KARNATAKA NEWS/ ONLINE / Malenadu today/ Sep 5, 2023 SHIVAMOGGA NEWS
ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನ (Balehonnur) ಬಸವನಕೋಟೆ ಮೀಸಲು ಅರಣ್ಯದಲ್ಲಿ ಸಾಗುವಾನಿ ಮರ ಕಡಿದಿದ್ದ ಆರೋಪಿಗಳನ್ನ ಅರಣ್ಯ ಇಲಾಖೆ ಬಂಧಿಸಿದೆ.
ಅಂಡವಾನೆಯ ಎ.ಎನ್.ಆರ್ಥೇಶ್, ಹುಯಿಗೆರೆ ಗ್ರಾಮದ ಎ.ಆರ್.ಪ್ರದೀಪ್, ಎ.ಎಲ್.ಮಂಜುನಾಥ್, ಕೆ.ಜಿ.ಧರ್ಮಪ್ಪ ಬಂಧಿತ ಆರೋಪಿಗಳಾಗಿದ್ದಾರೆ.
ಆರ್ಥೇಶ್, ಪ್ರದೀಪ್, ಮಂಜುನಾಥ್ ಸಾಗುವಾನಿ ನಡುತೋಪಿನಲ್ಲಿದ್ದ ಸಾಗುವಾನಿ ಮರ ಕಡಿದು ದಿಮ್ಮಿಗಳನ್ನಾಗಿ ಪರಿವರ್ತಿಸಿ ಸಾಗಿಸಲು ಸಿದ್ದತೆ ನಡೆಸಿದ್ದರು. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಈ ಮರವನ್ನು ಧರ್ಮಪ್ಪ ಎಂಬವರಿಗೆ ಮಾರಲು ಮುಂದಾಗಿದ್ದರು.
8 ಸಾಗುವಾನಿ ಮರದ ದಿಮ್ಮಿ ಹಾಗೂ ಮರ ಕಡಿಯಲು ಬಳಸಿದ ಪರಿಕರಗಳನ್ನ ಜಪ್ತಿ ಮಾಡಿರುವ ಅರಣ್ಯ ಇಲಾಖೆ, ನಾಲ್ವರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಇನ್ನಷ್ಟು ಸುದ್ದಿಗಳು
ಬಾರ್ನಲ್ಲಿ ಎಣ್ಣೆ ಕೊಡ್ಲಿಲ್ಲ ಎಂದು ಸಿಬ್ಬಂದಿಯನ್ನ ಅಟ್ಟಾಡಿಸಿ ಹಲ್ಲೆ! ಬಿಹೆಚ್ ರೋಡ್ನಲ್ಲಿ ನಿನ್ನೆ ನಡೆದಿದ್ದೇನು?
ಸಚಿವರ ಶಾಕ್/ 48 ಗಂಟೆಯಲ್ಲಿ ಬದಲಾಯ್ತು ಶಿವಮೊಗ್ಗ AIRPORT ನಲ್ಲಿದ್ದ ಈ ವ್ಯವಸ್ಥೆ!