ಶಿವಮೊಗ್ಗ ಪೊಲೀಸ್​ ಹಂಸಾ ಆನ್​ ಡ್ಯೂಟಿ! ಈಕೆ ಕ್ಲಿಯರೆನ್ಸ್ ಕೊಟ್ಟ ಮೇಲೆನೆ ಎಲ್ಲಾ!

ಶಿವಮೊಗ್ಗ ಪೊಲೀಸ್​ ಹಂಸಾ ಆನ್​ ಡ್ಯೂಟಿ! ಈಕೆ ಕ್ಲಿಯರೆನ್ಸ್ ಕೊಟ್ಟ ಮೇಲೆನೆ ಎಲ್ಲಾ!

ಸಚಿವರಾದ ಬಿ.ಎಸ್. ಸುರೇಶ್ ಹಾಗೂ ಎಸ್. ಮಧು ಬಂಗಾರಪ್ಪ ಅವರ ಶಿವಮೊಗ್ಗ ಭೇಟಿಯ ಹಿನ್ನೆಲೆಯಲ್ಲಿ ಪ್ರವಾಸಿ ಮಂದಿರದಲ್ಲಿ ಪೊಲೀಸ್ ಇಲಾಖೆಯಿಂದ ಬಿಗಿ ಭದ್ರತಾ ತಪಾಸಣೆ ನಡೆಸಲಾಯಿತು.

ಶ್ವಾನ ದಳ ಮತ್ತು ಭದ್ರತಾ ಸಿಬ್ಬಂದಿ ಮತ್ತು ಬಾಂಬ್ ಸ್ಕ್ವಾಡ್​ ಶಿವಮೊಗ್ಗದ ಪ್ರವಾಸಿ ಮಂದಿರಕ್ಕೆ ಆಗಮಿಸಿ ಇಂಚಿಂಚೂ ತಪಾಸಣೆ ನಡೆಸಿದರು. ಅದರಲ್ಲಿಯು ಪೊಲೀಸ್ ಡಾಗ್ ಹಂಸಾ, ಸಚಿವರು ಉಳಿದುಕೊಳ್ಳಲಿರುವ ಕೋಣೆಯ ಪ್ರತಿ ಮೂಲೆಯನ್ನು ತಪಾಸಣೆ ನಡೆಸಿ, ಕ್ಲಿಯರೆನ್ಸ್ ನೀಡಿತು.

ಹಂಸಾಳ ಜೊತೆಗೆ ಬಂದಿದ್ದ ಸಿಬ್ಬಂದಿಯ ಎಂಟ್ರಿಯು ಯಾವ ಎನ್​ಐಎ ಅಥವಾ ಕೇಂದ್ರ ಭದ್ರತಾ ಪಡೆಯ ಸ್ಟೈಲ್​ಗೂ ಕಡಿಮೆಯಾಗಿರಲಿಲ್ಲ. ಅದರಲ್ಲಿಯು ತನ್ನ ಕೆರಿಯರ್ ಫೈಲ್​ ಡಿಫಾಲ್ಟೆ ಇಲ್ಲದಿರುವ ಹಂಸಾಳ ಲುಕ್​ ಇನ್ನೂ ವಿಶೇಷವಾಗಿತ್ತು. ತನ್ನನ್ನೆ ಶೂಟ್ ಮಾಡುತ್ತಿದ್ದ ಕ್ಯಾಮರಾವನ್ನು ಸಹ ಅನುಮಾನದಿಂದಲೇ ನೋಡಿ ಹಂಸಾ, ಅಂತಿಮವಾಗಿ ಕ್ಯಾಮರಾಕ್ಕೆ ತಕ್ಕಂತೆ ಪೋಸ್​ ಕೋಟ್ಟು ಪೊಲೀಸ್​ ಸ್ಟೈಲ್​ನಲ್ಲಿ ವಾಕ್ ಮಾಡಿದಳು.

ಬೊಮ್ಮನಕಟ್ಟೆಯಲ್ಲಿ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಆಶ್ರಯ ಬಡಾವಣೆಗೆ ದಿ. ಎಸ್. ಬಂಗಾರಪ್ಪ ಬಡಾವಣೆ ಎಂದು ನಾಮಕರಣ ಮಾಡುವ ಕಾರ್ಯಕ್ರಮ ಆಯೋಜನೆಗೊಂಡಿದೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಚಿವರುಗಳು ಆಗಮನಿಸಿದ್ದರು.

#ShivamoggaNews #MalenaduToday #BSSuresh #MadhuBangarappa #PoliceSecurity #SecurityCheck #KarnatakaMinisters.