SHIMOGA NEWS LIVE

ಶಿವಮೊಗ್ಗ ಗ್ರಾಮಾಂತರ : ರಾಗಿ ಗುಡ್ಡದ ವೈನ್​ಶಾಪ್​ನಲ್ಲಿ ಜಗಳ ಬಿಡಿಸಲು ಹೋದ ಯುವಕನಿಗೆ ಚಾಕು ಇರಿತ

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ರಾಗಿಗುಡ್ಡದ ಸಮೀಪ ಹೊನ್ನಾಳಿ ರಸ್ತೆಯಲ್ಲಿರುವ ವೈನ್ ಶಾಪ್ ಒಂದರಲ್ಲಿ ನಡೆಯುತ್ತಿದ್ದ ಗಲಾಟೆ ತಪ್ಪಿಸಲು ಹೋದ ಯುವಕನೊಬ್ಬನ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದಾರೆ. ಘಟನೆಯಲ್ಲಿ ರಾಗಿಗುಡ್ಡದ ನಿವಾಸಿ 27 ವರ್ಷದ ಸುನಿಲ್ ಕುಮಾರ್ ಎಂಬುವವರು ಗಾಯಗೊಂಡಿದ್ದಾರೆ.

ಶಿವಮೊಗ್ಗ ಗ್ರಾಮಾಂತರ : ರಾಗಿಗುಡ್ಡದ ಸಮೀಪದ ವೈನ್​ ಶಾಪ್​ನಲ್ಲಿ ಘಟನೆ

ಸುನಿಲ್ ಕುಮಾರ್ ಎಂಬವರು ತಮ್ಮ ಸ್ನೇಹಿತ ರಘು ಜೊತೆಗೂಡಿ ಡ್ರಿಂಕ್ಸ್​ ಮಾಡಲು ಹೊನ್ನಾಳಿ ರಸ್ತೆಯಲ್ಲಿರುವ ವೈನ್ ಸ್ಟೋರ್‌ಗೆ ತೆರಳಿದ್ದರು. ಅದೇ ಮದ್ಯದಂಗಡಿಯಲ್ಲಿ ಕುಳಿತಿದ್ದ ಅಪರಿಚಿತ ವ್ಯಕ್ತಿಯೊಬ್ಬ ತನ್ನ ಸ್ನೇಹಿತರ ಗುಂಪಿನೊಂದಿಗೆ ಯಾವುದೋ ವಿಚಾರಕ್ಕೆ ವಾಗ್ವಾದಕ್ಕಿಳಿದು ಜಗಳವಾಡುತ್ತಿದ್ದ. ಗುಂಪಿನ ನಡುವಿನ ಈ ಗಲಾಟೆಯನ್ನು ಗಮನಿಸಿದ ಸುನಿಲ್ ಕುಮಾರ್ ಅವರು, ಪರಿಸ್ಥಿತಿಯನ್ನು ತಿಳಿಗೊಳಿಸುವ ಉದ್ದೇಶದಿಂದ ಅಲ್ಲಿಗೆ ತೆರಳಿ ಜಗಳ ಬಿಡಿಸಲು ಮುಂದಾಗಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಈ ವೇಳೆ ಅಲ್ಲಿ ಜಗಳ ಆಡುತ್ತಿದ್ದ ವ್ಯಕ್ತಿ ಚಾಕುವಿನಿಂದ ಸುನಿಲ್ ಮೇಲೆ ದಾಳಿ ಮಾಡಿದ್ದಾನೆ. ಘಟನೆಯ ಸುನಿಲ್ ಕುಮಾರ್ ತಲೆ, ಕುತ್ತಿಗೆ ಹಾಗೂ ಮುಖದ ಭಾಗಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ ಎಂದು ಆರೋಪಿಸಲಾಗಿದೆ. ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಅಗತ್ಯ ಚಿಕಿತ್ಸೆ ನೀಡುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.

ಶಿವಮೊಗ್ಗ ಗ್ರಾಮಾಂತರ :  ಜಗಳ ಬಿಡಿಸಲು ಹೋದ ಯುವಕನ ಮೇಲೆ ಚಾಕುವಿನಿಂದ ಹಲ್ಲೆKnife Attack On Youth At Wine Store Near Ragigudda
ಶಿವಮೊಗ್ಗ ಗ್ರಾಮಾಂತರ : ಜಗಳ ಬಿಡಿಸಲು ಹೋದ ಯುವಕನ ಮೇಲೆ ಚಾಕುವಿನಿಂದ ಹಲ್ಲೆKnife Attack On Youth At Wine Store Near Ragigudda

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ