ಪರಾಭವ ನಾಮ ಸಂವತ್ಸರದ ಉತ್ತರಾಯಣ ವಸಂತ ಋತುವಿನ ಚೈತ್ರ ಮಾಸದ ಚತುರ್ದಶಿಯ ಈ ದಿನ ರಾತ್ರಿ 7.08 ನಂತರ ಅಮಾವಾಸ್ಯೆ ಆರಂಭವಾಗಲಿದೆ. ಉತ್ತರಾಭಾದ್ರ ನಕ್ಷತ್ರ ಮಧ್ಯಾಹ್ನ 12.54 ರವರೆಗೆ ಇದ್ದು, ತದನಂತರ ರೇವತಿ ನಕ್ಷತ್ರ ಪ್ರವೇಶವಾಗಲಿದೆ. ಅಮೃತ ಘಳಿಗೆಯು ಬೆಳಿಗ್ಗೆ 8.10 ರಿಂದ 9.46 ರವರೆಗೆ ಪ್ರಾಪ್ತವಾಗಲಿದೆ. ರಾಹುಕಾಲ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇದ್ದರೆ, ಯಮಗಂಡ ಕಾಲ ಬೆಳಿಗ್ಗೆ 6.00 ರಿಂದ 7.30 ರವರೆಗೆ ಇರಲಿದೆ.
ಇಂದಿನ ಭವಿಷ್ಯ
ಮೇಷ ರಾಶಿಯವರಿಗೆ ಇಂದು ಸಾಲದ ಹೊರೆ ಹೆಚ್ಚಾಗುವ ಸಾಧ್ಯತೆ ಇದೆ. ಕೈಗೊಳ್ಳಬೇಕಿದ್ದ ಪ್ರಯಾಣಗಳಲ್ಲಿ ದಿಢೀರ್ ಬದಲಾವಣೆಗಳಾಗಲಿವೆ. ದೇವರ ದರ್ಶನ ಪಡೆಯುವ ಭಾಗ್ಯ ಲಭಿಸಲಿದೆ. ಪ್ರಮುಖ ಒಪ್ಪಂದಗಳು ಮುಂದೂಡಲ್ಪಡುವ ಲಕ್ಷಣಗಳಿವೆ. ವ್ಯಾಪಾರ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಕೆಲವು ಕಿರಿಕಿರಿಗಳು ಉಂಟಾಗಬಹುದು. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದ್ದು ಎಚ್ಚರಿಕೆ ಅಗತ್ಯ.
ವೃಷಭ / ಶುಭ ಕಾರ್ಯ, ಕೈಗೆತ್ತಿಕೊಂಡ ಕೆಲಸ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸುತ್ತಾರೆ. ಶುಭ ಸುದ್ದಿಗಳು ಕೇಳಿಬರಲಿವೆ. ಹೊಸ ವಾಹನ ಖರೀದಿ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಹೊಸ ನಿರೀಕ್ಷೆ ಹಾಗೂ ಭರವಸೆ ಗರಿಗೆದರಲಿವೆ.
ಮಿಥುನ / ಹೊಸ ಕೆಲಸಕ್ಕೆ ಚಾಲನೆ ನೀಡಲು ಇದು ಸಕಾಲವಾಗಿದೆ. ಶುಭ ವಾರ್ತೆಗಳು ಬರಲಿವೆ. ವಾಹನ ಯೋಗ. ನಿರೀಕ್ಷಿಸದ ಕೆಲವು ಅಚ್ಚರಿಯ ಘಟನೆಗಳು ಜರುಗಲಿವೆ. ಉದ್ಯೋಗ ಮತ್ತು ವ್ಯಾಪಾರ ವಲಯದಲ್ಲಿ ಹೆಚ್ಚಿನ ಪ್ರಗತಿ ಕಂಡುಬರಲಿದೆ.
ಕರ್ಕಾಟಕ / ಕೆಲಸ-ಕಾರ್ಯಗಳಲ್ಲಿ ಅನಗತ್ಯ ವಿಳಂಬ . ಆರ್ಥಿಕ ಮುಗ್ಗಟ್ಟು, ಹಣಕಾಸಿನ ವಿಚಾರದಲ್ಲಿ ಜಾಗರೂಕತೆ ವಹಿಸಬೇಕು. ಹಠಾತ್ ಪ್ರಯಾಣ. ದೇವಾಲಯಗಳಿಗೆ ಭೇಟಿ . ಅನಾರೋಗ್ಯದ ಸಮಸ್ಯೆ . ವ್ಯಾಪಾರ ಮತ್ತು ಉದ್ಯೋಗದಲ್ಲಿ ಏರಿಳಿತದ ದಿನ.
ಸಿಂಹ / ವಿಘ್ನಗಳನ್ನು ಎದುರಿಸಬೇಕಾಗಬಹುದು. ದೂರ ಪ್ರಯಾಣ . ಪುಣ್ಯಕ್ಷೇತ್ರಗಳ ದರ್ಶನ . ಸಹೋದರರು ಹಾಗೂ ಸ್ನೇಹಿತರ ಕಡೆಯಿಂದ ಕೆಲವೊಂದು ಸಮಸ್ಯೆ ಸೃಷ್ಟಿಯಾಗಬಹುದು. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ.
ಕನ್ಯಾ / ಮನೆಯೊಳಗೆ ಹಾಗೂ ಹೊರಗಿನ ವಾತಾವರಣವು ಪ್ರೋತ್ಸಾಹದಾಯಕವಾಗಿ ಇರಲಿದೆ. ಹಣಕಾಸಿನ ವ್ಯವಹಾರ ಯಾವುದೇ ಅಡೆತಡೆಗಳಿಲ್ಲದೆ ಸುಗಮವಾಗಿ ನಡೆಯಲಿವೆ. ಆಧ್ಯಾತ್ಮಿಕ ಒಲವು ಹೆಚ್ಚಾಗಲಿದೆ. ಉದ್ಯೋಗ ಮತ್ತು ವೃತ್ತಿ ಜೀವನದಲ್ಲಿ ಅನುಕೂಲಕರ ಪರಿಸ್ಥಿತಿ .

ತುಲಾ ರಾಶಿಯವರಿಗೆ ವಾಹನ ಯೋಗ
ತುಲಾ / ಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ ದೊರೆಯಲಿದೆ. ಬಹಳ ದಿನಗಳ ನಂತರ ಬಾಲ್ಯದ ಗೆಳೆಯರನ್ನು ಭೇಟಿಯಾಗುವ ಅವಕಾಶ ಒದಗಿಬರಲಿದೆ. ಹೊಸ ಜಮೀನು ಅಥವಾ ವಾಹನಗಳನ್ನು ಖರೀದಿಸುವ ಉತ್ತಮ ಅವಕಾಶಗಳಿವೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಬಹಳ ದಿನಗಳಿಂದ ಇದ್ದ ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ.
ವೃಶ್ಚಿಕ / ಹೊಸ ತೊಡಕು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕೆಲಸಗಳು ನಿಧಾನಗತಿಯಲ್ಲಿ ಸಾಗಲಿವೆ. ದಿಢೀರ್ ಪ್ರಯಾಣ . ಸಂಬಂಧಿಕರ ಭೇಟಿ ಮಾಡುವಿರಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ವಿಪರೀತ ಒತ್ತಡದ ವಾತಾವರಣ ನಿರ್ಮಾಣವಾಗಲಿದೆ.
ಧನುಸ್ಸು / ಕೆಲಸಗಳಲ್ಲಿ ಹಲವಾರು ಅಡೆತಡೆ ಎದುರಾಗಲಿವೆ. ಅನಿವಾರ್ಯ ಕಾರಣಗಳಿಂದಾಗಿ ಕೈಗೊಳ್ಳಬೇಕಿದ್ದ ಪ್ರಯಾಣ ರದ್ದುಗೊಳಿಸುವಿರಿ. ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ವ್ಯಾಪಾರ ಮತ್ತು ಉದ್ಯೋಗ ಸ್ಥಳದಲ್ಲಿ ವಾಗ್ವಾದಗಳು ನಡೆಯುವ ಸಂಭವವಿದೆ.
ಮಕರ / ಪ್ರಮುಖ ಸಂದೇಶವೊಂದು ಲಭ್ಯವಾಗಲಿದೆ. ವಿದ್ಯಾರ್ಥಿಗಳಿಗೆ ಹೊಸ ಶೈಕ್ಷಣಿಕ ಅವಕಾಶಗಳು ಒದಗಿಬರಲಿವೆ. ವ್ಯಾಪಾರ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಹೊಸ ಹುರುಪು ಹಾಗೂ ಉತ್ಸಾಹ ಮೂಡಲಿದೆ.
ಕುಂಭ / ದೂರದ ಊರುಗಳಿಗೆ ಪ್ರಯಾಣ. ಅಡೆತಡೆಗಳು ಉಂಟಾಗಲಿವೆ. ಭೂಮಿಗೆ ಸಂಬಂಧಿಸಿದ ವಿವಾದಗಳು ಎದುರಾಗುವ ಸಂಭವವಿದೆ. ಆಲೋಚನೆಗಳಲ್ಲಿ ಅಸ್ಥಿರತೆ . ಉದ್ಯೋಗ ಮತ್ತು ವೃತ್ತಿ ಕ್ಷೇತ್ರದಲ್ಲಿ ಏರಿಳಿತಗಳನ್ನು ಎದುರಿಸಬೇಕಾಗುತ್ತದೆ.
ಮೀನ / ಅಂದುಕೊಂಡ ಕೆಲಸಗಳನ್ನು ಅತ್ಯುತ್ಸಾಹದಿಂದ ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುತ್ತಾರೆ. ಆರ್ಥಿಕ ಸ್ಥಿತಿಗತಿಯಲ್ಲಿ ಸುಧಾರಣೆ . ಹಳೆಯ ಬಾಕಿ ಕೈಸೇರಲಿವೆ. ವ್ಯಾಪಾರ ಮತ್ತು ಉದ್ಯೋಗವು ಯಾವುದೇ ಅಡೆತಡೆಗಳಿಲ್ಲದೆ ಬಹಳ ಸುಗಮವಾಗಿ ಸಾಗಲಿದೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
