Mangaluru Blast Case Accused Mohamed Shariq ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದ ಶಂಕಿತ ಶಾರೀಖ್ನನ್ನು ಮಂಗಳೂರಿನಿಂಧ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ಆತನ ಕುರಿತು ಹಾಗೂ ಮಂಗಳೂರು ಬ್ಲಾಸ್ಟ್ ಪ್ರಕರಣದ ತನಿಖೆ ಎನ್ಐಎ ನಡೆಸ್ತಿದೆ. ಸಾಮಾನ್ಯವಾಗಿ ಎನ್ಐಎ ತನಿಖೆ ನಡೆಸ್ತಿರುವ ಕೇಸ್ಗಳಲ್ಲಿ ಆರೋಪಿಗಳನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತದೆ. ಈ ಮೊದಲು ಶಂಕಿತ ಮಾಜ್, ಯಾಸಿನ್ ಹಾಗೂ ಹರ್ಷನ ಕೊಲೆ ಪ್ರಕರಣದ ಆರೋಪಿಗಳನ್ನು ಶಿವಮೊಗ್ಗ ಜೈಲಿನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.
ಇದನ್ನು ಸಹ ಓದಿ : ಕೇಸ್ ವಾಪಸ್ತೆಗೆದುಕೊಳ್ಳುವಂತೆ ಬೆದರಿಕೆ/ ತಡರಾತ್ರಿ ಮನೆ ಬಾಗಿಲಿಗೆ ಬಂದು ಕಾರಿಗೆ ಬೆಂಕಿ ಹಚ್ಚಿದ್ರು/ ರಕ್ಷಣೆಯಿಲ್ಲ ಎಂದು ಕಣ್ಣಿರಿಟ್ಟ ಸಂತ್ರಸ್ತೆ
ಇದೀಗ ಶಾರೀಖ್ನನ್ನು ಕೂಡ ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತಿದೆ. ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಶಾರಿಕ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನು ಸಹ ಓದಿ : 15 ವರ್ಷದಿಂದ ಕಾಡು ಬಿಟ್ಟು ಬರದ ರೌಡಿ ಗಣೇಶ ಮಧ್ಯಪ್ರದೇಶಕ್ಕೆ! 6 ಮಂದಿಯನ್ನು ಕೊಂದ ಸಕ್ರೆಬೈಲ್ ಬಿಡಾರದ ಈ ಆನೆ ಎಷ್ಟೊಂದು ಉಗ್ರ ಸ್ವರೂಪಿ ಗೊತ್ತಾ?
ಬಾಂಬ್ ಸ್ಫೋಟದಿಂದ ಗಾಯಗೊಂಡಿದ್ದ ಶಾರಿಕ್ಗೆ ಮಂಗಳೂರಿನ ಫಾದರ್ ಮುಲ್ಲರ್ (FatherMuller Hospital) ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ನಿನ್ನೆ ರಾತ್ರಿಯೇ ಶಾರೀಖ್ನನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ವಿಕ್ಟೋರಿಯಾ (Victoria Hospital,) ಆಸ್ಪತ್ರೆಯ ಬರ್ನಿಂಗ್ ವಾರ್ಡ್ನಲ್ಲಿ ಶಾರೀಖ್ಗೆ ಚಿಕಿತ್ಸೆ ಮುಂದುವರಿದಿದೆ.
ಇದನ್ನು ಸಹ ಓದಿ : ಶಿವಮೊಗ್ಗ ಪೊಲೀಸರಿಂದ ತತ್ತಕ್ಷಣದ ಕಾರ್ಯಾಚರಣೆ/ 20 ಚೆಕ್ಪೋಸ್ಟ್ನಲ್ಲಿ 46 ಕೇಸ್/ ಏನಿದು? ವಿವರ ನೋಡಿ
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link