ಶಿವಮೊಗ್ಗ : ಆಧಾರ್​ ಕಾರ್ಡ್​ ಅಪ್ಡೇಟ್​ ಮಾಡ್ಸೋದು ಎಲ್ಲಿ ಅಂತ ಯೋಚಿಸ್ತಿದ್ದೀರಾ ? ಹಾಗಾದ್ರೆ ನಿಮಗಾಗಿ ಈ ಸುದ್ದಿ

ಹಂಚಿಕೊಳ್ಳಿ
WhatsApp Facebook X Telegram
New Aadhaar Seva Kendra Opened at Shivamogga
New Aadhaar Seva Kendra Opened at Shivamogga

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಸಾರ್ವಜನಿಕರಿಗೆ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಸೇವೆಗಳನ್ನು ಸುಲಭವಾಗಿ ಮತ್ತು ತ್ವರಿತವಾಗಿ ಒದಗಿಸುವ ಉದ್ದೇಶದಿಂದ ಹೊಸ ಆಧಾರ್ ಸೇವಾ ಕೇಂದ್ರವನ್ನು ಆರಂಭಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಶಿವಮೊಗ್ಗ ಎಸಿ ಡಾ.ಮೈತ್ರಿ ತಿಳಿಸಿದರು.

ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಬರುವ ಯುಐಡಿಎಐ ವತಿಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಹೊಸ ಮಾದರಿಯ ಆಧಾರ್ ಸೇವಾ ಕೇಂದ್ರವನ್ನು (ಎಎಸ್ ಕೆ)ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಮೊದಲನೇ ಮಹಡಿಯಲ್ಲಿ  ಸ್ಥಾಪಿಸಲಾಗಿದ್ದು, ಗುರುವಾರ ಇದಕ್ಕೆ ಚಾಲನೆ ನೀಡಿ ಅವರು‌ ಮಾತನಾಡಿದರು.

ಸಾರ್ವಜನಿಕರು ಆಧಾರ್ ಕಾರ್ಡ್‌ಗೆ ಸಂಬಂಧಿಸಿದ  ಅಗತ್ಯ ಸೇವೆಗಳನ್ನು ಈ ಕೇಂದ್ರದಲ್ಲಿ ಪಡೆದುಕೊಳ್ಳಬಹುದು. ಆಧಾರ್ ಸೇವೆಗಳನ್ನು ಜನಸ್ನೇಹಿಯಾಗಿ ಒದಗಿಸುವ ಮೂಲಕ ಸಾರ್ವಜನಿಕರ ಸಮಯ ಉಳಿತಾಯವಾಗಬೇಕು. ಅಧಿಕಾರಿಗಳು ಸೇವೆಗಳನ್ನು ಸಮರ್ಪಕವಾಗಿ ನಿರ್ವಹಿಸಿ, ಯಾವುದೇ ವಿಳಂಬವಿಲ್ಲದೆ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ತಿಳಿಸಿದರು.

ಶಿವಮೊಗ್ಗ ನಗರದಲ್ಲಿ ಜನಸಾಂದ್ರತೆ ಹೆಚ್ಚುತ್ತಿರುವುದು, ಶೈಕ್ಷಣಿಕ ಸಂಸ್ಥೆಗಳು ಮತ್ತು ಕೈಗಾರಿಕಾ ಕ್ಲಸ್ಟರ್‌ಗಳ ಬೆಳವಣಿಗೆಯಿಂದಾಗಿ ಆಧಾರ್ ನೋಂದಣಿ ಹಾಗೂ ನವೀಕರಣ ಸೇವೆಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ಈ ಹೊಸ ಕೇಂದ್ರದ ಆರಂಭದಿಂದಾಗಿ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಮತ್ತು ಸುಲಭವಾಗಿ ಲಭ್ಯವಾಗುವ ಸೇವೆಗಳು ನೇರವಾಗಿ ಸಿಗಲಿದ್ದು, ನಗರದ ಇತರ ಕೇಂದ್ರಗಳ ಮೇಲಿನ ಒತ್ತಡವೂ ಕಡಿಮೆಗೊಳ್ಳಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಯುಐಡಿಎಐ ಆರ್‌ಒ ಬೆಂಗಳೂರು ಉಪ ನಿರ್ದೇಶಕಿ ಪ್ರಿಯಾ ಶ್ರೀಕುಮಾರ್, ಪ್ರಾಜೆಕ್ಟ್ ಮ್ಯಾನೇಜರ್ ರಿಕೇಶ್ ಕುಮಾರ್, ಸಹಾಯಕ ವ್ಯವಸ್ಥಾಪಕ ಪ್ರಸಾದ್ ಬಾಬು, ಬಿಎಲ್ಎಸ್ ಇಂಟರ್ನ್ಯಾಷನಲ್ ಕ್ಲಸ್ಟರ್ ಮ್ಯಾನೇಜರ್ ಶ್ಯಾಮ್ ಸುಂದರ್, ಆಧಾರ್ ಜಿಲ್ಲಾ ಸಂಯೋಜಕ ಸತೀಶ್ಚಂದ್ರ, ಹಾಜರಿದ್ದರು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor