ಜಿಲ್ಲಾಡಳಿತಕ್ಕೆ ಮಹತ್ವದ ಮನವಿ ನೀಡಿದ ಶಿವಮೊಗ್ಗ ಆಟೋ ಚಾಲಕರು! ಏನಿದು ವಿಚಾರ?

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Sep 5, 2023 SHIVAMOGGA NEWS 

ಆಟೋ ಚಾಲಕರು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ (Shimoga District Collector’s Office) ಎದುರು ಪ್ರತಿಭಟನೆ ನಡೆಸಿದ್ದಾರೆ. ಆಟೋ ಓಡಿಸಲು ಪರವಾನಿಗೆ ನೀಡುವಂತೆ ಈ ವೇಳೆ ಆಗ್ರಹಿಸಿದ್ದಾರೆ. 

ಶಿವಮೊಗ್ಗ ನಗರದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ (Regional Transport Officers) ಹೊಸ ಆಟೋ ರಿಕ್ಷಾಗಳಿಗೆ ನೋಂದಣಿ ಮಾಡುತ್ತಾರೆ. ಆದರೆ ಅದೇ ಹೊಸ ಆಟೋವನ್ನು ಶಿವಮೊಗ್ಗ ನಗರದಲ್ಲಿ ಓಡಿಸಲು ಪರವಾನಿಗೆ ನೀಡುತ್ತಿಲ್ಲ. 

ಹೀಗಾಗಿ  ಆಟೋ ರಿಕ್ಷಾ ಖರೀದಿ ಮಾಡಿದವರು, ಆಟೋ ಇದ್ದರೂ ಅದನ್ನು ಓಡಿಸಲಾಗದೇ ಕಷ್ಟವಾಗ್ತಿದೆ ಎಂದು ಪ್ರತಿಭಟನಾಕಾರರು ತಮ್ಮ ಅಳಲು ತೋಡಿಕೊಂಡಿದ್ದದಾರೆ. 

ಶಿವಮೊಗ್ಗ ನಗರದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಪರವಾನಿಗೆ ಇಲ್ಲದ ಆಟೋಗಳಿವೆ, ಲೈಸೆನ್ಸ್​ ಇಲ್ಲದೇ ಆಟೋ ಓಡಿಸುವುದು ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತಿವೆ.

ಈ ಬಗ್ಗೆ  ಸಾರಿಗೆ ಅಧಿಕಾರಿಗಳು  ಮನವಿಗೆ ಸ್ಪಂದಿಸಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು, ಈ ಸಂಬಂಧ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ರು  


   

ಇನ್ನಷ್ಟು ಸುದ್ದಿಗಳು 


 

 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor