₹9.50 ಲಕ್ಷದ ಚಿನ್ನದ ನಾಣ್ಯದ ರಹಸ್ಯ ಭೇದಿಸಿದ ಪೊಲೀಸರು! ಈ ರೀತಿ ಯಾರಿಗೂ ಸಹ ಆಗಬಹುದು! ಮಾಹಿತಿ ಅರಿಯಿರಿ

ಹಂಚಿಕೊಳ್ಳಿ
WhatsApp Facebook X Telegram
Fake Gold Coin Scam
Fake Gold Coin Scam

Fake Gold Coin Scam / ಮಲೆನಾಡು ಟುಡೆ ಸುದ್ದಿ / ಸಾಗರ / ಚಿನ್ನದ ನಿದಿ ಕೇಸ್​ನಲ್ಲಿ ಆರೋಪಿಯೊಬ್ಬ ಸಿಕ್ಕಿಬಿದ್ದಿದ್ದಾನೆ ಈ ಸಂಬಂಧ ಪೊಲೀಸ್ ಇಲಾಖೆ ತನ್ನ ವಾಟ್ಸಾಪ್​ ಪ್ರಕಟಣೆಯ ಗ್ರೂಪ್​ನಲ್ಲಿ ಮಾಹಿತಿ ನೀಡಿದೆ. ಮಾಹಿತಿಯ ವಿವರವನ್ನ ಗಮನಿಸುವುದಾದರೆ, ಸಾಗರದ ಆನಂದಪುರ ಪೊಲೀಸ್ ಸ್ಟೇಷನ್​ನಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ನಡೆದಿದ್ದ ಕಾರ್ಯಾಚರಣೆಯಲ್ಲಿ ಆರೋಪಿ ಅರೆಸ್ಟ್ ಆಗಿದ್ದಾರೆ.

ಬಂಗಾರದ ನಾಣ್ಯಗಳನ್ನ ನೀಡುವುದಾಗಿ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಯಲ್ಲಾಪುರ ಗ್ರಾಮದ ನಿವಾಸಿ, 30 ವರ್ಷದ ಮಂಜು ಅಲಿಯಾಸ್ ಮಂಜುನಾಥ ವಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಆನಂದಪುರ ಪೊಲೀಸ್ ಸ್ಟೇಷನ್​ ಕೇಸಿನ ವಿವರ

ದಿನಾಂಕ 04/06/2026 ರಂದು ನಡೆದಿದ್ದ ಘಟನೆ ಹಿನ್ನೆಲೆ ಹೀಗಿದೆ. ಸಾಗರ ತಾಲ್ಲೂಕಿನ ಜೋಗಿನಗದ್ದೆ ಗ್ರಾಮಕ್ಕೆ ಜಗದೀಶ್ ಎಂಬುವವರನ್ನು ಕರೆಸಿಕೊಂಡಿದ್ದ ಆರೋಪಿ ಮಂಜು, ತನ್ನ ಬಳಿ ಇರುವ ಬಂಗಾರದ ನಾಣ್ಯಗಳಿವೆ. ಎರ್ಮೆಜೆನ್ಸಿ ಕಾರಣಕ್ಕೆ ಅವುಗಳನ್ನ ಕಡಿಮೆ ರೇಟಿಗೆ ಕೊಡುವುದಾಗಿ ಹೇಳಿದ್ದ. ಅಲ್ಲದೆ ಈ ಸಂಬಂಧ ಸಂತ್ರಸ್ತರಿಂದ 9,60,000 ರೂಪಾಯಿ ನಗದು ಕ್ಯಾಶ್​ ಇಸ್ಕೊಂಡು ನಕಲಿ ಚಿನ್ನ ಕೊಟ್ಟಿದ್ದ. ಘಟನೆಗೆ ಸಂಬಂಧಿಸಿದಂತೆ ಆನಂದಪುರ ಪೊಲೀಸ್ ಠಾಣೆಯಲ್ಲಿ 318(4) ಹಾಗೂ 190 ಬಿ.ಎನ್.ಎಸ್ ಕಾಯ್ದೆಯ ಅಡಿಯಲ್ಲಿ ಕೇಸ್ ಆಗಿತ್ತು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದರು. ಸಾಗರ ಉಪವಿಭಾಗದ ಎಎಸ್‌ಪಿ ಬೆನಕ ಪ್ರಸಾದ್ ಅವರ ಮೇಲ್ವಿಚಾರಣೆಯಲ್ಲಿ ದ್ದ ವಿಶೇಷ ತಂಡದಲ್ಲಿ ಆನಂದಪುರ ಪೊಲೀಸ್ ಠಾಣೆಯ ಪಿಎಸ್‌ಐ ಪ್ರವೀಣ್ ಎಸ್.ಪಿ ಮತ್ತು ಸಿಬ್ಬಂದಿ ಇದ್ದರು. ಈ ತಂಡ ಆರೋಪಿಯನ್ನು ಅರೆಸ್ಟ್ ಮಾಡಿದ್ದಷ್ಟೆ ಅಲ್ಲದೆ ಬಂಧಿತನಿಂದ 7,10,000 ರೂಪಾಯಿ ಕ್ಯಾಶ್ ಜಪ್ತಿ ಮಾಡಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor