ಶಿವಮೊಗ್ಗ: ಫ್ಯಾಮಿಲಿನಾ ಗೆಲ್ಬೇಕು ಅಂತ ಬಂದಿದ್ದೀನಿ ಗಲಾಟೆ ಬೇಡ ಬ್ರೋ; ಧ್ರುವ ಸರ್ಜಾ ಹೊಸ ಸಿನಿಮಾದ ಟೈಟಲ್​​ ರಿಲೀಸ್​​, ಟೀಸರ್​ ನೋಡಿದ್ರಾ?

ಹಂಚಿಕೊಳ್ಳಿ
WhatsApp Facebook X Telegram
ದ್ರುವ ಸರ್ಜಾ ನಟನೆಯ ಹೊಸ ಸಿನಿಮಾ ಘೋಷಣೆ
ದ್ರುವ ಸರ್ಜಾ ನಟನೆಯ ಹೊಸ ಸಿನಿಮಾ ಘೋಷಣೆ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ತಮ್ಮ 38ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿಯನ್ನು ನೀಡಿದ್ದು, ತಮ್ಮ ಮುಂದಿನ ಸಿನಿಮಾದ ಟೈಟಲ್​​ ಅನ್ನು ರಿವೀಲ್​ ಮಾಡಿದ್ದಾರೆ. ಧ್ರುವ ಸರ್ಜಾ ವಸುಧೈವ ಕುಟುಂಬಕಂ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಕುರಿತಾಗಿ ಚಿತ್ರತಂಡ ಟೈಟಲ್​​ ಟೀಸರ್​ ಒಂದನ್ನು ರಿಲೀಸ್ ಮಾಡಿದೆ.

ಹೌದು, ಇದೇ ವರ್ಷದಲ್ಲಿ ಧ್ರುವ ಸರ್ಜಾರ ಕೆಡಿ – ದಿ ಡೆವಿಲ್’​ ಚಿತ್ರ ಬಿಡುಗಡೆಯಾಗಿ ಸುದ್ದಿ ಮಾಡಿತ್ತು. ಅದಾದ ನಂತರ ಧ್ರುವ ಸರ್ಜಾರ ಮುಂದಿನ ಸಿನಿಮಾ ಯಾವುದಿರಬಹುದೆಂದು ಅಭಿಮಾನಿಗಳು ಕಾತುರದಿಂದ ಕಾದು ಕುಳಿತಿದ್ದರು. ಆ ಪ್ರಶ್ನೆಗಳಿಗೆ ಇದೀಗ ತೆರೆಬಿದ್ದಿದ್ದು, ವಸುಧೈವ ಕುಟುಂಬಕಂ ಸಿನಿಮಾದ ಟೈಟಲ್​ ಹೊರಬಿದ್ದಿದೆ.

ಹೆಚ್ಚಾಗಿ ಹೊಡಿ-ಬಡಿ ಸಿನಿಮಾದಲ್ಲಿ ನಟಿಸುತ್ತಿದ್ದ ಧ್ರುವ ಸರ್ಜಾ, ಈ ಬಾರಿ ಫ್ಯಾಮಿಲಿ ಆಡಿಯನ್ಸ್​ ತಲುಪಲು ಫ್ಯಾಮಿಲಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಪೊಗರು ಸಿನಿಮಾ ಖ್ಯಾತಿಯ ನಂದ ಕಿಶೋರ್​ ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾದಲ್ಲಿ ಅಚ್ಚರಿ ಎಂಬಂತೆ ನಂದ ಸುದೀರ್​ ಎಂದು ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.

ಇನ್ನು ಡಿ ಬೀಟ್ಸ್ ಯೂಟ್ಯೂಬ್​ ಚಾನೆಲ್​ನಲ್ಲಿ ಬಿಡುಗಡೆಯಾಗಿರುವ ಟೀಸರ್​ ವಿಚಾರಕ್ಕೆ ಬರೋದಾದ್ರೆ, 1 ನಿಮಿಷ 55 ಸೆಕೆಂಡ್​ ಇರುವ ಟೀಸರ್​ನಲ್ಲಿ ಹಳ್ಳಿ ಪ್ರದೇಶದಲ್ಲಿ ಸ್ಟೈಲಿಶ್​ ಆಗಿ ಜಾಕೆಟ್​ ಹಾಕೊಂಡು ಧ್ರುವ ಸರ್ಜಾ ಸೈಕಲ್​ ಮೇಲೇರಿ ರಸ್ತೆಯಲ್ಲಿ ಹೋಗ್ತಾ ಇರ್ತಾರೆ. ಈ ಸಂದರ್ಭದಲ್ಲಿ ಕುಸ್ತಿ ಪ್ರಾಕ್ಟೀಸ್​ ಮಾಡ್ತಿರೋ ಕುಸ್ತಿಪಟುಗಳು ಧ್ರುವ ಸರ್ಜಾರನ್ನು ನಿಲ್ಲಿಸಿ ಏ ಹೀರೋ ನೋಡೋಕೆ ಖಡಕ್​ ಆಗಿದ್ದೀಯ, ಒಂದ್​ ಕೈ ಮಿಲಾಯಿಸ್ತಿಯಾ? ಎಂದು ಕೇಳುತ್ತಾರೆ. ಅದಕ್ಕೆ ಪ್ರತಿಕ್ರಿಯಿಸಿದ ನಟ, ಫ್ಯಾಮಿಲಿ ಆಡಿಯನ್ಸ್‌ನ ಗೆಲ್ಬೇಕು ಅಂತ ಬಂದಿದ್ದೀನಿ, ಗಲಾಟೆ ಎಲ್ಲಾ ಬ್ಯಾಡ ಬ್ರೋ ಎಂದು ಒಂದು ಮನೆಗೆ ತೆರಳುತ್ತಾರೆ. ಕೊನೆಗೆ ಚಿತ್ರದ ಟೈಟಲ್​ ಅನ್ನು ರಿವೀಲ್​ ಮಾಡಲಾಗುತ್ತದೆ.

ಇನ್ನು ಟೀಸರ್​ ಕ್ವಾಲಿಟಿ ಉತ್ತಮವಾಗಿ ಮೂಡಿಬಂದಿದೆ. ನಟ ಫ್ಯಾಮಿಲಿ ಆಡಿಯನ್ಸ್‌ನ ಗೆಲ್ಬೇಕು ಅಂತ ಬಂದಿದ್ದೀನಿ, ಗಲಾಟೆ ಎಲ್ಲಾ ಬ್ಯಾಡ ಬ್ರೋ ಎಂದು ಹೇಳುವ ಡೈಲಾಗ್ ನೋಡ್ತಿದ್ದರೆ ಇದೊಂದು ಫ್ಯಾಮಿಲಿ ಓರಿಯಂಟೆಡ್ ಸಿನಿಮಾ ಎಂದು ಮೇಲ್ನೋಟಕ್ಕೆ ತಿಳಿದುಬರುತ್ತದೆ. ಈ ಸಿನಿಮಾಗೆ ವಿ. ಹರಿಕೃಷ್ಣ ಸಂಗೀತ ನೀಡಿದ್ದು, ಮೈರಾ ಕ್ರಿಯೇಷನ್ಸ್ ಬಂಡವಾಳ ಹೂಡಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor