ತೀರ್ಥಹಳ್ಳಿ ದುರಂತ : ಮನೆ ಕಳೆದುಕೊಂಡವರಿಗೆ ತಮ್ಮ ಸ್ವಂತಮನೆಯಲ್ಲಿ ವಾಸಕ್ಕೆ ವ್ಯವಸ್ಥೆ ಮಾಡಿದ ಕುರುವಳ್ಳಿ ನಾಗರಾಜ್​​

ಹಂಚಿಕೊಳ್ಳಿ
WhatsApp Facebook X Telegram
Thirthahalli Landslide
Thirthahalli Landslide

Thirthahalli Landslide ತೀರ್ಥಹಳ್ಳಿ ಗಾಂಧಿನಗರದಲ್ಲಿ ಇತ್ತೀಚೆಗೆ ನಡೆದ ಭೀಕರ ಗುಡ್ಡ ಕುಸಿತದ ದುರಂತದಲ್ಲಿ ಮೂವರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದು, ವೀಣಾ ಮತ್ತು ರಮೇಶ್ ಗೌಡ ದಂಪತಿಯ ಮನೆ ಸಂಪೂರ್ಣವಾಗಿ ಧ್ವಂಸವಾಗಿತ್ತು. ಸ್ವಂತ ಮನೆ ಕಳೆದುಕೊಂಡ ಆ ಕುಟುಂಬವು ಅಕ್ಕಪಕ್ಕದವರ ಮನೆಯಲ್ಲಿ ಆಶ್ರಯ ಪಡೆದು ತೀವ್ರ ಸಂಕಷ್ಟದಲ್ಲಿ ದಿನ ದೂಡುತ್ತಿತ್ತು.

ಈ ಕುಟುಂಬದ ಕಷ್ಟವನ್ನು ಕಂಡು ಸ್ಪಂದಿಸಿದ ಜಯ ಕರ್ನಾಟಕ ಸಂಘಟನೆಯ ತೀರ್ಥಹಳ್ಳಿ ತಾಲೂಕು ಅಧ್ಯಕ್ಷ ಕುರುವಳ್ಳಿ ನಾಗರಾಜ್, ಪಟ್ಟಣ ಪಂಚಾಯಿತಿ ಹಾಗೂ ತಾಲೂಕು ಆಡಳಿತದಿಂದ ಶಾಶ್ವತ ಪರಿಹಾರ ಸಿಗುವವರೆಗೂ ವಾಸಿಸಲು ಕುರುವಳ್ಳಿಯಲ್ಲಿರುವ ತಮ್ಮ ಸ್ವಂತ ಮನೆಯನ್ನೇ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಇದೇ ವೇಳೆ, ರಾಜ್ಯ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ. ಆರ್. ಎಂ. ಮಂಜುನಾಥ್ ಗೌಡ ಅವರ ಸಮ್ಮುಖದಲ್ಲಿ ರಮೇಶ್ ಗೌಡ ಅವರ ಕುಟುಂಬಕ್ಕೆ ಅಗತ್ಯ ಗೃಹೋಪಯೋಗಿ ಸಾಮಗ್ರಿಗಳನ್ನು ಹಸ್ತಾಂತರಿಸಲಾಯಿತು.

ಈ ಸಹಾಯಹಸ್ತಕ್ಕೆ ರಾಜ್ಯದ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ಆಪ್ತರು ಹಾಗೂ ಕನಕಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ. ಆರ್. ಮಧುಸೂದನ್ (ಮಧು) ಅವರ ಬೆಂಬಲ ದೊರೆತಿದೆ. ಜೊತೆಗೆ ತಾಯಿಮನೆ ಸುದರ್ಶನ್, ಶಿವಮೊಗ್ಗ ವಿನೋಬನಗರದ ಎಂ. ಶ್ರೀಕಾಂತ್ ಅವರ ಸಂಬಂಧಿ ರಾಕೇಶ್ ಹಾಗೂ ಕುರುವಳ್ಳಿ ನಾಗರಾಜ್ ಅವರ ಸ್ನೇಹಿತರ ಬಳಗದ ಸಹಕಾರದೊಂದಿಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ದುರಂತ ಸಂತ್ರಸ್ತರಿಗೆ ನೀಡಲಾಯಿತು.

ಈ ಮಾನವೀಯ ಕಾರ್ಯಕ್ರಮದಲ್ಲಿ ಅಂಜನ್ ಹೆಗ್ಡೆ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಡಾ. ಸುಂದರೇಶ್, ಪಟ್ಟಣ ಪಂಚಾಯಿತಿ ಸದಸ್ಯರಾದ ರಾಘವೇಂದ್ರ, ರವೀಂದ್ರ ಶೆಟ್ಟಿ, ಮಿಲ್ಕೇರಿ ಹರೀಶ್ ಶೆಟ್ಟಿ, ಅರ್ಜುನ್ ಗೌಡ ಮಳೂರು, ಕವಿರಾಜ್ ಮೇಗರವಳ್ಳಿ, ಸನತ್ ಗೌಡ ಕೊಳವಾಡಿ, ಶ್ರೀಕಾಂತ್ ಬೆಟ್ಟಮಕ್ಕಿ, ಕುರುವಳ್ಳಿ ಗುಂಡ, ಸಚಿನ್ ಶೆಟ್ಟಿ ಭಾರತೀಪುರ, ರಂಜಿತ್, ಅರವಿಂದ್ ಮೇಲಿನ್ ಕುರುವಳ್ಳಿ ಸೇರಿದಂತೆ ಹಲವಾರು ಯುವಕರು ಹಾಗೂ ಸ್ಥಳೀಯ ಸಾರ್ವಜನಿಕರು ಭಾಗವಹಿಸಿದ್ದರು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor