BIG NEWS | ಶಿವಮೊಗ್ಗದ ರೈತರಿಗೆ ₹25.58 ಕೋಟಿ ರಿಲೀಸ್‌! ಮೋದಿಗೆ ಥ್ಯಾಂಕ್ಸ್‌ ಹೇಳಿದ ಸಂಸದ

ಹಂಚಿಕೊಳ್ಳಿ
WhatsApp Facebook X Telegram
BIG NEWS | ಶಿವಮೊಗ್ಗದ ರೈತರಿಗೆ ₹25.58 ಕೋಟಿ ರಿಲೀಸ್‌! ಮೋದಿಗೆ ಥ್ಯಾಂಕ್ಸ್‌ ಹೇಳಿದ ಸಂಸದ

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 24, 2025 ‌‌  

ಶಿವಮೊಗ್ಗವೂ ಸೇರಿದಂತೆ ರಾಜ್ಯದ ರೈತರಿಗೆ ಕೇಂದ್ರ ಸರ್ಕಾರ ಗುಡ್‌ ನ್ಯೂಸ್‌ ನೀಡಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯು 19 ನೇ ಕಂತಿನ PM-KISAN ಹಣವನ್ನು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬಿಡುಗಡೆ ಮಾಡಲಿದ್ದಾರೆ.

19 ನೇ ಕಂತಿನ ಹಣವೂ  2.41 ಕೋಟಿ ಮಹಿಳಾ ಫಲಾನುಭವಿಗಳು ಒಳಗೊಂಡಂತೆ ಒಟ್ಟಾರೆ, ದೇಶದ 9.8 ಕೋಟಿ ರೈತರಿಗೆ ತಲುಪಲಿದೆ.19 ನೇ ಕಂತಿನಲ್ಲಿ ಒಟ್ಟು 22 ಸಾವಿರ ಕೋಟಿ ರೂಪಾಯಿ ಬಿಡುಗಡೆಯಾಗಲಿದೆ. ಡಿಬಿಟಿ ಅಂದರೆ ನೇರ ಹಣ ವರ್ಗಾವಣೆಯಲ್ಲಿ ರೈತರ ಖಾತೆಗೆ ಜಮೆ ಆಗಲರುವ ಹಣದಲ್ಲಿ ಶಿವಮೊಗ್ಗ ಜಿಲ್ಲೆಯ ಒಟ್ಟು 1,35,475 ರೈತ ಫಲಾನುಭವಿಗಳಿಗೆ ರೂ 25.98 ಕೋಟಿ ಅನುದಾನ ಬಿಡುಗಡೆಯಾಗಲಿದೆ ಎಂದು ಸಂಸದರಾದ ಬಿ.ವೈ. ರಾಘವೇಂದ್ರರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಅಲ್ಲದೆ ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

SUMMARY |  Prime Minister Narendra Modi will release the 19th installment of PM-KISAN money under the Pradhan Mantri Kisan Samman Nidhi (PM-KISAN) scheme today.

KEY WORDS |‌ Prime Minister Narendra Modi ,19th installment of PM-KISAN money ,Pradhan Mantri Kisan Samman Nidhi, PM-KISAN scheme 

ಹಂಚಿಕೊಳ್ಳಿ
WhatsApp Facebook X Telegram
13
ಲೇಖಕರ ಬಗ್ಗೆ

13

Malenadu Today Contributor