82ನೇ ವರ್ಷದ ಹಿಂದೂ ಮಹಾಸಭಾ ಗಣಪತಿ ನಿರ್ಮಾಣದಿಂದ 2028ರ ಶಿವಮೊಗ್ಗ ರಾಜಕೀಯ ಲೆಕ್ಕಾಚಾರವರೆಗೆ! ಇವತ್ತಿನ ಇ-ಪೇಪರ್‌ ಓದಿ

ಹಂಚಿಕೊಳ್ಳಿ
WhatsApp Facebook X Telegram
Malenadu Today E-Paper September 13 2026
Malenadu Today E-Paper September 13 2026

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಇವತ್ತಿನ ಇ-ಪೇಪರ್​ನಲ್ಲಿ ಶಿವಮೊಗ್ಗದ ಪ್ರಸಿದ್ಧ ಹಿಂದೂ ಮಹಾಸಭಾ ಗಣಪತಿಯ 82ನೇ ವರ್ಷದ ಮೂರ್ತಿ ನಿರ್ಮಾಣ, 2028ರ ವಿಧಾನಸಭಾ ಚುನಾವಣೆಗೆ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಈಗಿನಿಂದಲೇ ಆರಂಭವಾಗಿರುವ ರಾಜಕೀಯ ಲೆಕ್ಕಾಚಾರ, ವಿದ್ಯಾರ್ಥಿಗಳ ಬಸ್ ಸಮಸ್ಯೆ, ERSS-112 ಸಿಬ್ಬಂದಿಯ ತ್ವರಿತ ಕಾರ್ಯಾಚರಣೆ ಸೇರಿದಂತೆ ಆರೋಗ್ಯ, ಶಿಕ್ಷಣ, ಅರಣ್ಯ, ಕೃಷಿ ಹಾಗೂ ಸಾಗರ ಭಾಗದ ವಿವಿಧ ಸುದ್ದಿಗಳನ್ನ ಪ್ರಕಟಿಸಲಾಗಿದೆ.

ಮುಖ್ಯವಾಗಿ, 82ನೇ ವರ್ಷದ ಹಿಂದೂ ಮಹಾಸಭಾ ಗಣಪತಿ ಮೂರ್ತಿಯನ್ನು ಶಿವಮೊಗ್ಗ ನಗರದ ಬಿ.ಬಿ. ಸ್ಟ್ರೀಟ್‌ನಲ್ಲಿರುವ ಮೂರನೇ ತಲೆಮಾರಿನ ಕಲಾವಿದ ಗಣೇಶ್ ಅವರು ಸುಮಾರು 5 ಅಡಿ ಎತ್ತರದ ಗಣಪತಿ ಮೂರ್ತಿಯನ್ನು ಸಿದ್ಧಪಡಿಸುತ್ತಿದ್ದಾರೆ. ಅವರ ಅಜ್ಜ ಜೆ.ಎನ್. ನಂಜುಂಡಪ್ಪ ಅವರ ಕಾಲದಿಂದ ಆರಂಭವಾದ ಈ ಕಲಾ ಪರಂಪರೆಯನ್ನು ಗಣೇಶ್ ಮುಂದುವರಿಸುತ್ತಿದ್ದು, 1945ರಿಂದಲೂ ಒಂದೇ ಮಾದರಿಯ ಮೂರ್ತಿ ತಯಾರಿಸುವ ವಿಶೇಷ ಪರಂಪರೆ ಉಳಿದುಕೊಂಡಿದೆ, ಈ ಬಗ್ಗೆ ಸ್ಪೆಷಲ್ ಸ್ಟೋರಿ ನಿಮಗಾಗಿ ವರದಿ ಮಾಡಲಾಗಿದೆ.

2028ರ ವಿಧಾನಸಭಾ ಚುನಾವಣೆಯ ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ ಲೆಕ್ಕಾಚಾರ ಕುರಿತ ವಿಶ್ಲೇಷಣಾತ್ಮಕ ವರದಿ ಸಹ ನಿಮಗೆ ಇಷ್ಟವಾಗಬಹುದು ಹಾಲಿ ಶಾಸಕ ಎಸ್.ಎನ್. ಚನ್ನಬಸಪ್ಪ ಅವರ ಚಟುವಟಿಕೆ, ಕಾಂಗ್ರೆಸ್‌ನ ಮುಂದಿನ ಅಭ್ಯರ್ಥಿ ಯಾರು ಎಂಬ ಚರ್ಚೆ, ಹೆಚ್.ಸಿ. ಯೋಗೇಶ್ ಹಾಗೂ ಸಿ.ಎಸ್. ಷಡಾಕ್ಷರಿ ಹೆಸರುಗಳು, ಕೆ.ಎಸ್. ಈಶ್ವರಪ್ಪ ಮತ್ತು ಕೆ.ಇ. ಕಾಂತೇಶ್ ಅವರ ಮುಂದಿನ ರಾಜಕೀಯ ನಡೆ ಕುರಿತ ಕುತೂಹಲವನ್ನು ವರದಿ ತೆರೆದಿಟ್ಟಿದೆ.

ತೀರ್ಥಹಳ್ಳಿ ತಾಲೂಕಿನ ಕೊಂಡ್ಲೂರು ಭಾಗದಲ್ಲಿ ಸೂಕ್ತ ಸಮಯಕ್ಕೆ ಸರ್ಕಾರಿ ಬಸ್ ಸೌಲಭ್ಯ ಸಿಗದೆ ವಿದ್ಯಾರ್ಥಿಗಳು, ಪೋಷಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದ ಸುದ್ದಿ , ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಹಿಮ್ಮಡಿ ನೋವು ಹಾಗೂ ಪಾದ ಉರಿ ಕುರಿತು ಡಾ. ಸುಹಾಸ್ ಹೆಚ್.ಡಿ. ಅವರ ಆರೋಗ್ಯ ಲೇಖನ. ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಬಾರದು ಎನ್ನುವ ನಂಬಿಕೆಯ ಹಿಂದಿರುವ ಶ್ಯಾಮಂತಕ ಮಣಿಯ ಕಥೆ ಹಾಗೂ ‘ಏಕದಂತ’ ಗಣಪತಿಯ ಹಿಂದಿನ ಪೌರಾಣಿಕ ಕಥೆಗಳ ಕುರಿತ ವಿಶೇಷ ಲೇಖನ, ಭದ್ರಾವತಿಯಲ್ಲಿ 3 ಬಾಲ ಕಾರ್ಮಿಕರು ಹಾಗೂ 2 ಕಿಶೋರ ಕಾರ್ಮಿಕರ ರಕ್ಷಣೆ, ಹಾರ್ನಳ್ಳಿಯ ಪ್ರಜಾಸೇವಾ ಆಂದೋಲನದಲ್ಲಿ ಶಾಸಕಿ ಶಾರದಾ ಪೂರ್ಯಾನಾಯ್ಕ್ ನೀಡಿದ ಸೂಚನೆ, ಭದ್ರಾವತಿ ಸರ್ ಎಂ.ವಿ. ಸರ್ಕಾರಿ ಕಾಲೇಜಿನ ಸ್ಕೌಟಿಂಗ್ ಕಾರ್ಯಾಗಾರ, ‘ಆತ್ಮ ಶ್ರೇಷ್ಠ ಕೃಷಿಕ’ ಪ್ರಶಸ್ತಿಗೆ ಅರ್ಜಿ, ದಸರಾ ಕ್ರೀಡಾಕೂಟ ಹಾಗೂ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕುರಿತ ವರದಿಗಳು ಪ್ರಕಟವಾಗಿವೆ.

ಇ-ಪೇಪರ್ ಓದುವುದು ಹೇಗೆ?

ಇಂದಿನ ಮಲೆನಾಡು ಟುಡೆ ಇ-ಪೇಪರ್ ಓದಲು ಇಲ್ಲಿ ಕ್ಲಿಕ್ ಮಾಡಿ:
[Google Drive ಇ-ಪೇಪರ್ ಲಿಂಕ್ ]

ಪತ್ರಿಕೆಯನ್ನ ನೇರವಾಗಿ ಇಲ್ಲಿಯೇ ಓದಿ!

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor