ಶಿವಮೊಗ್ಗ :  ಪತ್ರಕರ್ತರ ಸಾಧನೆಗೆ ಗೌರವ: ಜೇಸುದಾಸ್ ಪಿ ಹಾಗೂ ಎಸ್. ಚಂದ್ರಕಾಂತ್ ಸನ್ಮಾನ 

ಹಂಚಿಕೊಳ್ಳಿ
WhatsApp Facebook X Telegram
KUWJ Shivamogga Felicitates Senior Journalists

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಟಿಎನ್‌ಐಟಿ ಸೌತ್ ಇಂಡಿಯಾ ಮೀಡಿಯಾ ಅವಾರ್ಡ್‌ಗೆ ಭಾಜನರಾದ ಹಿರಿಯ ಪತ್ರಕರ್ತ ಜೇಸುದಾಸ್ ಪಿ ಹಾಗೂ ಐಎಂಎ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಪತ್ರಕರ್ತ ಎಸ್. ಚಂದ್ರಕಾಂತ್ ಅವರನ್ನು KUWJ ಶಿವಮೊಗ್ಗ ಘಟಕದ ಪದಾಧಿಕಾರಿಗಳು ಅಭಿನಂದಿಸಿದರು.

ಪತ್ರಿಕಾ ಭವನದಲ್ಲಿ ಇಂದು ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಇಬ್ಬರೂ ಪುರಸ್ಕೃತರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಶಿವಮೊಗ್ಗ ಟೈಮ್ಸ್ ಪತ್ರಿಕೆಯ ಸಂಪಾದಕರೂ ಆಗಿರುವ ಹಿರಿಯ ಪತ್ರಕರ್ತ ಎಸ್. ಚಂದ್ರಕಾಂತ್ ಮಾತನಾಡಿ, ಭಾರತೀಯ ವೈದ್ಯಕೀಯ ಸಂಘವು ವಿವಿಧ ಮಾನದಂಡಗಳ ಆಧಾರದಲ್ಲಿ ತಮ್ಮನ್ನು ಜೀವಮಾನ ಸಾಧನಾ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಆದರೆ, ಈ ಪ್ರಶಸ್ತಿಯ ಸಂಭ್ರಮವನ್ನು ಇಡೀ ಪತ್ರಿಕಾ ಬಳಗ ಒಟ್ಟಾಗಿ ಹಂಚಿಕೊಂಡಿರುವುದು ಮತ್ತಷ್ಟು ಖುಷಿ ನೀಡಿದೆ. ಪ್ರಶಸ್ತಿ ಪಡೆದ ಸಂದರ್ಭದಲ್ಲಿ ಸಹೋದ್ಯೋಗಿಗಳು ತೋರಿದ ಪ್ರೀತಿ ಹಾಗೂ ಆತ್ಮೀಯವಾಗಿ ಸನ್ಮಾನಿಸಿರುವುದು ತಮ್ಮ ಸಂತಸವನ್ನು ಇಮ್ಮಡಿಗೊಳಿಸಿದೆ ಎಂದು ಹೇಳಿದರು.

ದಿ ನ್ಯೂ ಇಂಡಿಯನ್ ಟೈಮ್ಸ್ ಮೀಡಿಯಾ ಅವಾರ್ಡ್ ಪುರಸ್ಕೃತ ಪತ್ರಕರ್ತ ಜೇಸುದಾಸ್ ಮಾತನಾಡಿ, ಪ್ರಶಸ್ತಿಯ ಸಂತೋಷವನ್ನು ಪತ್ರಿಕಾ ಮಿತ್ರರ ಪ್ರೀತಿ ಮತ್ತಷ್ಟು ಹೆಚ್ಚಿಸಿದೆ. ತಮ್ಮನ್ನು ಆತ್ಮೀಯವಾಗಿ ಗೌರವಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor