ಶಿವಮೊಗ್ಗ : ಬ್ಯಾಂಕ್​ ಮ್ಯಾನೇಜರ್​ನಂತೆ ಪೋನ್​ ಮಾಡಿ ಎಟಿಎಂ ರಿನಿವಲ್​​​ಗೆ ಒ.ಟಿ.ಪಿ ಕೇಳಿದ್ರು? ಕೊಟ್ಟ ವ್ಯಕ್ತಿಗೆ ಮೆಸೇಜ್​​​ ಚೆಕ್​ ಮಾಡಿದಾಗ ಕಾದಿತ್ತು ಶಾಕ್​​

ಹಂಚಿಕೊಳ್ಳಿ
WhatsApp Facebook X Telegram
CEN police station ಶಿವಮೊಗ್ಗ
CEN police station ಶಿವಮೊಗ್ಗ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಮೋಸ ಮಾಡುವವರು ಇರುವವರೆಗೂ ಮೋಸ ಹೋಗುವವರು ಇದ್ದೇ ಇರುತ್ತಾರೆ. ಸೈಬರ್​ ವಂಚನೆಯ ಕುರಿತಾಗಿ ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ ಜನರು ಅದನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಪರಿಣಾಮವಾಗಿ, ಪ್ರತಿನಿತ್ಯ ಸೈಬರ್​ ವಂಚನೆ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇದರ ನಡುವೆ ಶಿವಮೊಗ್ಗದಲ್ಲಿ ಎಟಿಎಂ ರಿನಿವಲ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಬ್ಯಾಂಕ್ ಮ್ಯಾನೇಜರ್‌ನಂತೆ ಕರೆ ಮಾಡಿ, ಸೈಬರ್ ವಂಚಕರು ಲಕ್ಷಾಂತರ ರೂಪಾಯಿ ಹಣವನ್ನು ವಂಚಿಸಿದ್ದಾರೆ.

ಘಟನೆಯ ವಿವರ

ಭಾರತ್ ಜೋಡೋ ಯಾತ್ರೆ 2.0

ದೂರುದಾರರ ದೊಡ್ಡಪ್ಪ ರಾಮಚಂದ್ರ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕೆನರಾ ಬ್ಯಾಂಕ್ ಮ್ಯಾನೇಜರ್‌ನಂತೆ ಫೋನ್ ಮಾಡಿದ್ದಾನೆ. ಫೋನ್ ಮಾಡಿದ ವಂಚಕ, ನಿಮ್ಮ ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ, ಅದನ್ನು ರಿನಿವಲ್ ಮಾಡಬೇಕಾಗಿದೆ. ಆದ್ದರಿಂದ ನಿಮ್ಮ ಮೊಬೈಲ್‌ಗೆ ಬರುವ ಒಟಿಪಿ ನಂಬರ್ ತಿಳಿಸಿ ಎಂದು ನಂಬಿಸಿದ್ದಾನೆ. ಇದನ್ನು ಸತ್ಯವೆಂದು ನಂಬಿದ ರಾಮಚಂದ್ರ ಅವರು ಬಂದ ಒಟಿಪಿ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ. ಹೀಗೆ ಒಟಿಪಿ ಕೇಳುವ ಪ್ರಕ್ರಿಯೆ ಆರು ಬಾರಿ ಪುನರಾವರ್ತನೆಯಾಗಿದೆ. ತದನಂತರ ಮ್ಯಾನೇಜರ್‌ನಂತೆ ಮಾತನಾಡಿದ ವ್ಯಕ್ತಿ, ನಿಮ್ಮ ಎಟಿಎಂ ಕಾರ್ಡ್ ರಿನಿವಲ್ ಆಗಿದೆ ಎಂದು ಹೇಳಿ ಕರೆ ಮುಗಿಸಿದ್ದಾನೆ.

ನಂತರ ದೂರುದಾರರು ತಮ್ಮ ಮೊಬೈಲ್‌ನಲ್ಲಿ ಮೆಸೇಜ್ ಚೆಕ್ ಮಾಡಿದಾಗ ಅವರಿಗೆ ಶಾಕ್ ಕಾದಿತ್ತು. ಅವರ ಖಾತೆಯಿಂದ ಹಂತ ಹಂತವಾಗಿ ಒಟ್ಟು  2,74,291/- ರೂ.ಗಳು ಕಡಿತವಾಗಿತ್ತು.ಕೂಡಲೇ ಸಂಶಯಗೊಂಡು ಬ್ಯಾಂಕಿಗೆ ತೆರಳಿ ವಿಚಾರಿಸಿದಾಗ, ಒಟಿಪಿ ಪಡೆದುಕೊಂಡು ಮೋಸದಿಂದ ಹಣ ವರ್ಗಾವಣೆ ಮಾಡಿಕೊಂಡಿರುವುದು ತಿಳಿದುಬಂದಿದೆ.

ಈ ಹಿನ್ನಲೆ ಕೆನರಾ ಬ್ಯಾಂಕ್ ಮ್ಯಾನೇಜರ್‌ನಂತೆ ನಟಿಸಿ. ಒಟಿಪಿ ಪಡೆದುಕೊಂಡು ಲಕ್ಷಾಂತರ ರೂಪಾಯಿ ವಂಚಿಸಿದವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸುವಂತೆ ಶಿವಮೊಗ್ಗದ ಸಿ ಇ ಎನ್​ ಪೊಲೀಸ್​ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor