ಪ್ರವಾಸಿಗರಿಗೆ ಸೂಚನೆ ಈ ದಿನ ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ಭಕ್ತರಿಗೆ ಪ್ರವೇಶ ನಿರ್ಬಂಧ!

KARNATAKA NEWS/ ONLINE / Malenadu today/ May 2, 2023 GOOGLE NEWS


 ಸಾಗರ/ ಶಿವಮೊಗ್ಗ/  ಮತದಾತನದ ದಿನ ಜೋಗ ಜಲಪಾತದ ವೀಕ್ಷಣೆಗೆ ಅವಕಾಶ ಇಲ್ಲ ಎಂದು ಈಗಾಗಲೇ ಬೋರ್ಡ್ ಹಾಕಲಾಗಿದೆ. ಇದರ ಬೆನ್ನಲ್ಲೆ ಪ್ರವಾಸಿಗರಿಗೆ ಪುಣ್ಯಕ್ಷೇತ್ರದ ಭೇಟಿಗೆ ಅಂದು ಮಾತ್ರ ಬರಬೇಡಿ ಎಂದು ಭಕ್ತರಿಗೆ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ. 

ಇದನ್ನು ಸಹ ಓದಿ : ಆಟೋ ಚಾಲಕನಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಡಿಐಜಿಪಿ ತ್ಯಾಗರಾಜನ್​ ರಿಂದ ಸನ್ಮಾನ! ಕಾರಣವೇನು ?

ಮೇ 10 ರಂದು ಕರ್ನಾಟಕ ವಿಧಾನ ಸಭೆ ಚುನಾವಣೆ ನಡೆಯುವುದರಿಂದ ಸಿಗಂದೂರು ದೇವಾಲಯದ ಎಲ್ಲ ಸಿಬಂದಿಗಳಿಗೂ ಮತದಾನಕ್ಕೆ ತೆರಳಲು ಅವಕಾಶ ಕಲ್ಪಿಸಲಾಗಿದೆ.ಮೇಲಾಗಿ ಅಂದು ಭಕ್ತರಿಗೆ ದೇವಾಲಯದಲ್ಲಿ ಪ್ರವೇಶಾವಕಾಶವಿಲ್ಲ. ಭಕ್ತಾದಿಗಳು ತಮ್ಮ ತಮ್ಮ ಊರಿನ ಮತಗಟ್ಟೆಯಲ್ಲಿ ತೆರಳಿ ಮತದಾನ ಮಾಡಲು ಕೋರುತ್ತೇವೆ ಎಂದು ದೇವಾಲಯದ  ಧರ್ಮಾಧಿಕಾರಿ ಡಾ. ಎಸ್. ರಾಮಪ್ಪ ಮನವಿ ಮಾಡಿಕೊಂಡಿದ್ದಾರೆ.

ಇದನ್ನು ಸಹ ಓದಿ :  ಹೊಸನಗರದಲ್ಲಿ ಪು ನೀತ್​ರ ಚಿತ್ರ ಕಂಡು ಭಾವುಕರಾದ  ಶಿವಣ್ಣ

ಮೌಲ್ಯಗಳ ಉಳಿವಿಗೆ ತಪ್ಪದೇ ಮತದಾನ ಮಾಡೋಣ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಂಕಣ ಧರಿಸೋಣ. ನಮ್ಮ ಗಣತಂತ್ರ ವ್ಯವಸ್ಥೆಯನ್ನು ಇನ್ನಷ್ಟು ಸಬಲಗೊಳಿಸಲು ಭಾರತದ ಪ್ರಜೆಗಳಾದ ನಾವು ಯಾವುದೇ ಅಮಿಷಗಳಿಗೆ ಒಳಗಾಗದೆ ಸಂವಿಧಾನಬದ್ಧವಾದ ಹಕ್ಕನ್ನು ಚಲಾಯಿಸುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡೋಣ ಎಂದು ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

READ/ ಈ ಸಲ ವೋಟು ಯಾರಿಗೆ ಹಾಕಬೇಕು ಎಂಬುದಕ್ಕೆ ಶಿವಮೊಗ್ಗದಲ್ಲಿ ಚಕ್ರವರ್ತಿ ಸೂಲಿಬೆಲೆ ಉತ್ತರ! 

ಮುಸ್ಲಿಮ್ ವಿರೋಧಿಯಲ್ಲ/ ಗಲಾಟೆಗಳೆಲ್ಲಾ ಕೋಮು ಗಲಭೆಗಳಲ್ಲ

ಶಿವಮೊಗ್ಗ/ ಪ್ರೆಸ್ ಟ್ರಸ್ಟ್ ಹಾಗೂ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಸಂವಾದದಲ್ಲಿ ಇವತ್ತು ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಪಾಲ್ಗೊಂಡಿದ್ದರು. ಈ ವೇಳೆ ಅವರು  ಶಿವಮೊಗ್ಗದಲ್ಲಿ ಕೋಮುಗಲಭೆ ನಾವು ಹುಟ್ಟುವುದಕ್ಕೂ ಮುನ್ನವೇ ಇತ್ತು. ಆದರೆ, ಈಚೇಗೆ ರಾಜಕೀಯ ಕಾರಣಕ್ಕೆ ಶಾಂತಿಯುತವಾಗಿದ್ದ ಶಿವಮೊಗ್ಗ ನಗರದಲ್ಲಿ ಅಶಾಂತಿ ಮೂಡಿಸಿಕೊಂಡು ಬಂದಿದ್ದಾರೆ ಎಂದಿದ್ದಾರೆ. 

ಮುಸ್ಲಿಮ್​ ವಿರೋಧಿಯಲ್ಲ 

ಶಂಕಿತ ಉಗ್ರ ಕೃತ್ಯಗಳಲ್ಲಿ ಭಾಗಿಯಾಧವರು ಮುಸ್ಲಿಮರೆ.ಹಾಗೆಂದು  ಎಲ್ಲ ಮುಸ್ಲಿಮರು ಭಯೋತ್ಪಾದಕ ಕೃತ್ಯ ವೆಸಗಲ್ಲ. ಒಬ್ಬಿಬರು ಮಾಡುವ ತಪ್ಪಿಗೆ ಇಡೀ ಸಮುದಾಯವೇ ಹೊಣೆಯಾಗುತ್ತಿದೆ. ತಪ್ಪು ಮಾಡಿದಾಗ ಆ ಸಮಾಜದ ಹಿರಿಯರು ಬುದ್ದಿಹೇಳಿ ಪಾಠ ಕಲಿಸಿದ್ದರೆ ಅವರು ದಾರಿ ತಪ್ಪುತಿರಲಿಲ್ಲ. ಬಿಜೆಪಿ ಎಲ್ಲ ಮುಸ್ಲಿಮರ ವಿರೋಧಿ ಅಲ್ಲ. ನಮಗೂ ಮುಸ್ಲಿಮರು ಮತ ನೀಡುತ್ತಿದ್ದಾರೆ ಎಂದು ಚನ್ನಬಸಪ್ಪ ತಿಳಿಸಿದರು.

ಇದನ್ನೂ ಓದಿ / ಒಂದೇ ದಿನ 90 ಲಕ್ಷದ ಎಣ್ಣೆ ಜಪ್ತಿ/ ಶಿಕಾರಿಪುರದಲ್ಲಿ ಭರ್ಜರಿ ಹಣ ಪತ್ತೆ/  ಒಂದೇ ರಾತ್ರಿ 19 ಪಿಟ್ಟಿಕೇಸ್/ ಎ.ಎ. ಸರ್ಕಲ್​ ನಲ್ಲಿ ರೂಟ್ ಮಾರ್ಚ್​! ಪೊಲೀಸ್ ನ್ಯೂಸ್​ 

ಯಾರೋ ಮಾಡಿದ ಗಲಾಟೆಗೆ?

ಶಿವಮೊಗ್ಗದಲ್ಲಿ ಅನೇಕ ಬಾರಿ ಗಲಾಟೆ ನಡೆದಿದೆ. ಆದರೆ, ಅದ್ಯಾವುದು ಕೋಮುಗಲಭೆಯಲ್ಲ. ಯಾರದೋ ಮೇಲಿನ ಸಿಟ್ಟನ್ನು ತೀರಿಸಿಕೊಳ್ಳಲು ನಡೆದ ಗಲಾಟೆಗಳು. ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ತಲೆಗೆ ಕಟ್ಟುವಂತ ಕೆಲಸ ರಾಜಕೀಯ ಕಾರಣಕ್ಕೆ ಆಗಿದೆ ಎಂದು ದೂರಿದ್ಧಾರೆ. 

ಹಿಂದೂ ಸಮಾಜದ ಮೇಲೆ ಹಲ್ಲೆಯಾದರೆ, ಹಿಂದುಗಳನ್ನು ಕೊಂದರೆ ಅದನ್ನು ಪ್ರಶ್ನಿಸುವುದೇ ತಪ್ಪೇ. ಶಾಂತಿಯನ್ನು ಕದಡುವವರು ನಾವಲ್ಲ. ವಿಶ್ವವೇ ಒಂದು ಕುಟುಂಬ ಎಂದು ಹಿಂದು ಸಮಾಜ ಬಯಸುತ್ತದೆ. ಆದರೆ, ಅಶಾಂತಿಗೆ ಕಾರಣರಾದವರ ವಿರುದ್ಧ ನಮ್ಮ ಧ್ವನಿ ಸದಾ ಇರುತ್ತದೆ. ಆದರೆ ಈ ಧ್ವನಿಯನ್ನೇ ಕೋಮುವಾದ ಎಂದರೆ ಹೇಗೆ ಎಂದು ಚನ್ನಬಸಪ್ಪ ಪ್ರಶ್ನೆ ಮಾಡಿದರು.

ಇದನ್ನ ಓದಿ/ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಶಿವಮೊಗ್ಗ ಕೋರ್ಟ್​ ನೀಡಿತು ಭಾರೀ ಶಿಕ್ಷೆ 

ಗೆಲುವು ನಮ್ಮದೆ

ಸಂಘಟನೆ ಮತ್ತು ಈಶ್ವರಪ್ಪ ಅವರ ಮಾರ್ಗದರ್ಶನದಲ್ಲಿ ಗೆದ್ದು ಅವರ ಆಶೀರ್ವಾದ ಪಡೆದು ಸಂಘಟನೆಯ ಅಪೇಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ. ನಗರದ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ. ಬಿಜೆಪಿ ಸಂಘಟನಾತ್ಮಕವಾಗಿ ಪ್ರಬಲವಾಗಿದ್ದು, ಗೆಲುವಿಗೆ ಪೂರಕ ವಾತಾವರಣವಿದೆ ಎಂದರು.

ಈಶ್ವರಪ್ಪ ನನ್ನ ಬೆಳಸಿದ್ದಾರೆ

ಬಿಜೆಪಿ ಕಾರ್ಯಕರ್ತನಾದ ನನಗೆ ಪಕ್ಷ ಸ್ಪರ್ಧೆಗೆ ಅವಕಾಶ ನೀಡಿದೆ. ಯಡಿಯೂರಪ್ಪ, ಈಶ್ವರಪ್ಪ, ಮೇಲ್ಪಂಕ್ತಿ ಹಾಕಿದ್ದಾರೆ.  1980 ರ ದಶಕದಿಂದ  ಶಿವಮೊಗ್ಗ ಶಾಸಕರಾಗಿ ಈಶ್ವರಪ್ಪರವರು ಕೆಲಸ ಮಾಡಿದ್ದಾರೆ. ನಾನು ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಅವರು ನನ್ನನ್ನು ಬೆಳೆಸಿದ್ದಾರೆ. ದೇಶ ಮೊದಲು ಎನ್ನುವ ಪಕ್ಷ ನಮ್ಮದು. ಪಕ್ಷದ ಮುಖಂಡರು ಪಕ್ಷ ಬಿಟ್ಟು ಹೋಗಬಹುದು. ಆದರೆ ಬಿಜೆಪಿ ಕಾರ್ಯಕರ್ತರ ಪಕ್ಷ. ಕಾರ್ಯಕರ್ತರು ಪಕ್ಷ ಬಿಟ್ಟು ಹೋಗುವುದಿಲ್ಲ ಎಂದಿದ್ದಾರೆ. 

 

Malenadutoday.com Social media

Leave a Comment