‘ಅಕ್ಕಿ’ ಕಳ್ಳರಿಬ್ಬರನ್ನು ಹಿಡಿದ ಬಿಂದುಮಣಿ IPS ನೇತೃತ್ವದ ತಂಡ!

This Article Written by / Malenadu Today / ಸೆಪ್ಟೆಂಬರ್ 8, 2023

KARNATAKA NEWS/ ONLINE / Malenadu today/ Sep 9, 2023 SHIVAMOGGA NEWS   

ಶಿವಮೊಗ್ಗ  ಪೊಲೀಸರು ಬಹುಮುಖ್ಯವಾದ ಪ್ರಕರಣವೊಂದನ್ನ ಭೇದಿಸಿದ್ದಾರೆ. ಇಲ್ಲಿನ ಅಕ್ಕಿ ಮಾರಾಟ ಮಳಿಗೆಯಲ್ಲಿ ಅಕ್ಕಿ ಪ್ಯಾಕೆಟ್​ಗಳನ್ನು ಕದ್ದ ಪ್ರಕರಣವನ್ನು ಭೇದಿಸಿರುವ ಪೊಲೀಸರು. ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. 

ಏನಿದು ಪ್ರಕರಣ

ಶಿವಮೊಗ್ಗ ನಗರದ ಸಾಗರ ರಸ್ತೆ ಎಪಿಎಂಸಿ ಮಾರ್ಕೇಟ್ ನಲ್ಲಿನ ಎನ್.ಬಿ.ಎಂ ಎಂಟರ್ ಪ್ರೈಸಸ್ ನಲ್ಲಿನ ಮಳಿಗೆಯಲ್ಲಿ ದಿನಾಂಕ 04/09/2023 ರಂದು ಅಕ್ಕಿ ಪಾಕೇಟ್ ಗಳು ಕಳ್ಳತನವಾಗಿತ್ತು. ಈ ಬಗ್ಗೆ  ದಿನಾಂಕ 06/09/2023 ರಂದು ವಿನೋಬನಗರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0172/2023 ಕಲಂ 380 ಐಪಿಸಿ ಅಡಿಯಲ್ಲಿ ಕೇಸ್ ದಾಖಲಾಗಿತ್ತು.  

ಆರೋಪಿಗಳ ಪತ್ತೆ ವಿಶೇಷ ತಂಡ 

ಈ  ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆಗಾಗಿ ಮಿಥುನ್ ಕುಮಾರ್ ಜಿ.ಕೆ ಐ.ಪಿ.ಎಸ್  ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಯವರು ವಿಶೇಷ ತಂಡ ರಚಿಸಿದ್ದರು. ಬಿಂದುಮಣಿ ಆರ್.ಎನ್ ಐ.ಪಿ.ಎಸ್ (ಪ್ರೋ) ಪ್ರಭಾರ ವಿನೋಬನಗರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಸುನಿಲ್ ಬಿ.ಸಿ ಪಿಎಸ್ಐ ವಿನೋಬನಗರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳಾದ ಸಿಪಿಸಿ ರಾಜು, ಚಂದ್ರಾನಾಯ್ಕ್, ಮಲ್ಲಪ್ಪ ಮತ್ತು  ಅರುಣಕುಮಾರ್ ರವರುಗಳನ್ನೊಳಗೊಂಡ ತಂಡ ಇದೀಗ ಪ್ರಕರಣವನ್ನು ಭೇದಿಸಿದ್ದಾರೆ. 

ಆರೋಪಿಗಳ ಬಂಧನ

ದಿನಾಂಕಃ 07-09-2023  ರಂದು ಪ್ರಕರಣದ ಆರೋಪಿ 1) ಕುಮಾರ್ ಕೆ, 36 ವರ್ಷ, ಮೇಲಿನ ತುಂಗಾನಗರ ಶಿವಮೊಗ್ಗ ಟೌನ್ ಮತ್ತು 2) ಜಯಣ್ಣ, 40 ವರ್ಷ, ಅಣ್ಣಾನಗರ ಶಿವಮೊಗ್ಗ ಟೌನ್ ರವರನ್ನ ಪೊಲೀಸರು ಬಂಧಿಸಿದ್ದಾರೆ. 

 

ಆರೋಪಿತರಿಂದ   ಅಂದಾಜು ಮೌಲ್ಯ 1,07,800/- ರೂಗಳ ತಲಾ 26 ಕೆ.ಜಿ. ತೂಕದ 77  ಚೀಲಗಳಲ್ಲಿದ್ದ 20 ಕ್ವಿಂಟಾಲ್‌ ತೂಕದ ಅಕ್ಕಿ ಮತ್ತು ಅಂದಾಜು ಮೌಲ್ಯ 1,50,000/-  ರೂಗಳ ಕೃತ್ಯಕ್ಕೆ ಉಪಯೋಗಿಸಿದ ಪ್ಯಾಸೆಂಜರ್ ಆಟೋವನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.  


   

ಇನ್ನಷ್ಟು ಸುದ್ದಿಗಳು 


 

 

Vinobanagar Police Station

ಮುಂದಿನ ಸುದ್ದಿ ಒದಿ

Leave a Comment