ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಇವತ್ತಿನ ಮಲೆನಾಡು ಟುಡೆ ಇ-ಪೇಪರ್‌ನಲ್ಲಿ ಶಿವಮೊಗ್ಗ ದಸರಾ, ಕುಡಿಯುವ ನೀರಿನ ಸಮಸ್ಯೆ, ಸಕ್ರೆಬೈಲು ಆನೆಗಳ ಕುರಿತ ವಿವಾದ, ಏಷ್ಯನ್ ಗೇಮ್ಸ್ ಸಾಧಕರಿಗೆ ನಗದು ಪುರಸ್ಕಾರ, ಮಹರ್ಷಿ ವಾಲ್ಮೀಕಿ ಜಯಂತಿ ಸೇರಿದಂತೆ ಹಲವು ಪ್ರಮುಖ ಸುದ್ದಿಗಳು ಪ್ರಕಟವಾಗಿವೆ.
ಮುಖಪುಟದಲ್ಲಿ ಈ ಬಾರಿಯ ಶಿವಮೊಗ್ಗ ದಸರಾ ಅಕ್ಟೋಬರ್ 11ರಿಂದ 11 ದಿನಗಳ ಕಾಲ ನಡೆಯಲಿದ್ದು, ಹಿರಿಯ ನಟ ಶ್ರೀನಾಥ್ ಉದ್ಘಾಟಿಸಲಿದ್ದಾರೆ ಚಿನ್ನದ ಮುಖವಾಡದೊಂದಿಗೆ ಚಾಮುಂಡೇಶ್ವರಿ ಅಂಬಾರಿ ಉತ್ಸವ, ದಸರಾಗೆ ₹ 2.10 ಕೋಟಿ ಬಜೆಟ್, ಬಹದ್ದೂರ್, ಸೋಮಣ್ಣ ಹಾಗೂ ಸಾಗರ್ ಆನೆಗಳ ಪಾಲ್ಗೊಳ್ಳುವಿಕೆ ಸೇರಿದಂತೆ ದಸರಾ ಕಾರ್ಯಕ್ರಮಗಳ ಸಮಗ್ರ ವಿವರ ಇವತ್ತಿನ ಪತ್ರಿಕೆಯಲ್ಲಿದೆ.

ಇನ್ನೂ ಸಕ್ರೆಬೈಲು ಆನೆ ಬಿಡಾರದ ಆನೆಗಳನ್ನು ದಸರಾ ಮತ್ತು ವಿಜಯದಶಮಿ ಮೆರವಣಿಗೆಯಲ್ಲಿ ಬಳಸಬಾರದು ಎಂದು ವನ್ಯಜೀವಿ ಹಾಗೂ ಪರಿಸರ ಹೋರಾಟಗಾರರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದೆ.
ನಗರದ ವಿವಿಧ ಬಡಾವಣೆಗಳಲ್ಲಿ ಕುಡಿಯುವ ನೀರಿನ ಪೂರೈಕೆ ವ್ಯತ್ಯಯ, ಅನಿಯಮಿತ ಸರಬರಾಜು ಹಾಗೂ ಕಲುಷಿತ ನೀರಿನ ದೂರುಗಳ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕ ಎಸ್.ಎನ್. ಚನ್ನಬಸಪ್ಪ, ಶುದ್ಧ ಕುಡಿಯುವ ನೀರು ಪೂರೈಕೆಯಲ್ಲಿ ಬೇಜವಾಬ್ದಾರಿ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಉಳಿದಂತೆ ವಿವಿಧ ವಿಶೇಷ ಸುದ್ದಿಗಳು ಇವತ್ತಿನ ಇ ಪತ್ರಿಕೆಯಲ್ಲಿದೆ ಗಮನಿಸಿ
ಅಕ್ಟೋಬರ್ 6ರ ‘ಮಲೆನಾಡು ಟುಡೆ’ ಇ-ಪೇಪರ್ ಡೌನ್ಲೋಡ್ ಲಿಂಕ್ ಇಲ್ಲಿದೆ
