ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ : ಜಿಲ್ಲಾಯಾದ್ಯಂತ ಮಳೆಯ ಪ್ರಮಾಣ ಕಡಿಮೆಯಾಗಿದ್ದು ಬಿಲಿಸಿನ ಬೇಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ತುಂಗಾ ಜಲಾಶಯದಲ್ಲಿನ ನೀರಿನ ಪ್ರಮಾಣ ಕೂಡು ಕಡಿಮೆಯಾಗಿದ್ದು, ಇವತ್ತು ಅಂದರೆ ಸೆ.21 ರಂದು ತುಂಗಾ ಜಲಾಶಯದಲ್ಲಿರುವ ನೀರಿನ ಪ್ರಮಾಣದ ಮಾಹಿತಿ ಹೀಗಿದೆ
ಜಲಾಶಯದ ಗರಿಷ್ಠ ನೀರಿನ ಮಟ್ಟ 588.24 ಮೀಟರ್‌ಗಳಾಗಿದ್ದು, ಇಂದು ಸಹ ಜಲಾಶಯವು ಅದೇ ಮಟ್ಟದಲ್ಲಿ ಮುಂದುವರಿದಿದೆ. ಡ್ಯಾಂನಲ್ಲಿ ಸದ್ಯ 3.24 ಟಿ.ಎಂ.ಸಿ ಒಟ್ಟು ನೀರು ಸಂಗ್ರಹವಾಗಿದ್ದು, ಇದರಲ್ಲಿ ಬಳಸಬಹುದಾದ ನೀರು 2.411 ಟಿ.ಎಂ.ಸಿ ಹಾಗೂ ತಳಮಟ್ಟದ (ಡೆಡ್) ನೀರು 0.829 ಟಿ.ಎಂ.ಸಿ ಯಷ್ಟಿದೆ.
ಇಂದು ಜಲಾಶಯಕ್ಕೆ ಒಟ್ಟು 2,475 ಕ್ಯೂಸೆಕ್ ನೀರಿನ ಹರಿವು ಬಂದಿದ್ದು, ಬಂದಷ್ಟೇ ಪ್ರಮಾಣದ ನೀರನ್ನು ವಿವಿಧ ಮಾರ್ಗಗಳ ಮೂಲಕ ಹೊರಗೆ ಬಿಡಲಾಗುತ್ತಿದೆ. ಅದರಲ್ಲಿ ನದಿಗೆ 1,300 ಕ್ಯೂಸೆಕ್, ಆವಿ ಭವನಕ್ಕೆ 20 ಕ್ಯೂಸೆಕ್, ಯು.ಟಿ.ಪಿ ಕಾಲುವೆಗೆ 600 ಕ್ಯೂಸೆಕ್, ಎಡದಂಡೆ ಕಾಲುವೆಗೆ 380 ಕ್ಯೂಸೆಕ್, ಬಲದಂಡೆ ಕಾಲುವೆಗೆ 140 ಕ್ಯೂಸೆಕ್ ಹಾಗೂ ಕುಡಿಯುವ ನೀರಿನ ಪೂರೈಕೆಗಾಗಿ 35 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ.
ಕಳೆದ ವರ್ಷದ ಇದೇ ದಿನಾಂಕಕ್ಕೆ ಹೋಲಿಸಿದರೆ ಜಲಾಶಯದ ನೀರಿನ ಪ್ರಮಾಣದಲ್ಲಿ ಈ ಬಾರಿ ಸಣ್ಣಮಟ್ಟದ ಏರಿಕೆ ಕಂಡುಬಂದಿದೆ. ಕಳೆದ ವರ್ಷ ಜಲಾಶಯದ ಮಟ್ಟ 588.21 ಮೀಟರ್ ಇತ್ತು ಹಾಗೂ ಒಟ್ಟು ಸಂಗ್ರಹ 3.211 ಟಿ.ಎಂ.ಸಿ ಯಷ್ಟಿತ್ತು. ಅಲ್ಲದೆ, ಕಳೆದ ವರ್ಷ 5,351 ಕ್ಯೂಸೆಕ್ ಒಳಹರಿವು ಹಾಗೂ 3,241 ಕ್ಯೂಸೆಕ್ ಹೊರಹರಿವಿತ್ತು.
