ಬಿಜೆಪಿ ಪ್ರಚಾರದ ಆಟೋದ ಮೇಲೆ ಗುಂಪೊಂದರಿಂದ ದಾಳಿ ! ನಡೆದಿದ್ದೇನು?

ಹಂಚಿಕೊಳ್ಳಿ
WhatsApp Facebook X Telegram
One lorry, arecanut worth Rs 1 crore! Do you know how

KARNATAKA NEWS/ ONLINE / Malenadu today/ May 2, 2023 GOOGLE NEWS


ಶಿವಮೊಗ್ಗ/ ಬಿಜೆಪಿ ಪ್ರಚಾರದ ಆಟೋವೊಂದನ್ನ ತಡೆದು, ಅದರಲ್ಲಿದ್ದವರ ಮೇಲೆ ಹಲ್ಲೆ ನಡೆಸಿ, ಪ್ರಚಾರದ ಆಡಿಯೋ ಇದ್ದ ಪೆನ್​ ಡ್ರೈವ್ ಕಿತ್ತುಕೊಂಡು ಹೋದ ಘಟನೆ ನಿನ್ನೆ ನಡೆದಿದೆ. ಈ ಸಂಬಂಧ ತುಂಗಾನಗರ ಪೊಲೀಸರು ತನಿಖೆಯನ್ನ ಸಹ ನಡೆಸ್ತಿದ್ಧಾರೆ. 

ನಡೆದಿದ್ದೇನು? 

ಶಿವಮೊಗ್ಗದ ಅಗಸವಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬಿಜೆಪಿ ಆಟೋವೊಂದಕ್ಕೆ ಮೈಕ್​ ಕಟ್ಟಿ ಚುನಾವಣಾ ಪ್ರಚಾರ ನಡೆಸ್ತಿತ್ತು. ಈ ವೇಳೆ ಆಟೋದ ಮೇಲೆ ಗುಂಪೊಂದು ದಾಳಿ ನಡೆಸಿ, ಮೈಕ್​ ಕಿತ್ತುಕೊಂಡಿದೆ. ಅಲ್ಲದೆ ಪೆನ್​ಡ್ರೈವ್ ಕಿತ್ತುಕೊಂಡು ಆಟೋದಲ್ಲಿದ್ದವರ ಮೇಲೆ ಹಲ್ಲೆಗೆ ಮುಂದಾಗಿದೆ ಎಂದು ಪೊಲೀಸರ ಬಳಿ ದೂರಲಾಗಿದೆ. 

ವಿಷಯ ತಿಳಿದು ಸ್ಥಳಕ್ಕೆ ಬಂದ 112 ಪೊಲೀಸರು ಕೆಲವರನ್ನ ವಿಚಾರಣೆ ನಡೆಸಿದ್ದು, ಆನಂತರ ಪ್ರಕರಣ ಯಾವ ಸ್ವರೂಪ ಪಡೆದುಕೊಂಡಿದೆ ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ.  

READ/ ಈ ಸಲ ವೋಟು ಯಾರಿಗೆ ಹಾಕಬೇಕು ಎಂಬುದಕ್ಕೆ ಶಿವಮೊಗ್ಗದಲ್ಲಿ ಚಕ್ರವರ್ತಿ ಸೂಲಿಬೆಲೆ ಉತ್ತರ! 

ಪ್ರವಾಸಿಗರಿಗೆ ಸೂಚನೆ ಈ ದಿನ ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ಭಕ್ತರಿಗೆ ಪ್ರವೇಶ ನಿರ್ಬಂಧ!

ಸಾಗರ/ ಶಿವಮೊಗ್ಗ/  ಮತದಾತನದ ದಿನ ಜೋಗ ಜಲಪಾತದ ವೀಕ್ಷಣೆಗೆ ಅವಕಾಶ ಇಲ್ಲ ಎಂದು ಈಗಾಗಲೇ ಬೋರ್ಡ್ ಹಾಕಲಾಗಿದೆ. ಇದರ ಬೆನ್ನಲ್ಲೆ ಪ್ರವಾಸಿಗರಿಗೆ ಪುಣ್ಯಕ್ಷೇತ್ರದ ಭೇಟಿಗೆ ಅಂದು ಮಾತ್ರ ಬರಬೇಡಿ ಎಂದು ಭಕ್ತರಿಗೆ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ. 

ಇದನ್ನು ಸಹ ಓದಿ : ಆಟೋ ಚಾಲಕನಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಡಿಐಜಿಪಿ ತ್ಯಾಗರಾಜನ್​ ರಿಂದ ಸನ್ಮಾನ! ಕಾರಣವೇನು ?

ಮೇ 10 ರಂದು ಕರ್ನಾಟಕ ವಿಧಾನ ಸಭೆ ಚುನಾವಣೆ ನಡೆಯುವುದರಿಂದ ಸಿಗಂದೂರು ದೇವಾಲಯದ ಎಲ್ಲ ಸಿಬಂದಿಗಳಿಗೂ ಮತದಾನಕ್ಕೆ ತೆರಳಲು ಅವಕಾಶ ಕಲ್ಪಿಸಲಾಗಿದೆ.ಮೇಲಾಗಿ ಅಂದು ಭಕ್ತರಿಗೆ ದೇವಾಲಯದಲ್ಲಿ ಪ್ರವೇಶಾವಕಾಶವಿಲ್ಲ. ಭಕ್ತಾದಿಗಳು ತಮ್ಮ ತಮ್ಮ ಊರಿನ ಮತಗಟ್ಟೆಯಲ್ಲಿ ತೆರಳಿ ಮತದಾನ ಮಾಡಲು ಕೋರುತ್ತೇವೆ ಎಂದು ದೇವಾಲಯದ  ಧರ್ಮಾಧಿಕಾರಿ ಡಾ. ಎಸ್. ರಾಮಪ್ಪ ಮನವಿ ಮಾಡಿಕೊಂಡಿದ್ದಾರೆ.

ಇದನ್ನು ಸಹ ಓದಿ :  ಹೊಸನಗರದಲ್ಲಿ ಪು ನೀತ್​ರ ಚಿತ್ರ ಕಂಡು ಭಾವುಕರಾದ  ಶಿವಣ್ಣ

ಮೌಲ್ಯಗಳ ಉಳಿವಿಗೆ ತಪ್ಪದೇ ಮತದಾನ ಮಾಡೋಣ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಂಕಣ ಧರಿಸೋಣ. ನಮ್ಮ ಗಣತಂತ್ರ ವ್ಯವಸ್ಥೆಯನ್ನು ಇನ್ನಷ್ಟು ಸಬಲಗೊಳಿಸಲು ಭಾರತದ ಪ್ರಜೆಗಳಾದ ನಾವು ಯಾವುದೇ ಅಮಿಷಗಳಿಗೆ ಒಳಗಾಗದೆ ಸಂವಿಧಾನಬದ್ಧವಾದ ಹಕ್ಕನ್ನು ಚಲಾಯಿಸುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡೋಣ ಎಂದು ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  

Malenadutoday.com Social media

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor