ಶಿವಮೊಗ್ಗ : ಪೇಸ್ಬುಕ್ ಅಡ್ವರ್ಟೈಸ್​​ ನೋಡಿ, ಪೆನ್ಷನ್​ ಮಾಹಿತಿ ನೀಡಿದ ನಿವೃತ್ತ ಬ್ಯಾಂಕ್​ ಉದ್ಯೋಗಿ ಕಳೆದುಕೊಂಡಿದ್ದೆಷ್ಟು ಲಕ್ಷ ?

ಹಂಚಿಕೊಳ್ಳಿ
WhatsApp Facebook X Telegram
CEN police station ಶಿವಮೊಗ್ಗ
CEN police station ಶಿವಮೊಗ್ಗ

ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ ; ಫೇಸ್ಬುಕ್‌ನಲ್ಲಿ ಬಂದಿದ್ದ ಅಡ್ವರ್ಟೈಸ್‌ನನ್ನು ನಂಬಿ ನಿವೃತ್ತ ಬ್ಯಾಂಕ್ ನೌಕರರೊಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ವರದಿಯಾಗಿದೆ.

ಘಟನೆಯ ವಿವರ

ದೂರುದಾರ ನೌಕರರು ಫೇಸ್ಬುಕ್ ನೋಡ್ತಿದ್ದಾಗ citizen retire government employees card ಎಂಬ ಅಡ್ವರ್ಟೈಸ್ ಕಾಣಿಸಿದೆ. ಅದರಲ್ಲಿ ಪೆನ್ಷನ್ ಬಗ್ಗೆ ಮಾಹಿತಿ ತುಂಬಿದ್ದಾರೆ. ತುಂಬಿದ್ದೇ ತಡ ಆ ಕಡೆಯಿಂದ ವಂಚಕರಿಂದ ಫೋನ್ ಬಂದಿದೆ. ಫೋನ್ ಸ್ವೀಕರಿಸಿದ ದೂರುದಾರರಿಗೆ ವಂಚಕರು ನಾವು ಕೆನರಾ ಬ್ಯಾಂಕ್‌ನವರೆಂದು ಪರಿಚಯಿಸಿಕೊಂಡಿದ್ದಾರೆ. ನಂತರ ಲೈಫ್‌ ಸರ್ಟಿಫಿಕೇಟ್ ಬೇಕೆಂದು ದೂರುದಾರರ ಕಸ್ಟಮರ್ ಐಡಿ, ಹೆಸರು, ಜನ್ಮದಿನಾಂಕ, ಎಟಿಎಂ ಕಾರ್ಡ್ ಸಂಖ್ಯೆ ಹಾಗೂ ಪಿನ್ ನಂಬರ್‌ಗಳನ್ನು ಪಡೆದುಕೊಂಡಿದ್ದಾರೆ.

ಇದಾದ ಕೆಲವೇ ಕ್ಷಣಗಳಲ್ಲಿ ದೂರುದಾರರ ಖಾತೆಯಿಂದ ಹಂತ ಹಂತವಾಗಿ 2,29,000/- ರೂ. ಹಣ ಕಡಿತಗೊಂಡಿದೆ. ಇದರಿಂದ ಗಲಿಬಿಲಿಗೊಂಡ ದೂರುದಾರರು, ಕೂಡಲೇ ಹಣ ವಂಚಿಸಿದವರನ್ನು ಪತ್ತೆ ಹಚ್ಚಿ ಕೊಡಬೇಕೆಂದು ಶಿವಮೊಗ್ಗದ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor