ಮಲೆನಾಡು ಟುಡೆ ಸುದ್ದಿ / ಹೊನ್ನಾಳಿ : ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ನೆಗಳೂರು ಗ್ರಾಮದ ಕೋಡತಾಳು ಹಳ್ಳಿಯ ಸ್ವಾಮಿ ವಿಶ್ವನಾಥ್ ಎಂಬುವರ ಮನೆಯ ಸಮೀಪ ಬೃಹತ್ ಗಾತ್ರದ ಹೆಬ್ಬಾವೊಂದು ಪ್ರತ್ಯಕ್ಷವಾಗಿದ್ದು, ಅದನ್ನು ಉರಗ ರಕ್ಷಕ ಸ್ನೇಕ್ ಕಿರಣ್ ರಕ್ಷಿಸಿದ್ದಾರೆ
ವಿಶ್ವನಾಥ್ ಅವರ ಮನೆಯ ಬಳಿಯಿದ್ದ ಕಲ್ಲಿನ ರಾಶಿಯ ಅಡಿಯಲ್ಲಿ ಸುಮಾರು 9 ಅಡಿ ಉದ್ದ ಹಾಗೂ 16 ಕೆಜಿ ತೂಕದ ಬೃಹತ್ ಹೆಬ್ಬಾವು ಅಡಗಿ ಕುಳಿತಿರುವುದು ಕಂಡುಬಂದಿದೆ. ಇದರಿಂದ ಗಾಬರಿಗೊಂಡ ಗ್ರಾಮಸ್ಥರು ತಕ್ಷಣವೇ ಉರಗ ರಕ್ಷಕ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಸ್ನೇಕ್ ಕಿರಣ್ ಅವರು ಗ್ರಾಮಸ್ಥರ ನೆರವಿನಿಂದ ಸತತ ಪ್ರಯತ್ನ ನಡೆಸಿ, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾದರು.
ಬಳಿಕ, ಸೆರೆಹಿಡಿದ ಬೃಹತ್ ಹೆಬ್ಬಾವನ್ನು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ (ನ್ಯಾಪ್ತಿ ಶಾಖೆ) ಡೆಪ್ಯೂಟಿ ಆರ್‌ಎಫ್‌ಒ ಶಿವಕುಮಾರ್ ಅವರ ಸೂಚನೆಯಂತೆ, ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಅರಣ್ಯ ಇಲಾಖೆಯ ಸಿಬ್ಬಂದಿಗೆ ಹಸ್ತಾಂತರಿಸಲಾಯಿತು.
