BREAKING NEWS ಮೊಹಮ್ಮದ್​ ಶಾರೀಖ್ ಮತ್ತು ಮಾಜ್ ಮುನೀರ್​ ಮೇಲೆ ಹೆಚ್ಚುವರಿ ಆರೋಪ ಹೊರಿಸಿದ ರಾಷ್ಟ್ರೀಯ ತನಿಖಾ ದಳ NIA

ಹಂಚಿಕೊಳ್ಳಿ
WhatsApp Facebook X Telegram

Shivamogga Mar 8, 2024  ಶಿವಮೊಗ್ಗದಲ್ಲಿ ಸೆರೆಯಾದ ಮಾಜ್ ಮನೀರ್ ಅಹಮದ್ ಹಾಗೂ ಮಂಗಳೂರು ಕುಕ್ಕರ್​ ಬಾಂಬ್​ ಸ್ಫೋಟದ ಆರೋಪಿ ತೀರ್ಥಹಳ್ಳಿಯ ಮೊಹಮ್ಮದ್ ಶಾರೀಖ್  ವಿರುದ್ಧ ಮಂಗಳೂರು ಗೋಡೆ ಪ್ರಕರಣದ ಸಂಬಂಧ ರಾಷ್ಟ್ರೀಯ ತನಿಖಾ ದಳ ಹೆಚ್ಚುವರಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದೆ. ಈ ಸಂಬಂಧ ಪ್ರೆಸ್ ರಿಲೀಸ್​ ಮಾಡಿರುವ ಎನ್​ಐಎ  ದೆಹಲಿಯಲ್ಲಿ ಬಂಧನವಾದ ಅರಾಪತ್ ಅಲಿ ವಿರುದ್ಧ ಎನ್​ಐಎ ಚಾರ್ಜ್​ಶೀಟ್​ ಸಲ್ಲಿಸಿದ್ದು, ಇದೇ ವೇಳೆ ಶಾರೀಖ್ ಹಾಗೂ ಮಾಜ್ ಮುನೀರ್ ವಿರುದ್ಧ ಹೆಚ್ಚುವರಿ ಚಾರ್ಜ್​ಸ್​ ಹಾಕಿದೆ. 

ಎನ್​ಐಎ ಪ್ರಕಟಣೆಯಲ್ಲಿ ಏನಿದೆ

ಹೊಸದಿಲ್ಲಿ, 8 ಮಾರ್ಚ್ 2024 ಮಂಗಳೂರಿನಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಇಸ್ಲಾಮಿಕ್ ಸ್ಟೇಟ್‌ಗೆ ಬೆಂಬಲ ನೀಡುವ  ಗೋಡೆ ಬರಹಕ್ಕೆ ಸಂಬಂಧಿಸಿದಂತೆ  ಶಿವಮೊಗ್ಗದಲ್ಲಿ ಐಸಿಸ್ ಸಂಚು ರೂಪಿಸಿದ  ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಇಬ್ಬರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿರುದ್ಧ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸಿದೆ. 

ಎರಡನೇ ಪೂರಕ ಚಾರ್ಜ್‌ಶೀಟ್‌ನಲ್ಲಿ, ಎನ್‌ಐಎ ಅರಾಫತ್ ಅಲಿ ವಿರುದ್ಧ ಆರೋಪ ಹೊರಿಸಿದೆ ಮತ್ತು ಮೊಹಮ್ಮದ್ ಶಾರಿಕ್ ಮತ್ತು ಮಾಜ್ ಮುನೀರ್ ಅಹ್ಮದ್ ವಿರುದ್ಧ ಆರ್‌ಸಿ-46/2022/ಎನ್‌ಐಎ/ಡಿಎಲ್‌ಐ ಪ್ರಕರಣದಲ್ಲಿ ಹೆಚ್ಚುವರಿ ಆರೋಪಗಳನ್ನು ದಾಖಲಿಸಿದೆ.

2020 ರ ಜನವರಿಯಲ್ಲಿ ಮಂಗಳೂರಿನಲ್ಲಿ ಗೋಡೆ ಬರಹ  ಬರೆಯಲು ಇತರ ಆರೋಪಿಗಳನ್ನು  ಅರಾಫತ್ ಅಲಿ 14 ನೇ ಸೆಪ್ಟೆಂಬರ್ 2023 ರಂದು ಕೀನ್ಯಾದಿಂದ ಹಿಂದಿರುಗುವ ವೇಳೆ ದೆಹಲಿಯಲ್ಲಿ ಬಂಧನವಾಗಿದ್ದ. ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳಾದ ಅಬ್ದುಲ್ ಮಥೀನ್ ತಾಹಾ ಮತ್ತು ಮುಸ್ಸಾವಿರ್ ಹುಸೇನ್ ಶಾಝೇಬ್ ಅವರೊಂದಿಗೆ ಈತ ಈ ಹಿಂದೆ ದುಬೈಗೆ ಪಲಾಯನ ಮಾಡಿದ್ದ. 

ಅಬ್ದುಲ್ ಮಥೀನ್ ಮತ್ತು ಮುಸ್ಸಾವಿರ್ ಹುಸೇನ್ ಅವರ ಸೂಚನೆ ಮೇರೆಗೆ ಅರಾಫತ್ ಮಂಗಳೂರಿನ ಎರಡು ಸ್ಥಳಗಳಲ್ಲಿ ಭಯೋತ್ಪಾದನೆ ಮತ್ತು ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವ ಗೀಚುಬರಹ ಬರೆಯಲು ಮೊಹಮ್ಮದ್ ಶಾರಿಕ್, ಮಾಜ್ ಮುನೀರ್ ಅಹ್ಮದ್ ಮತ್ತು ಇತರರಿಗೆ ತಿಳಿಸಿದ್ದ  ಎಂದು ಎನ್ಐಎ ತನಿಖೆಯಿಂದ ತಿಳಿದುಬಂದಿದೆ.

ಅರಾಫತ್ ತನ್ನ ಸಹಚರರು ಮತ್ತು ಆನ್‌ಲೈನ್ ಹ್ಯಾಂಡ್ಲರ್ ಜೊತೆಗೆ ಐಎಸ್/ಐಎಸ್‌ಐಎಸ್‌ನ ಭಯೋತ್ಪಾದಕ ಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚಿಸುವ ದೊಡ್ಡ ಪಿತೂರಿ ನಡೆಸಿದ್ದರು. ಅರಾಫತ್ ತನ್ನ ಆನ್‌ಲೈನ್ ಹ್ಯಾಂಡ್ಲರ್‌ನಿಂದ ಕ್ರಿಪ್ಟೋ-ಕರೆನ್ಸಿಗಳ ರೂಪದಲ್ಲಿ ಪಡೆದ ಹಣವನ್ನು ಗೋಡೆ ಬರಹ ಬರೆದ ಆರೋಪಿಗಳಿಗೆ ನೀಡಿದ್ದ ಎಂದು ಎನ್​ಐಎ ಆರೋಪಿಸಿದೆ. 

ಮೊಹಮ್ಮದ್ ಶಾರಿಕ್ ಮತ್ತು ಮಾಜ್ ಮುನೀರ್ ಅಹ್ಮದ್ ಸೇರಿದಂತೆ ಒಂಬತ್ತು ಆರೋಪಿಗಳ ವಿರುದ್ಧ ಎನ್‌ಐಎ ಈ ಹಿಂದೆ ಒಂದು ಮುಖ್ಯ ಮತ್ತು ಒಂದು ಪೂರಕ ಆರೋಪಪಟ್ಟಿ ಸಲ್ಲಿಸಿತ್ತು.

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor