ಶಿವಮೊಗ್ಗ : ಸಕ್ರೆಬೈಲು ಆನೆ ಬಿಡಾರ ಶೀಘ್ರದಲ್ಲೇ ಪ್ರವಾಸಿಗರಿಗೆ ಮುಕ್ತ ?

ಹಂಚಿಕೊಳ್ಳಿ
WhatsApp Facebook X Telegram
ಶಿವಮೊಗ್ಗದ ಸಕ್ರೆಬೈಲ್__ ಆನೆ ಬಿಡಾರದ ಚಿತ್ರ
ಶಿವಮೊಗ್ಗದ ಸಕ್ರೆಬೈಲ್__ ಆನೆ ಬಿಡಾರದ ಚಿತ್ರ

ಮಲೆನಾಡು ಟುಡೆ ಸುದ್ದಿ /  ಶಿವಮೊಗ್ಗ ; ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಈ ಹಿಂದೆ ಪ್ರವಾಸಿ ಮಹಿಳೆ ಆನೆ ದಾಳಿಯಲ್ಲಿ ಸಾವನ್ನಪ್ಪಿದ ನಂತರ ರಾಜ್ಯದಲ್ಲಿ ಬಂದ್​ ಆಗಿದ್ದ ಬಹುತೇಕ ಆನೆ ಬಿಡಾರಗಳು ಶೀಘ್ರದಲ್ಲೇ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಲಿದೆ. ಈಗಾಗಲೇ ಸರ್ಕಾರ ಸೂಚಿಸಿದ ಎಸ್​ ಒ ಪಿ ನಿಯಮಗಳನ್ನು ಜಾರಿಗೆ ತಂದು ಮತ್ತಿಗೋಡು ಹಾಗೆಯೇ ಹಾರಂಗಿ ಶಿಬಿರಗಳು ಪ್ರವಾಸಿಗರಿಗೆ ಮುಕ್ತವಾಗಿದ್ದು ಇನ್ನೇನು ಶೀಘ್ರದಲ್ಲೇ ಸಕ್ರೇಬೈಲು ಆನೆಬಿಡಾರ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಲಿದೆ ಎಂಬ  ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿ.

ಹೌದು ಈ ಹಿಂದೆ ಅಂದರೆ ಮೇ 18 2026 ರಂದು  ಕೊಡಗು ದುಬಾರೆ ಶಿಬಿರದಲ್ಲಿ ಸಾಕಾನೆಗಳ ಜಗಳದಿಂದ ಮದ್ಯ ಸಿಲುಕಿದ ಚೆನ್ನೈ ಮೂಲದ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಆನೆ ಬಿಡಾರಗಳಿಗೂ ಎಸ್​ ಓ ಪಿ ನಿಯಮಗಳನ್ನು ಜಾರಿಗೊಳಿಸುವಂತೆ ಆದೇಶವನ್ನು ನೀಡಿತತ್ತು. ಅಷ್ಟೇ ಅಲ್ಲದೆ ಎಸ್​ ಓ ಪಿ  ನಿಯಮಗಳನ್ನು ಜಾರಿಗೆ ತರುವವರೆಗೂ ಆನೆ ಬಿಡಾರಕ್ಕೆ ಪ್ರವಾಸಿಗರ ವೀಕ್ಷಣೆಗೆ ನಿರ್ಭಂದವನ್ನು ಹೇರಿತ್ತು. ಈ ಹಿನ್ನೆಲೆ ಕಳೆದ 3 ತಿಂಗಳುಗಳಿಂದ ವಿವಿಧ ಆನೇ ಬಿಡಾರಗಳು ಎಸ್​ಓ ಪಿ ನಿಯಮಗಳನ್ನು ಅಳವಡಿಸಿಕೊಳ್ಳುವಲ್ಲಿ ಕಾರ್ಯನಿರತವಾಗಿದ್ದವು, ಇದೀಗ ಮತ್ತಿಗೋಡು ಹಾಗೂ ಹಾರಂಗಿ ಆನೆ ಬಿಡರದಲ್ಲಿ ಸೂಕ್ತವಾದಂತಹ ಎಸ್​ ಓ ಪಿ ನಿಯಮಗಳು ಜಾರಿಗೆ ತಂದು ಶಿಬಿರವನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತಮಾಡಿದ್ದು ಅದೇ ಹಾದಿಯಲ್ಲಿ ಸಕ್ರೆಬೈಲ್​​ ಆನೆ ಬಿಡಾರ ಸಹ ಮುಂದುವರೆದಿದೆ.

ಯಾವಾಗ ಓಪನ್​ ಆಗುತ್ತೆ ಸಕ್ರೆಬೈಲ್​ ಆನೆ ಬಿಡಾರ ? 

ಸಕ್ರೆಬೈಲ್​  ಆನೆ ಬಿಡಾರ ಬಂದ್​ ಆಗಿ ಸರಿ ಸುಮಾರು 3 ತಿಂಗಳುಗಳೇ ಕಳೆದಿವೆ.ಈ ಹಿನ್ನೆಲೆ ಸರ್ಕಾರ ಸೂಚಿಸಿದ ಎಸ್​ ಓ ಪಿ ನಿಯಮಗಳನ್ನು ಜಾರಿಗೆ ತರುಲು ಸಿಬ್ಬಂದಿಗಳು ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಸಿಸಿ ಟಿವಿ ಅಳವಡಿಕೆ ಸೇರಿದಂತೆ ಬ್ಯಾರಿಗೇಡ್​​​ ಅಳವಡಿಕೆಗಳ ಕಾರ್ಯಗಳು ಬಹುತೇಕ ಮುಗಿದಿದ್ದು, ಇನ್ನೇನು ಕೆಲವೇ ದಿನಗಳಲ್ಲಿ  ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಲಿದೆ ಎಂಬ ವಿಚಾರ  ಕೆಲವು ಖಾಸಗಿ ಮೂಲಗಳಿಂದ ತಿಳಿದುಬಂದಿದೆ.

ಏನಿದು ಎಸ್​ ಒ ಪಿ ನಿಯಮ 

1 . ನೇರ ಸಂಪರ್ಕ ಹಾಗೂ ಸ್ಪರ್ಶಕ್ಕೆ ನಿಷೇಧ

  • ಆನೆಗಳನ್ನು ಮುಟ್ಟುವುದು, ಅಪ್ಪಿಕೊಳ್ಳುವುದು ಅಥವಾ ಹತ್ತಿರದಲ್ಲಿ ನಿಂತು ಸೆಲ್ಫಿ/ಫೋಟೋ ತೆಗೆದುಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
  • ಪ್ರವಾಸಿಗರು ಆನೆಗಳಿಗೆ ನೇರವಾಗಿ ಕೈಯಿಂದ ಬಾಳೆಹಣ್ಣು, ಬೆಲ್ಲ, ಕಬ್ಬು ಮುಂತಾದ ಆಹಾರ ನೀಡುವುದನ್ನು ತಡೆಯಲಾಗಿದೆ.
  • ಪ್ರವಾಸಿಗರು ನದಿ ಅಥವಾ ಆನೆಗಳ ಸ್ನಾನದ ಸ್ಥಳಕ್ಕೆ ಇಳಿಯುವಂತಿಲ್ಲ; ಸ್ನಾನ ಮಾಡಿಸುವ ಹೈ-ರಿಸ್ಕ್ (ಅಪಾಯಕಾರಿ) ಚಟುವಟಿಕೆಗಳಲ್ಲಿ ಪ್ರವಾಸಿಗರಿಗೆ ಪ್ರವೇಶವಿಲ್ಲ. [

2. ವಲಯಗಳ ವಿಂಗಡಣೆ 

ಆನೆ ಶಿಬಿರಗಳನ್ನು ಮೂರು ವಿಧದ ವಲಯಗಳಾಗಿ ವಿಂಗಡಿಸಲಾಗಿದೆ: 

  • ಗ್ರೀನ್ ವಲಯ (Green Zone): ಪ್ರವಾಸಿಗರು ಬ್ಯಾರಿಕೇಡ್‌ಗಳ ಹಿಂದೆ ನಿಂತು ಆನೆಗಳನ್ನು ವೀಕ್ಷಿಸಲು ಮಾತ್ರ ಮೀಸಲಾದ ಸುರಕ್ಷಿತ ವಲಯ.
  • ಅಂಬರ್ ವಲಯ (Amber Zone): ಅಧಿಕೃತ ಸಿಬ್ಬಂದಿ ಹಾಗೂ ತುರ್ತು ಸೇವಾ ಸಿಬ್ಬಂದಿಗೆ ಮಾತ್ರ ಪ್ರವೇಶವಿರುವ ನಿಯಂತ್ರಿತ ಮಾರ್ಗ.
  • ರೆಡ್ ವಲಯ (Red Zone): ಆನೆಗಳು ವಾಸಿಸುವ, ಆಹಾರ ಸೇವಿಸುವ ಹಾಗೂ ಸ್ನಾನ ಮಾಡುವ ಕಾರ್ಯಾಚರಣಾ ಸ್ಥಳ. ಇಲ್ಲಿ ಮಾವುತರು, ಕಾವಡಿಗರು ಮತ್ತು ಪಶುವೈದ್ಯರಿಗೆ ಮಾತ್ರ ಪ್ರವೇಶವಿರುತ್ತದೆ. 

3. ಕನಿಷ್ಠ ಅಂತರ ಮತ್ತು ಸಮಯದ ಮಿತಿ

  • ಆನೆಗಳಿಂದ ಪ್ರವಾಸಿಗರು ಕನಿಷ್ಠ 30 ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು.
  • ಒಂದೇ ಸಮಯದಲ್ಲಿ ಗ್ರೀನ್ ವಲಯದಲ್ಲಿ ೫೦ ರಿಂದ ೭೫ ಪ್ರವಾಸಿಗರಿಗೆ ಮಾತ್ರ ಅವಕಾಶವಿರುತ್ತದೆ. ಪ್ರತಿ ಬ್ಯಾಚ್‌ ಪ್ರವಾಸಿಗರಿಗೆ ೪೫ ರಿಂದ ೬೦ ನಿಮಿಷಗಳ ವೀಕ್ಷಣೆ ಮತ್ತು ಸುರಕ್ಷತಾ ಮಾರ್ಗದರ್ಶನದ ಸಮಯ ನಿಗದಿಪಡಿಸಲಾಗಿದೆ. [1, 2]

4. ಆನೆಗಳ ಆರೋಗ್ಯ ಮತ್ತು ಪ್ರದರ್ಶನದ ಮಿತಿ

  • ಮಸ್ತದಲ್ಲಿದ್ದ (ಮದವೇರಿದ್ದ), ಆಕ್ರಮಣಕಾರಿ ಸ್ವಭಾವದ, ಗಾಯಗೊಂಡ ಅಥವಾ ಅನಾರೋಗ್ಯಪೂರಿತ ಆನೆಗಳನ್ನು ಸಾರ್ವಜನಿಕ ಪ್ರದರ್ಶನದಿಂದ ದೂರವಿಡಲಾಗುತ್ತದೆ.
  • ಸಾರ್ವಜನಿಕ ವೀಕ್ಷಣೆಗೆ ಏಕಕಾಲದಲ್ಲಿ ಗರಿಷ್ಠ 10 ಆನೆಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಪ್ರತಿ ದಿನ ಆನೆಗಳ ಆರೋಗ್ಯ ಹಾಗೂ ವರ್ತನೆಯನ್ನು ಪರೀಕ್ಷಿಸಿ ನಂತರವೇ ಪ್ರದರ್ಶನಕ್ಕೆ ಬಿಡಲಾಗುತ್ತದೆ.

5. ಇತರೆ ಪ್ರಮುಖ ನಿಯಮಗಳು

  • ಆನೆಗಳಿಗೆ ವಿಶ್ರಾಂತಿ ಹಾಗೂ ಬಿಡಾರದ ನಿರ್ವಹಣೆಗಾಗಿ ವಾರದಲ್ಲಿ ಒಂದು ದಿನ (ಸಾಮಾನ್ಯವಾಗಿ ಮಂಗಳವಾರ) ಸಾರ್ವಜನಿಕ ಪ್ರವೇಶಕ್ಕೆ ಬಿಡಾರದಲ್ಲಿ ರಜೆ ಇರುತ್ತದೆ.
  • ಪ್ರಮುಖ ಪ್ರದೇಶಗಳಲ್ಲಿ ಸಿಸಿಟಿವಿ (CCTV) ಕಣ್ಗಾವಲು ಹಾಗೂ ತುರ್ತು ಚಿಕಿತ್ಸೆ, ಪ್ರಥಮ ಚಿಕಿತ್ಸಾ ಸಾಮಾಗ್ರಿಗಳು ಮತ್ತು ಆಂಬ್ಯುಲೆನ್ಸ್ ವ್ಯವಸ್ಥೆ ಕಡ್ಡಾಯಗೊಳಿಸಲಾಗಿದೆ.

ಇದೀಗ ಸಕ್ರೆಬೈಲ್​​​ನ ಆನೆ ಬಿಡಾರದಲ್ಲಿಯೂ ಸಹ ಎಸ್​​ ಓ ಪಿ  ನಿಯಮಗಳನ್ನು ಅಳವಡಿಸಿಕೊಂಡಿದ್ದು, ವಿವಿಧ ಪ್ರದೇಶಗಳಲ್ಲಿ 6 ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಇನ್ನಿತರೇ ಎಸ್​ ಓ ಪಿ  ಇನ್ನುಳಿದ ಎಸ್​ ಓ ಪಿ ನಿಯಮಗಳಿಗೆ ಸಂಬಂಧಿಸಿದ ಕಾರ್ಯಗಳು ಬಿರುಸಿನಿಂದ ಸಾಗಿದೆ, ಇದೀಗ ಸಿಬ್ಬಂದಿ ಸಕ್ರೆಬೈಲ್​ ಆನೆ ಬಿಡಾರದ ಪ್ರದೇಶಗಳನ್ನು ಸ್ವಚ್ಚಗೊಳಿಸುವ ಕಾರ್ಯದಲ್ಲಿ ತೊಡಗಿದ್ದು, ಎಲ್ಲಾ ಅಂದುಕೊಂಡಂತೆ ಆದರೆ  ಶಿಘ್ರದಲ್ಲೇ ಬಿಡಾರ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗುವುದು ಎಂಬ ಮಾಹಿತಿ ಕೆಲವು ಖಾಸಗಿ ಮೂಲಗಳಿಂದ ತಿಳಿದು ಬಂದಿದೆ. 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor