ಬುರ್ಖಾ ಹಾಕ್ಕೊಂಡು ಕೊಲೆಗೆ ಯತ್ನ ನಡೀತಾ! ಕೆಆರ್​ ಪುರಂ ರೋಡಲ್ಲಿ ನಡೆದಿದ್ದರ FIR ಡಿಟೇಲ್ಸ್!

ಹಂಚಿಕೊಳ್ಳಿ
WhatsApp Facebook X Telegram
Burqa-Clad Men Attempt Shivamogga KR Puram FIR details

Shivamogga KR Puram / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ನಗರದ ಕೆ.ಆರ್. ಪುರಂ ರಸ್ತೆಯಲ್ಲಿರುವ (Shivamogga KR Puram ) ರಿಜ್ವಾನ್ ಮಸೀದಿ ಸಮೀಪ ಮಹಿಳೆಯರಂತೆ ಬುರ್ಖಾ ಧರಿಸಿ ಬಂದ ಯುವಕರ ಪ್ರಕರಣ ಸಂಬಂಧ ಇದೀಗ ಎಫ್​ಐಆರ್ ದಾಖಲಾಗಿದೆ. ಕುತೂಹಲ ಕೆರಳಿಸಿದ್ದ ಹಾಗೂ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದ ಕೇಸ್​ನಲ್ಲಿ ಸ್ಥಳೀಯ ಮಹಿಳೆಯೊಬ್ಬರನ್ನು ಕೊಲೆ ಮಾಡಲು ಯತ್ನಿಸಿದ ಬಗ್ಗೆ ವರದಿಯಾಗಿದೆ. ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದ್ದು, ಎಫ್​ಐಆರ್​ನಲ್ಲಿರುವಂತೆ ನಡೆದ ಘಟನೆ ವಿವರ ಹೀಗಿದೆ.

ಇಲ್ಲಿನ ಮಸೀದಿ ಬಳಿ ವಾಸವಾಗಿರುವ ಮಹಿಳೆಯೊಬ್ಬರ ಪತಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ. ಈ ಮಧ್ಯೆ ಜಾಮೀನಿನ ಮೇಲೆ ಹೊರಬಂದಿದ್ದ ಆತ ಪತ್ನಿಗೆ ಬೆದರಿಕೆ ಹಾಕುತ್ತಿದ್ದನಂತೆ. ಇದರ ನಡುವೆ ಆತ ಪುನಃ ವಾರಂಟ್ ಮೇರೆಗೆ ಜೈಲಿಗೆ ಹೋಗಿದ್ದಾನೆ. ಹಿಗಿದ್ದಾಗ ಈ ಘಟನೆ ನಡೆದಿದೆ.

ದಿನಾಂಕ 10/06/2026 ರಂದು ಮಧ್ಯಾಹ್ನ ಸಂತ್ರಸ್ತೆ ಮನೆಯಲ್ಲಿದ್ದಾಗೆ, ಅವರ ಮನೆಗೆ ಬುರ್ಖಾ ಧರಿಸಿಕೊಂಡು ಬಂದ ಯುವಕರು ಚಾಕುಗಳಿಂದ ಮಹಿಳೆ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯಿಂದ ಕಂಗಾಲಾದ ಮಹಿಳೆ ಹಾಗೂ ಅವರ ತಾಯಿ ಜೋರಾಗಿ ಕೂಗಿಕೊಂಡಿದ್ದಾರೆ. ಕೂಗಾಟವನ್ನು ಕೇಳಿ ದುಷ್ಕರ್ಮಿಗಳು ಅಲ್ಲಿಂದ ಓಡಿ ಹೋಗಲು ಮುಂದಾಗಿದ್ದಾರೆ. ಅವರನ್ನ ಹಿಂಬಾಲಿಸಿದ ಸಂತ್ರಸ್ತೆ ಕೂಗುತ್ತಾ ರೋಡಿಗೆ ಬಂದಿದ್ದಾರೆ. ಇದನ್ನ ಗಮನಿಸಿದ ಸ್ಥಳೀಯರು ಮಕ್ಕಳ ಕಳ್ಳರಿರಬೇಕು ಎಂದು ಭಾವಿಸಿ ಅವರಿಗೆ ಆರೋಪಿಗಳನ್ನ ಹಿಡಿದು ಥಳಿಸಿದ್ದಾರೆ. ಬಳಿಕ ವಿಚಾರಿಸಿದಾಗ ಆರೋಪಿಗಳು ತಾವು ಮಕ್ಕಳ ಕಳ್ಳರಲ್ಲ ಅಣ್ಣ ತನ್ನ ಹೆಂಡತಿಯನ್ನು ಕೊಲೆ ಮಾಡಲು ಸುಪಾರಿ ನೀಡಿದ್ದಾರೆ. ಅದಕ್ಕೆ ಬಂದಿದ್ದೇವೆ ಎಂದಿದ್ದಾರೆ. ಅನುಮಾನ ಬಾರದಿರಲಿ ಅಂತಾ ಬುರ್ಖಾ ಧರಿಸಿ ಬಂದಿದ್ದಾಗಿ ಒಪ್ಪಿಕೊಂಡಿದ್ದರು.

ಈ ಘಟನೆ ಸಂಬಂಧ ಸಂತ್ರಸ್ತೆ ನೀಡಿರುವ ದೂರಿನನ್ವಯ ದೊಡ್ಡಪೇಟೆ ಪೊಲೀಸರು (BNS) 2023 109(1), 329(4), 351(2), 54, ಹಾಗೂ 3(5) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೊಮ್ಮನಕಟ್ಟೆ ನಿವಾಸಿಗಳಾದ ದರ್ಶನ್ (ಎ1), ಮಹೇಶ್ (ಎ2), ಅಸ್ಲಾಂ (ಎ3), ಮುನ್ನಾ (ಎ4) ಪ್ರಕರಣದ ಆರೋಪಿಗಳಾಗಿದ್ದಾರೆ.

Whatsapp / https://chat.whatsapp.com/JrsZ8He4nN600n0r3tJItz

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor