ಒಂದು ಫೋನ್​ ಕಾಲ್​ ಎಲ್ಲದಕ್ಕೂ ಕಾರಣವಾಯ್ತಾ!? ಕರುಣಾಕರ ಕಥೆ

This Article Written by / ajjimane ganesh / ಫೆಬ್ರವರಿ 6, 2026

Siddapura Case and karunakara bhat story Daughter Reveals Shocking Details About Mother Suchitra

Shivamogga : ಶಿವಮೊಗ್ಗದ ಜ್ಯೋತಿಷಿ ಕಮಲಾಕರ ಭಟ್ ಹಾಗೂ ಸುಚಿತ್ರಾ ನಡುವಿನ ಅಕ್ರಮ ಸಂಬಂಧ ಮತ್ತು ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತೆ ಸುಚಿತ್ರಾರ ಪುತ್ರಿ ಮಾಧ್ಯಮಗಳ ಜೊತೆಗೆ ಇನ್ನೊಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.  ಜ್ಯೋತಿಷ್ಯ ಹೇಳುವ ಮೂಲಕ ಸಾಕಷ್ಟು ಸಂಪಾದನೆ ಮಾಡಿದ್ದ ಕಮಲಾಕರ ಆ ದುಡ್ಡಿನಿಂದಲೇ ಸುಚಿತ್ರಾರಿಗೆ ಬೇಕಿದ್ದ ಎಲ್ಲವನ್ನು ಕೊಡಿಸುತ್ತಿದ್ದರಂತೆ. ಶಿವಮೊಗ್ಗದ ಪಂಪಾನಗರದಲ್ಲಿ ವಾಸವಿದ್ದ ಕಮಲಾಕರ  ಕನಸು ಎಂಟರ್ಪ್ರೈಸಸ್ ಹೆಸರಿನಲ್ಲಿ ಬಿಪಿಓ ಮತ್ತು ಜ್ಯೋತಿಷ್ಯ ಕೇಂದ್ರ ನಡೆಸುತ್ತಿದ್ದರು. ಅಲ್ಲಿಗೆ ಒಂಬತ್ತು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದವರು ಸುಚಿತ್ರಾ. ಆನಂತರ ಇವರಿಬ್ಬರ ನಡುವೆ ಸಂಬಂಧ ಆರಂಭವಾಗಿದ್ದು, ಕಮಾಲಕರ ಸುಚಿತ್ರಾರ ಮಕ್ಕಳನ್ನ ತಾನಿದ್ದ ಕಟ್ಟಡದಲ್ಲಿಯೇ ಬೇರೆ ಕೋಣೆಯಲ್ಲಿ ಉಳಿಯಲು ಅವಕಾಶ ಕಲ್ಪಿಸಿದ್ದ. ಈ ಮಧ್ಯೆ ದೊಡ್ಡ ಮಗಳಿಗೆ ತಾಯಿಯಿಂದ ಹಿಂಸೆ ಆಗಲು ಆರಂಭವಾದ್ದರಿಂದ ಆಕೆ ತಂದೆಗೆ ಮೆಸೇಜ್ ಹಾಕಿ ಕರೆದುಕೊಂಡು ಹೋಗು ಎಂದಿದ್ದಳು. ತದನಂತರ ಪೊಲೀಸ್ ಮಧ್ಯಸ್ಥಿಕೆಯಲ್ಲಿ ಮಕ್ಕಳು ತಮ್ಮ ದೊಡ್ಡಪ್ಪನ ಸುಪ್ರದಿಯಲ್ಲಿ ಆಶ್ರಯ ಪಡೆದಿದ್ದರು. ಆದರೆ ಅಲ್ಲಿಗೆ ಗ್ಯಾಂಗ್​ ಕಟ್ಟಿಕೊಂಡು ಬಂದಿದ್ದ ಕರುಣಾಕರ ಭಟ್ ಆಂಡ್ ಟೀಂ, ಮಕ್ಕಳ ದೊಡ್ಡಪ್ಪನನ್ನ ಇರಿದು ಸಾಯಿಸಿದೆ. ಜೊತೆಯಲ್ಲಿ ಇನ್ನಿಬ್ಬರಿಗೆ ಇರಿದಿತ್ತು. ಇದಿಷ್ಟು ನಡೆದ ಘಟನೆ  

Siddapura Case and karunakara bhat story Daughter Reveals Shocking Details About Mother Suchitra
Siddapura Case and karunakara bhat story Daughter Reveals Shocking Details About Mother Suchitra

ಶಿವಮೊಗ್ಗದಲ್ಲಿಯು ಹೀಗೆ ನಡೆಯುತ್ತಾ? ಜಸ್ಟ್‌ 30 ಸೆಕೆಂಡ್‌ನಲ್ಲಿ ಕಾರಲ್ಲಿ ಏನಾಯ್ತು ಗೊತ್ತಾ?!

ಈ ಬಗ್ಗೆ ಮಾತನಾಡಿರೋ ಸುಚಿತ್ರಾರ ಪುತ್ರಿ ಸುಚಿತ್ರಾ ಮತ್ತು ಕಮಲಾಕರ ಭಟ್ ತಂಡ ಫೆಬ್ರವರಿ 1 ರಂದು ರಾತ್ರಿ 10.30 ರ ಸುಮಾರಿಗೆ ದಾಳಿ ನಡೆಸಿದೆ. ಸುಚಿತ್ರಾ ತನ್ನೊಂದಿಗೆ ಬಂದಿದ್ದವರಿಗೆ ಪತಿ ಮಹೇಶ್‌ನನ್ನು ಬಿಡಬೇಡಿ ಎಂದು ಪ್ರಚೋದನೆ ನೀಡುತ್ತಿದ್ರು. ಕಮಲಾಕರ ಭಟ್ ಮತ್ತಿತರರು ಅಡ್ಡಬಂದ ದೊಡ್ಡಪ್ಪ ವಸಂತ್​ರನ್ನು ಚಾಕುವಿನಿಂದ ಇರಿದರು ಎಂದಿದ್ದಾಳೆ. 

ವಿಷ ಕುಡಿದವರನ್ನ ರಕ್ಷಿಸಿದ್ದೇಗೆ ಪೊಲೀಸರು! ಶಿವಮೊಗ್ಗದಲ್ಲಿ ಒಟ್ಟಾರೆ ಏನೆಲ್ಲಾ ನಡೆಯಿತು! ಹಲವು ಸುದ್ದಿಗಳು ಒಂದೇ ಪುಟದಲ್ಲಿ

ತನಗೆ ಶಿವಮೊಗ್ಗಕ್ಕೆ ಬರಲು ಕಿಂಚಿತ್ತೂ ಆಸಕ್ತಿ ಇರಲಿಲ್ಲ, ಊರಿನಲ್ಲಿಯೇ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದೆ ಆದರೆ ತಮ್ಮ ತಾಯಿ, ತಂದೆ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ, ಒಳ್ಳೆಯ ಶಿಕ್ಷಣ ಕೊಡಿಸುವ ನೆಪದಲ್ಲಿ ಶಿವಮೊಗ್ಗಕ್ಕೆ ಕರೆದುಕೊಂಡು ಬಂದರು. ಆರಂಭದ ದಿನಗಳಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು, ಆದರೆ ದಿನ ಕಳೆದಂತೆ ತಾಯಿ ಕಿರುಕುಳ ನೀಡಲು ಆರಂಭಿಸಿದರು. ನಾವು ಶಿವಮೊಗ್ಗದಲ್ಲಿ  ಕಮಲಾಕರ್​ ಭಟ್ (karunakara bhat story) ಮನೆಯಲ್ಲಿ ವಾಸವಿದ್ವಿ, ಅವರು ಕಮಲಾಕರ್ ಭಟ್ ತಮ್ಮೊಂದಿಗೆ ಸರಿಯಾಗಿ ಮಾತನಾಡುತ್ತಿರಲಿಲ್ಲ, ಮನೆಯ ಕೆಲಸವನ್ನು ನಾವೇ ಮಾಡಬೇಕಿತ್ತು. ತಾಯಿ ಮತ್ತು ಕಮಲಾಕರ್ ಭಟ್ ಕೊಠಡಿಯ ಒಳಗಡೆಯೇ ಇರುತ್ತಿದ್ದರು. ಅವರಿಗೆ ಸೇರಿದ ಆಸ್ತಿ, ಕಾರು ಸೇರಿದಂತೆ ಪ್ರಮುಖ ವ್ಯವಹಾರ ನಮ್ಮ ತಾಯಿ ಹೆಸರಿಗೆ ವರ್ಗಾಯಿಸಲಾಗಿತ್ತು ಮತ್ತು ಎಲ್ಲವನ್ನು ತಮ್ಮ ತಾಯಿನೇ ನೋಡಿಕೊಳ್ತಿದ್ರು ಎಂದಿದ್ದಾಳೆ.

ಅಡಿಕೆ ರೇಟು ₹94,000, ಶಿವಮೊಗ್ಗದಲ್ಲಿ ದಾಖಲೆ,ದಾವಣಗೆರೆ-ಚನ್ನಗಿರಿಯಲ್ಲಿ ಎಷ್ಟಿದೆ ರೇಟು?

ಇನ್ನೂ ಕಮಲಾಕರನಿಗೆ ಕಟ್ಟಡ ನೀಡಿದ್ದ ಮನೆಮಾಲೀಕರ ಪ್ರಕಾರ, ಸುಚಿತ್ರಾ ಬಂದ ಮೇಲೆ ಕಮಲಾಕರ ಭಟ್ ಎರಡು-ಮೂರು ಕಾರುಗಳು ಮತ್ತು ಬುಲೆಟ್ ಬೈಕ್ ಖರೀದಿಸಿದ್ದರು. ಮುದುವಾಳದಲ್ಲಿ 10 ಎಕರೆ ಜಮೀನು ಹೊಂದಿದ್ದ ಭಟ್ಟರು  ಅಕ್ರಮ ಸಂಬಂಧಕ್ಕಾಗಿ ಹತ್ಯಾಕಾಂಡ ನಡೆಸಿದ್ದು ಅಚ್ಚರಿ ಮೂಡಿಸ್ತಿದೆ ಎಂದಿದ್ದಾರೆ.

ವಿಷ ಕುಡಿದವರನ್ನ ರಕ್ಷಿಸಿದ್ದೇಗೆ ಪೊಲೀಸರು! ಶಿವಮೊಗ್ಗದಲ್ಲಿ ಒಟ್ಟಾರೆ ಏನೆಲ್ಲಾ ನಡೆಯಿತು! ಹಲವು ಸುದ್ದಿಗಳು ಒಂದೇ ಪುಟದಲ್ಲಿ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

Siddapura Case and karunakara bhat story Daughter Reveals Shocking Details About Mother Suchitra
Siddapura Case and karunakara bhat story Daughter Reveals Shocking Details About Mother Suchitra
ಒಂದು ಫೋನ್​ ಕಾಲ್​ ಎಲ್ಲದಕ್ಕೂ ಕಾರಣವಾಯ್ತಾ!? ಕರುಣಾಕರ ಕಥೆ Siddapura Case and karunakara bhat story Daughter Reveals Shocking Details About Mother Suchitra

This Article Written by / ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯ್​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ

#Shimoga,shimoga today news,shivamogga latest news,shivamogga live,shivamogga today news,Thirthahalli Today News

ಮುಂದಿನ ಸುದ್ದಿ ಒದಿ