BREAKING / ವೀಕೆಂಡ್​ ಪ್ರವಾಸಿಗರಿಗೆ ಶಾಕ್! ಕೊಡಚಾದ್ರಿಗೆ ಹೋಗಲು ಇಲ್ಲ ಅವಕಾಶ! ಪ್ರವೇಶ ನಿಷೇಧ!

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Jul 30, 2023 SHIVAMOGGA NEWS

ಶಿವಮೊಗ್ಗ / ರಾಜ್ಯದ ಪ್ರಸಿದ್ಧ ಪ್ರವಾಸಿ ಕೇಂದ್ರ ಹಾಗೂ ಭಕ್ತರ ಶ್ರದ್ಧಾಕೇಂದ್ರವಾದ ಕೊಡಚಾದ್ರಿ  (kodachadri) ಗಿರಿಗೆ ಜು.30ರಿಂದ ಮುಂದಿನ ಆದೇಶ ದವರೆಗೆ ವಾಹನದಲ್ಲಿ ತೆರಳುವುದು ಹಾಗೂ ಚಾರಣ ಮಾಡುವುದನ್ನು ಸಂಪೂರ್ಣ ನಿಷೇಧಿಸಿ ವನ್ಯಜೀವಿ ವಿಭಾಗ ಆದೇಶ ಹೊರಡಿಸಿದೆ.

ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ತೀವ್ರಗೊಂಡಿದ್ದು, ವಿಪರೀತ ಮಳೆಯಲ್ಲಿ ಮಲೆನಾಡು ವ್ಯಾಪ್ತಿಯ ಪ್ರವಾಸ ತೀರಾ ಅಸುರಕ್ಷತೆಯಿಂದ ಕೂಡಿದ್ದು, ಸುರಕ್ಷತೆ ಯಿಂದ ದೃಷ್ಟಿಯಿಂದ ಕಟ್ಟಿನಹೊಳೆ ಮೂಲಕ ಕೊಡಚಾದ್ರಿಗೆ ತೆರಳುವ ಜೀಪ್ ಮುಂತಾದ ವಾಹನಗಳು ಹಾಗೂ ವಿವಿಧ ಮಾರ್ಗದ ಮೂಲಕ ಚಾರಣದಲ್ಲಿ ಕೊಡಚಾದ್ರಿಗೆ ತೆರಳುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಇದರಿಂದ ನಿಟ್ಟೂರು, ಸಂಪೆಕಟ್ಟೆ ಕಟ್ಟಿನಹೊಳೆಯಿಂದ ಕೊಡ ಚಾದ್ರಿಗೆ ಜೀಪ್‌ನಲ್ಲಿ ಪ್ರವಾಸಿಗರನ್ನು ಕರೆದು ಕೊಂಡು ಹೋಗುವ ಸುಮಾರು 150 ಜೀಪ್ ಮಾಲೀಕರು, ಚಾಲಕರ ಜೀವನ ನಿರ್ವಹಣೆಗೆ ಪೆಟ್ಟು ಬಿದ್ದಂತಾಗಿದೆ.


SHIVAMOGGA AIRPORT ಗೆ ಸಿಗಲಿದೆ ವಿಶೇಷ ಭದ್ರತೆ! ಗೋವಾ, ತಿರುಪತಿ, ಹೈದ್ರಾಬಾದ್​ಗೂ ಹಾರುತ್ತೆ ವಿಮಾನ! ಟಿಕೆಟ್ ದರದ ಬಗ್ಗೆ ಸಂಸದರು ಹೇಳಿದ್ದೇನು?

ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟದ ಬಗ್ಗೆ ಇವತ್ತು ಸಂಸದ ಬಿ.ವೈ.ರಾಘವೇಂದ್ರರವರು ಸುದ್ದಿಗೋಷ್ಟಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣದ ಕುರಿತು ಸಚಿವ ಎಂ ಬಿ ಪಾಟೀಲ್ (MB Patil)​ ಅವರು ಹೇಳಿಕೆ ನೀಡಿದ್ದಾರೆ.

 ನಿಗದಿಯಂತೆ, ಆಗಸ್ಟ್ 11 ಕ್ಕೆ ಶಿವಮೊಗ್ಗದ ಫ್ಲೈಟ್  ಆಪರೇಷನ್ ಆಗಬೇಕಿತ್ತು.ಸ್ಪೋಟಕ ನಿಗ್ರಹ ಪಡೆ  ಅದೇ ವಿಮಾನ ನಿಲ್ದಾಣದಲ್ಲಿ ಇರಬೇಕೆಂದು ಕೇಂದ್ರ ನಿಯಮವಳಿ ಮಾಡಿದ ಪರಿಣಾಮ ಈಗ ವಿಮಾನ ಹಾರಾಟ ಮುಂದಕ್ಕೆ ಹೋಗಿದೆ. ಬೇರೆ ವಿಮಾನ ನಿಲ್ದಾಣ ನಿಲ್ದಾಣಗಳಲ್ಲಿ ಈ ಸಿಸ್ಟಮ್ ಇಲ್ಲ. ಸದ್ಯ ಶಿವಮೊಗ್ಗ ಏರ್​ಪೋರ್ಟ್​ನಲ್ಲಿ ನುರಿತ ಪಡೆ ಇರುತ್ತದೆ ಎಂದು ಸಂಸದರು ತಿಳಿಸಿದರು. 

ಬೇಡಿಕೆಗೆ ಅನುಗುಣವಾಗಿ , ವಿಮಾನ ಪ್ರಯಾಣದ ದರ ನಿಗದಿಯಾಗುತ್ತದೆ ಎಂದು ತಿಳಿಸಿದ ಸಂಸದ ರಾಘವೇಂದ್ರ , ಮುಂದಿನ ಅಕ್ಟೋಬರ್​ರವರೆಗೂ ಟಿಕೆಟ್ ಬುಕ್ಕಿಂಗ್ ಆಗುತ್ತಿದೆ ಎಂದು ಮಾಹಿತಿ ನೀಡಿದ್ರು.  ಹೊಸ ಪ್ಲೈಟ್​ ಹಾಗೂ ಹೊಸ ಮಾರ್ಗಗಳ ವಿಚಾರದಲ್ಲಿ ಶಿವಮೊಗ್ಗ- ತಿರುಪತಿ, ಶಿವಮೊಗ್ಗ- ಹೈದಾರಬಾದ್ ಹಾಗೂ ಶಿವಮೊಗ್ಗ- ಗೋವಾ ಮೂರು ಮಾರ್ಗಗಳಿಗೆ ಅನುಮೋದನೆಯಾಗಿದೆ.

ಸ್ಪೈಸ್ ಜೆಟ್, ಇಂಡಿಗೋ ಸ್ಟಾರ್ ಏರ್​ಲೈನ್ಸ್​ರವರು ವಿಮಾ ಹಾರಾಟಕ್ಕೆ ಮುಂದಾಗಿದ್ದಾರೆ.  ಮುಂಬೈಗೆ ಸಹ ಅವಕಾಶ ನೀಡಬೇಕೆಂಬ ಮನವಿಯಿದೆ. ಈ ಸಂಬಂಧ ಏರ್ ಲೈನ್ಸ್ ಮಿನಿಸ್ಟರ್​ರನ್ನು ಭೇಟಿ ಮಾಡಲು ಅವಕಾಶ‌ ಸಿಕ್ಕಿದ್ದು, ಮಾತನಾಡುವುದಾಗಿ ತಿಳಿಸಿದ್ರು. 


ಶಿವಮೊಗ್ಗ ಟಿವಿ ಟವರ್ ಗೆ ಎಫ್​ಎಂ ಟ್ರಾನ್ಸ್​ಮೀಟರ್ ಜೋಡಣೆ! ನಗರದಲ್ಲಿಯೇ ಕೇಳಲಿದೆ ಎಫ್​ಎಂ!? ಏನಂದ್ರು ಸಂಸದರು?

ಆರು ಚಿನ್ನದ ಪದಕದ ಜೊತೆಗೆ ರಾಜ್ಯದಲ್ಲಿಯೇ ಫಸ್ಟ್ RANK ಪಡೆದ ಶಿವಮೊಗ್ಗ ಯುವತಿ!

VIRAL TODAY / ಶಾಸಕರ ಬಾಯಿ ರುಚಿ ಮತ್ತು ಬೃಂದಾವನ್​ ಕ್ಯಾಂಟಿನ್​ ಮೆಣಸಿನ ಕಾಯಿ ಬೋಂಡಾ! ವೈರಲ್​ ಆಯ್ತು ಬೇಳೂರು ಹೇಳಿದ ಬಜ್ಜಿ ರೆಸಿಪಿ!

 

SHIVAMOGGA AIRPORT / ಶಿವಮೊಗ್ಗ-ಬೆಂಗಳೂರು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್!

 ರೈಲ್ವೆ ಪ್ರಯಾಣಿಕರಿಗೆ ಸೂಚನೆ! ಜನಶತಾಬ್ದಿ ಸೇರಿ ಹಲವು ಟ್ರೈನ್​ಗಳ ಸಂಚಾರದಲ್ಲಿ ವ್ಯತ್ಯಯ! ವಿವರ ಇಲ್ಲಿದೆ

Malenadu Today Shivamogga

 ​ 

 

 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor