಹೋಳಿ ಸಂಭ್ರಮ ಹೇಗಿತ್ತು ಗೊತ್ತಾ!? ಈ ಸಲ ಗೋಪಿ ಸರ್ಕಲ್​ನಲ್ಲಿ ಡಿಜೆ, ಡ್ಯಾನ್ಸ್​, ಬಣ್ಣದ ಓಕುಳಿಯ ವಿಶೇಷವೇನು ಗೊತ್ತಾ?

ಹಂಚಿಕೊಳ್ಳಿ
WhatsApp Facebook X Telegram

MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗದಲ್ಲಿ ಇವತ್ತು ಹೋಳಿ ಸಂಭ್ರಮ ಮುಗಿಲುಮುಟ್ಟಿತ್ತು ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಏಕೆಂದರೆ, ಶಿವಮೊಗ್ಗದ ಯುವಕ-ಯುವತಿಯರೆಲ್ಲಾ ಬಣ್ಣ ಓಕುಳಿ ಎರಚಿ, ಮನಸ್ಸೋ ಇಚ್ಚೆ ಕುಣಿದದ್ದೆ ಇದಕ್ಕೆ ಸಾಕ್ಷಿ

ಅದರಲ್ಲಿಯು ವಿಶೇಷವಾಗಿ ಗೋಪಿ ಸರ್ಕಲ್ ನಲ್ಲಿ ಹಿಂದೂ ಕೇಸರಿ ಅಲಂಕಾರ ಸಮಿತಿ ವತಿಯಿಂದ ಹೋಳಿ ಹಬ್ಬಕ್ಕೆಂದೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಬೇಳಗ್ಗೆ 9 ಗಂಟೆಯಿಂದಲೇ ಗೋಪಿ ಸರ್ಕಲ್​ನಲ್ಲಿ ಹೋಳಿ ಆಚರಣೆಗೆ ಅವಕಾಶ ಕಲ್ಪಿಸಲಾಗಿತ್ತು. ಗೋಪಿ ಸರ್ಕಲ್​ಗೆ ಬಂದು ಸೇರುವ ದಾರಿಗಳನ್ನು ಬಂದ್ ಮಾಡಿ, ವಾಹನಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿತ್ತು. 

READ | ಶಿವಮೊಗ್ಗ ಬಸ್​ಸ್ಟ್ಯಾಂಡ್​ನಲ್ಲಿ ಶಾರೀಖ್! ಶಂಕಿತ ಆರೋಪಿಗಳನ್ನು ಇಲ್ಲಿ ಕರೆತಂದು ವಿಚಾರಿಸುತ್ತಿರುವುದೇಕೆ? ಇಲ್ಲಿದೆ ವರದಿ

ಇನ್ನೂ ಯುವತಿಯರಿಗೆ ಪ್ರತ್ಯೇಕ, ಯುವಕರಿಗೆ ಪ್ರತ್ಯೇಕವಾಗಿ ಹೋಳಿ ಆಚರಣೆಗೆ ಅವಕಾಶ ಕಲ್ಪಿಸಿ, ಮಧ್ಯೆದಲ್ಲಿ ಬ್ಯಾರಿಕೇಡ್ ಹಾಕಿ, ಅಲ್ಲಿ ವಿಶೇಷವಾಗಿ ಕಾವಲಿನ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಯುವಕ ಯುವತಿಯರು ಹಬ್ಬದ ಸಂಭ್ರಮದಲ್ಲಿ ಮಿಂದೆದ್ದರು. ಬಣ್ಣದ ಓಕುಳಿಯ ಜೊತೆ ನೀರಿನ ಟ್ಯಾಂಕರ್​ನ ಮೂಲಕ ಕೃತಕ ಮಳೆ ಸುರಿಸಿದ್ದು, ಯುವ ಸಮುದಾಯದ ಸಂಭ್ರಮಕ್ಕೆ ಇನ್ನಷ್ಟು ಕಳೆಕೊಟ್ಟಿತ್ತು. ಬೀಟ್ಸ್ ಸಾಂಗ್​ಗಳಿಗೆ ಮನಸ್ಸೋ ಇಚ್ಚೆ ಕುಣಿದ ಜನರು, ಆಗಾಗ ಕೇಳಿಬರುತ್ತಿದ್ದ ಭಜರಂಗಿ…ಭಜರಂಗಿ ಹಾಡಿಗೂ ಬಿಂದಾಸ್ ಆಗಿ ಕುಣಿದರು. ಅಲ್ಲದೆ ಹಿಂದೂ ಪರ ಘೋಷಣೆಗಳನ್ನು ಕೂಗಿದರು. 

READ | powercut | ಶಿವಮೊಗ್ಗ ನಾಗರಿಕರ ಗಮನಕ್ಕೆ ಮಾರ್ಚ್​ 9 ಕ್ಕೆ ಈ ಭಾಗಗಳಲ್ಲಿ ಇರೋದಿಲ್ಲ ವಿದ್ಯುತ್

ಇನ್ನು ಶಿವಮೊಗ್ಗವಷ್ಟೆ ಅಲ್ಲದೆ ಶಿವಮೊಗ್ಗ ಜಿಲ್ಲೆಯ ತಾಲ್ಲೂಕುಗಳಲ್ಲಿಯು ಹೋಳಿ ಸಂಭ್ರಮ ಜೋರಾಗಿತ್ತು. ಅತ್ತ ಸಾಗರ ತಾಲ್ಲೂಕಿನಲ್ಲಿ ಮಹಿಳೆಯರು ಕೂಡ ರಂಗು  ರಂಗಿನ ಬಣ್ಣಗಳೊಂದಿಗೆ ಸಂಭ್ರಮಿಸಿದ್ದಾರೆ  ಪರಸ್ಪರ ಸ್ನೇಹಿತರು ಸಂಭ್ರಮದೊಂದಿಗೆ ಬಣ್ಣ ಬಣ್ಣ ಹಚ್ಚುತ್ತ ಹಚ್ಚಿಸಿಕೊಳ್ಳುತ್ತಾ ಅದರ ಸೆಲ್ಪಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು. ಇನ್ನೂ ಸಾಗರದ 8ನೇ ವಾರ್ಡ್ ಶ್ರೀನಗರದಲ್ಲಿ ಸಂಭ್ರಮದ ಹೋಳಿ ಹಬ್ಬ ಆಚರಣೆಯ ದೃಶ್ಯವೂ ಸಹ ಇಲ್ಲಿದೆ ನೋಡಿ

Malenadu Today Shivamogga

Malenadu Today Shivamogga

BREAKING NEWS | ಶಿವಮೊಗ್ಗಕ್ಕೆ ಮತ್ತೆ ಎನ್​ಐಎ ಟೀಂ ಎಂಟ್ರಿ! ಕಾರಣವೇನು? ಜಬಿ ಮತ್ತು ಶಾರೀಖ್​ ನನ್ನ ಜಿಲ್ಲೆಗೆ ಕರೆದುಕೊಂಡು ಬಂದಿದ್ರಾ?

 ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor