ಮಲ್ಲೇಶ್ವರಂ, ಸಂಪಿಗೆ ರೋಡ್, ಚಿಕ್ಕ ಬಾಣಾವರ, ಕುಂಸಿ, ಅರಸಾಳು, ಬೀರೂರು ಸ್ಟಾಪ್​ಗಳಿಗೆ ಸಂಬಂಧಿಸಿದ ಮಹತ್ವದ ರೈಲ್ವೆ ಪ್ರಕಟಣೆ

This Article Written by / ajjimane ganesh / ಜುಲೈ 4, 2026

South Western Railway Shimoga-Talaguppa Trains Mysore Shimoga Train South Western Railway Train Cancellations on Feb 16 South Western Railway Deepavali Special Train Kumsi Railway Station railway updates railway news 

temporary train halts | ಮಲೆನಾಡು ಟುಡೆ ಸುದ್ದಿ | ಶಿವಮೊಗ್ಗ | ನೈರುತ್ಯ ರೈಲ್ವೆ ಇಲಾಖೆಯು ರಾಜ್ಯದ ವಿವಿಧ ಮಾರ್ಗಗಳಲ್ಲಿ ಸಂಚರಿಸುವ ರೈಲುಗಳಿಗೆ ಸಂಬಂಧಿಸಿದಂತೆ ಆಯ್ದ ಸ್ಥಳದಲ್ಲಿ ನೀಡಲಾಗಿದ್ದ ತಾತ್ಕಾಲಿಕ ನಿಲುಗಡೆಯ ಆದೇಶವನ್ನು ವಿಸ್ತರಿಸಿದೆ. ಈ ಮೊದಲು ಜೂನ್ 30, 2026 ರವರೆಗೆ ಮಾತ್ರ ಇದ್ದ ಈ ನಿಲುಗಡೆ ಆದೇಶ ಇದೀಗ ಸೆಪ್ಟೆಂಬರ್ 30, 2026 ರವರೆಗೆ ಮುಂದುವರಿಯಲಿದೆ. ಯಾವೆಲ್ಲಾ ಸ್ಟಾಪ್​ಗಳಿಗೆ ಈ ಆದೇಶ ಸಂಬಂಧಿಸಿದೆ ಎಂಬುದರ ಕುರಿತಾಗಿ ರೈಲ್ವೆ ಇಲಾಖೆ ನೀಡಿರುವೆ ಪ್ರಕಟಣೆಯ ಯಥಾವತ್ತು ವಿವರ ಇಲ್ಲಿದೆ.

ನೈರುತ್ಯ ರೈಲ್ವೆ ಇಲಾಖೆ ಪ್ರಕಟಣೆಯ ವಿವರ

  • ರೈಲು ಸಂಖ್ಯೆ 56519/56520 (ಕೆಎಸ್ಆರ್ ಬೆಂಗಳೂರು–ಹೊಸಪೇಟೆ–ಕೆಎಸ್ಆರ್ ಬೆಂಗಳೂರು ಪ್ಯಾಸೆಂಜರ್): ದೇವನೂರು (VNR), ಹೊಳಲ್ಕೆರೆ (HLK) ಮತ್ತು ಅಮೃತಾಪುರ (AMC) ನಿಲ್ದಾಣಗಳಲ್ಲಿ ನಿಲುಗಡೆ ಮುಂದುವರಿಯಲಿದೆ.
  • ರೈಲು ಸಂಖ್ಯೆ 20675/20676 (ಬೆಳಗಾವಿ–ಮೈಸೂರು–ಬೆಳಗಾವಿ ವಿಶ್ವಮಾನವ ಎಕ್ಸ್’ಪ್ರೆಸ್) ಹಾಗೂ ರೈಲು ಸಂಖ್ಯೆ 17391/17392 (ಕೆಎಸ್ಆರ್ ಬೆಂಗಳೂರು–ಸಿಂಧನೂರು–ಕೆಎಸ್ಆರ್ ಬೆಂಗಳೂರು ಎಕ್ಸ್’ಪ್ರೆಸ್): ರಾಮಗಿರಿ (RGI) ನಿಲ್ದಾಣದಲ್ಲಿ ನಿಲುಗಡೆ ವಿಸ್ತರಿಸಲಾಗಿದೆ.
  • ರೈಲು ಸಂಖ್ಯೆ 16587/16588 (ಯಶವಂತಪುರ–ಬಿಕಾನೇರ್–ಯಶವಂತಪುರ ಎಕ್ಸ್’ಪ್ರೆಸ್): ಬೀರೂರು (RRB) ನಿಲ್ದಾಣದಲ್ಲಿ ಮತ್ತು ರೈಲು ಸಂಖ್ಯೆ 17391/17392 (ಕೆಎಸ್ಆರ್ ಬೆಂಗಳೂರು–ಸಿಂಧನೂರು–ಕೆಎಸ್ಆರ್ ಬೆಂಗಳೂರು ಎಕ್ಸ್’ಪ್ರೆಸ್) ಚಳಗೇರಿ (CLI) ನಿಲ್ದಾಣದಲ್ಲಿ ನಿಲುಗಡೆ ಮುಂದುವರಿಯಲಿದೆ.
  • ರೈಲು ಸಂಖ್ಯೆ 20651/20652 (ಕೆಎಸ್ಆರ್ ಬೆಂಗಳೂರು–ತಾಳಗುಪ್ಪ–ಕೆಎಸ್ಆರ್ ಬೆಂಗಳೂರು ಎಕ್ಸ್’ಪ್ರೆಸ್): ಅರಸಾಳು (ARU) ಮತ್ತು ಕುಂಸಿ (KMSI) ನಿಲ್ದಾಣಗಳಲ್ಲಿ ನಿಲುಗಡೆ ಮುಂದುವರಿಯಲಿದೆ.
  • ರೈಲು ಸಂಖ್ಯೆ 16579/16580 (ಯಶವಂತಪುರ–ಶಿವಮೊಗ್ಗ ಟೌನ್–ಯಶವಂತಪುರ ಎಕ್ಸ್’ಪ್ರೆಸ್): ಚಿಕ್ಕಬಾಣಾವರ (BAW) ನಿಲ್ದಾಣದಲ್ಲಿ ನಿಲುಗಡೆ ಮುಂದುವರಿಯಲಿದೆ.
  • ರೈಲು ಸಂಖ್ಯೆ 16239/16240 (ಚಿಕ್ಕಮಗಳೂರು–ಯಶವಂತಪುರ–ಚಿಕ್ಕಮಗಳೂರು ಎಕ್ಸ್’ಪ್ರೆಸ್): ಸಂಪಿಗೆ ರೋಡ್ (SPGR) ನಿಲ್ದಾಣದಲ್ಲಿ ನಿಲುಗಡೆ ಮುಂದುವರಿಯಲಿದೆ.
  • ರೈಲು ಸಂಖ್ಯೆ 16228 (ತಾಳಗುಪ್ಪ–ಮೈಸೂರು ಎಕ್ಸ್’ಪ್ರೆಸ್): ಮಲ್ಲೇಶ್ವರಂ (MWM) ನಿಲ್ದಾಣದಲ್ಲಿ ಮತ್ತು ರೈಲು ಸಂಖ್ಯೆ 16315/16316 (ಮೈಸೂರು–ತಿರುವನಂತಪುರಂ ನಾರ್ತ್–ಮೈಸೂರು ಎಕ್ಸ್’ಪ್ರೆಸ್) ಮದ್ದೂರು (MAD) ನಿಲ್ದಾಣದಲ್ಲಿ ನಿಲುಗಡೆ ಮುಂದುವರಿಯಲಿದೆ.
  • ರೈಲು ಸಂಖ್ಯೆ 66553 (ಕೆಎಸ್ಆರ್ ಬೆಂಗಳೂರು–ಅಶೋಕಪುರಂ ಮೆಮು): ಕೃಷ್ಣದೇವರಾಯ ಹಾಲ್ಟ್ (KNDV) ನಿಲ್ದಾಣದಲ್ಲಿ ನಿಲುಗಡೆ ಮುಂದುವರಿಯಲಿದೆ.
  • ರೈಲು ಸಂಖ್ಯೆ 66519/66520 (ಮಾರಿಕುಪ್ಪಂ–ಕೆಎಸ್ಆರ್ ಬೆಂಗಳೂರು–ಮಾರಿಕುಪ್ಪಂ ಮೆಮು) ಹಾಗೂ ರೈಲು ಸಂಖ್ಯೆ 16521 (ಬಂಗಾರಪೇಟೆ–ಕೆಎಸ್ಆರ್ ಬೆಂಗಳೂರು ಮೆಮು): ದೇವನಗೊಂಥಿ (DKN) ನಿಲ್ದಾಣದಲ್ಲಿ ನಿಲುಗಡೆ ಮುಂದುವರಿಯಲಿದೆ.

This Article Written by / ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯ್​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ

#ShimogaNews,#ShivamoggaNews,shivamogga latest news,shivamogga today news,temporary train halts

ಮುಂದಿನ ಸುದ್ದಿ ಒದಿ