ಆಗುಂಬೆಯಲ್ಲಿ ತಿಂಗಳ ಹಿಂದೆ ನಡೆದಿದ್ದ ಘಟನೆ ಸಂಬಂಧ ಉಡುಪಿಯಲ್ಲಿ ದಾಖಲಾಯ್ತು ಕೇಸ್! ಏನಿದು ಪ್ರಕರಣ?

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Sep 22, 2023 SHIVAMOGGA NEWS’

ಸರಿಸುಮಾರು ಒಂದು ತಿಂಗಳ ಹಿಂದೆ ತೀರ್ಥಹಳ್ಳಿ ತಾಲ್ಲೂಕು ಆಗುಂಬೆಯಲ್ಲಿ ನಡೆದಿದ್ದ ಘಟನೆ ಸಂಬಂಧ ಇದೀಗ ಕಾಪು ಪೊಲೀಸ್ ಸ್ಟೇಷನ್ ನಲ್ಲಿ ಪ್ರಕರಣವೊಂದು ದಾಖಲಾಗಿದೆ.  ಕಲಂ 143 147 341 505(2) 354D r/w 149 IPC. ಅಡಿಯಲ್ಲಿ 10 ಮಂದಿ ವಿರುದ್ಧ ಕೇಸ್ ದಾಖಲಾಗಿದೆ. 

ಏನಿದು ಪ್ರಕರಣ

ಉಡುಪಿ ಮೂಲಕ ಯುವಕ ಹಾಗೂ ಯುವತಿ ಆಗುಂಬೆಗೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಸಿರಿಮನೆ ಫಾಲ್ಸ್​ ನೋಡಿಕೊಂಡು ವಾಪಸ್ ಬರುವಾಗ ಅವರನ್ನ ಅಡ್ಡಗಟ್ಟಿದ್ದ ಯುವಕರ ಗುಂಪೊಂದು ಯುವಕ ಹಾಗೂ ಯುವತಿಯರನ್ನ ಪ್ರಶ್ನೆ ಮಾಡಿ, ವಿಡಿಯೋ ಮಾಡಿದೆ. ಆನಂತರ ವಿಚಾರ ಆಗುಂಬೆ ಠಾಣೆ ಮೆಟ್ಟಿಲೇರಿತ್ತು ಎನ್ನಲಾಗಿದ್ದು, ಬಳಿಕ ಮನೆಯವರು ಬಂದು ಯುವಕ ಮತ್ತು ಯುವತಿಯರನ್ನು ಕರೆದೊಯ್ದಿದ್ದರಂತೆ. 

ಸದ್ಯ ಇದೇ ಪ್ರಕರಣ ಸಂಬಂಧ ಅಂದು ರೆಕಾರ್ಡ್​ ಮಾಡಿದ್ದ ವಿಡಿಯೋವನ್ನು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಈ ಸಂಬಂಧ ಯುವತಿಯ ಸಂಬಂಧಿಕರು ದೂರು ನೀಡಿದ್ದು, ಅದರಡಿಯಲ್ಲಿ ಕೇಸ್ ದಾಖಲಾಗಿದೆ. 10 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸ್ತಿದ್ದಾರೆ. 


ಇನ್ನಷ್ಟು ಸುದ್ದಿಗಳು 

 


 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor