ಮಿನಿಸ್ಟರ್​ ಭೇಟಿಗೆ ಮುನ್ನ ಬಾಂಬ್ ಸ್ಕ್ವಾಡ್​ನಿಂದ ಚೆಕ್ಕಿಂಗ್​! ಶಿವಮೊಗ್ಗದಲ್ಲಿ ಹೀಗಿತ್ತು ದೃಶ್ಯ #shivamogga

ಕೊನೆಯ ನವೀಕರಣ: 02 ಮೇ 2026, 2:17 ಅಪರಾಹ್ನ

ಹಂಚಿಕೊಳ್ಳಿ
WhatsApp Facebook X Telegram
ಮಿನಿಸ್ಟರ್​ ಭೇಟಿಗೆ ಮುನ್ನ ಬಾಂಬ್ ಸ್ಕ್ವಾಡ್​ನಿಂದ ಚೆಕ್ಕಿಂಗ್​! ಶಿವಮೊಗ್ಗದಲ್ಲಿ ಹೀಗಿತ್ತು ದೃಶ್ಯ #shivamogga

ಮಿನಿಸ್ಟರ್​ ಭೇಟಿಗೆ ಮುನ್ನ ಬಾಂಬ್ ಸ್ಕ್ವಾಡ್​ನಿಂದ ಚೆಕ್ಕಿಂಗ್​! ಶಿವಮೊಗ್ಗದಲ್ಲಿ ಹೀಗಿತ್ತು ದೃಶ್ಯ .#ShivamoggaNews #MalenaduToday #BSSuresh #MadhuBangarappa #PoliceSecurity #SecurityCheck #KarnatakaMinisters.

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ಬೊಮ್ಮನಕಟ್ಟೆಯಲ್ಲಿ ಇಂದು ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವ ಬಿ.ಎಸ್. ಸುರೇಶ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯ ಹಂತ-2 ಹಾಗೂ ಎನ್.ಜಿ.ಟಿ ಅನುದಾನದ ಅಡಿಯಲ್ಲಿ ನಡೆಯಲಿರುವ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಲಿದೆ. ಇದರ ಜೊತೆಗೆ ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಗೆ ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪ ಬಡಾವಣೆ ಎಂದು ನಾಮಕರಣ ಮಾಡುವ ಸಮಾರಂಭವೂ ಆಯೋಜನೆಗೊಂಡಿದೆ. ಸಚಿವರ ಭೇಟಿಯ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು ವಿಐಪಿಗಳು ತಂಗುವ ಪ್ರವಾಸಿ ಮಂದಿರದಲ್ಲಿ ಶ್ವಾನ ದಳ ಹಾಗೂ ಬಾಂಬ್ ನಿಷ್ಕ್ರಿಯ ದಳದಿಂದ ಕೂಲಂಕಷ ತಪಾಸಣೆ ನಡೆಸಲಾಯಿತು. ಅಧಿಕಾರಿಗಳು ಮೆಟಲ್ ಡಿಟೆಕ್ಟರ್ ಹಾಗೂ ಇತರ ಆಧುನಿಕ ಉಪಕರಣಗಳನ್ನು ಬಳಸಿ ಪ್ರವಾಸಿ ಮಂದಿರದ ಪ್ರತಿ ಕೊಠಡಿ ಹಾಗೂ ಆವರಣವನ್ನು ಪರಿಶೀಲಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಇಲಾಖೆ ಸರ್ಪಗಾವಲು ಹಾಕಿದೆ. ಸಚಿವರ ಕಾರ್ಯಕ್ರಮಗಳಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪಾಲ್ಗೊಳ್ಳಲಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
malenadumedia@gmail.com
ಲೇಖಕರ ಬಗ್ಗೆ

[email protected]

Malenadu Today Contributor