ಸಿಂಗಲ್ ಅಟೆಂಪ್ಟ್​ನಲ್ಲಿಯೇ ಸಿಕ್ಕಿಬಿದ್ದ ! ಸಿಪಿಐ ಸಂತೋಷ್ ಪಾಟೀಲ್ & ಟೀಂನ ಆಪರೇಷನ್​ ಕಳ್ಳ ಸಕ್ಸಸ್​!

ಹಂಚಿಕೊಳ್ಳಿ
WhatsApp Facebook X Telegram
Shikaripura Police Solve House Burglary Case Accused Arrested

Shikaripura Police / ಮಲೆನಾಡು ಟುಡೆ ಸುದ್ದಿ / ಶಿಕಾರಿಪುರ / ಪಟ್ಟಣದ ಅರಸುನಗರದಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣವನ್ನು ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆಯ ಸಿಬ್ಬಂದಿ ಯಶಸ್ವಿಯಾಗಿ ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿರುವ ತನಿಖಾ ತಂಡ, ಕಳುವಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದು ಹಣವನ್ನು ವಶಪಡಿಸಿಕೊಳ್ಳುವಲ್ಲಿ ಸಫಲವಾಗಿದೆ.

ನಡೆದಿದ್ದೇನು?

ಶಿಕಾರಿಪುರ ಪಟ್ಟಣದ ಅರಸುನಗರ 02ನೇ ಕ್ರಾಸ್ ನಿವಾಸಿ ಗೌರಮ್ಮ ಎಂಬುವವರ ಮನೆಯಲ್ಲಿ ಜೂನ್ 04, 2026 ರಂದು ಕಳ್ಳತನವಾಗಿತ್ತು. ಮನೆಗೆ ನುಗ್ಗಿ, ಗಾಡ್ರೇಜ್ ಬೀರುವಿನಲ್ಲಿರಿಸಿದ್ದ ವಸ್ತುಗಳನ್ನು ಕಳ್ಳರು ದೋಚಿದ್ದರು. ಒಟ್ಟು 28 ಗ್ರಾಂ ತೂಕದ 3,14,400 ರೂಪಾಯಿ ಮೌಲ್ಯದ ಬಂಗಾರದ ಆಭರಣಗಳು, 134 ಗ್ರಾಂ ತೂಕದ 26,800 ರೂಪಾಯಿ ಬೆಲೆಯ ಬೆಳ್ಳಿಯ ವಸ್ತುಗಳು ಹಾಗೂ 02 ಲಕ್ಷ ರೂಪಾಯಿ ನಗದು ಹಣ ಕಳವಾಗಿತ್ತು. ಈ ಕುರಿತು ಕಲಂ 305 (ಎ) 331(3) ಬಿ.ಎನ್.ಎಸ್ ಅಡಿಯಲ್ಲಿ ಕೇಸ್ ಆಗಿತ್ತು.

ಪ್ರಕರಣ ಪತ್ತೆಗೆ ವಿಶೇಷ ತನಿಖಾ ತಂಡ

ಪ್ರಕರಣದ ಪತ್ತೆಗಾಗಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಈ ಟೀಂನಲ್ಲಿ (Shikaripura Police) ಶಿಕಾರಿಪುರ ನಗರ ವೃತ್ತ ಸಿಪಿಐ ಸಂತೋಷ್ ಎಂ. ಪಾಟೀಲ್. ಶಿಕಾರಿಪುರ ಪಟ್ಟಣ ಠಾಣೆಯ ಪಿಎಸ್ಐ ಶರತ್ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳಾದ ಹೆಚ್.ಸಿ ಸಂತೋಷ್ ಕುಮಾರ್, ಪಿ.ಸಿ ಶಿವಾಜಿ ರಾವ್ ಎನ್, ಪಿ.ಸಿ ಗಿರೀಶ್ ನಾಯ್ಕ ಎನ್, ಪಿ.ಸಿ ಬಸವರಾಜ್ ಟಿ, ಎಹೆಚ್ಸಿ-ಕೃಷ್ಣಪ್ಪ, ಎಹೆಚ್ಸಿ-ಆದರ್ಶ ರವರಿದ್ದರು.

ಸದ್ಯ ಈ ವಿಶೇಷ ತಂಡ ಪ್ರಕರಣ ಸಂಬಂಧ ಶಿಕಾರಿಪುರ ಪಟ್ಟಣದ ಮಾಸೂರು ರಸ್ತೆಯ ಸೊಪ್ಪಿನಕೇರಿ ನಿವಾಸಿ 47 ವರ್ಷದ ಅಮಿತ್ ಎಂಬಾತನನ್ನು ದಸ್ತಗಿರಿ ಮಾಡಿದೆ. ಬಂಧಿತ ಆರೋಪಿಯಿಂದ ಕಳುವಾಗಿದ್ದ 3,14,400 ರೂಪಾಯಿ ಮೌಲ್ಯದ 28 ಗ್ರಾಂ ತೂಕದ ಬಂಗಾರದ ಆಭರಣಗಳು, 26,800 ರೂಪಾಯಿ ಬೆಲೆಯ 134 ಗ್ರಾಂ ತೂಕದ ಬೆಳ್ಳಿಯ ವಸ್ತುಗಳು ಹಾಗೂ 02 ಲಕ್ಷ ರೂಪಾಯಿ ನಗದು ಹಣವನ್ನು ಸಂಪೂರ್ಣವಾಗಿ ಅಮಾನತ್ತುಪಡಿಸಿಕೊಳ್ಳಲಾಗಿದೆ.

Whatsapp / https://chat.whatsapp.com/JrsZ8He4nN600n0r3tJItz

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor