ಶಿವಮೊಗ್ಗ : ರಾಷ್ಟ್ರೀಯ ಫುಟ್‌ಬಾಲ್ ಪಂದ್ಯಾವಳಿಗೆ ಶಿವಮೊಗ್ಗದ ಪ್ರತಿಭೆ ಪ್ರಣಮ್ ಆಯ್ಕೆ

ಹಂಚಿಕೊಳ್ಳಿ
WhatsApp Facebook X Telegram
Pranam Selected for National U-14 Football
Pranam Selected for National U-14 Football

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ನಮ್ಮಲ್ಲಿರುವ ಕೌಶಲ್ಯವನ್ನು ಗುರುತಿಸಿಕೊಳ್ಳುವುದು ಕೂಡ ಒಂದು ಪ್ರತಿಭೆಯೇ. ಅದು ಎಲ್ಲರಿಗೂ ಸಾಧ್ಯವಾಗುವುದಿಲ್ಲ, ಆದರೆ ಶಿವಮೊಗ್ಗದ ವಿದ್ಯಾನಗರದ 13 ವರ್ಷದ ಯುವಕ ಪ್ರಣಮ್ ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಂಡು, ಇದೀಗ ರಾಷ್ಟ್ರೀಯ ಫುಟ್‌ಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿದ್ದು ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.

ಹೌದು, ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ (SGFI) ಆಶ್ರಯದಲ್ಲಿ ನಡೆಯಲಿರುವ ರಾಷ್ಟ್ರೀಯ ಶಾಲಾ ಕ್ರೀಡಾಕೂಟದ 14 ವರ್ಷದೊಳಗಿನ ಬಾಲಕರ ವಿಭಾಗದ 70 ನೇ ರಾಷ್ಟ್ರ ಮಟ್ಟದ 14 ವರ್ಷ ವಯೋಮಿತಿಯ ಬಾಲಕರ ಫುಟ್ ಬಾಲ್ ಪಂದ್ಯಾವಳಿಯನ್ನು ಮಧ್ಯ ಪ್ರದೇಶ, ಛತಾರಪುರ, ಇಲ್ಲಿ ದಿನಾಂಕ: 12.11.2026 ರಿಂದ 17.11.2026 ರವರೆಗೆ ಆಯೋಜಿಸಿದ್ದು, ಫುಟ್‌ಬಾಲ್ ಪಂದ್ಯಾವಳಿಗೆ ಶಿವಮೊಗ್ಗದ ವಿದ್ಯಾನಗರದ ಪ್ರಣಮ್ ಆಯ್ಕೆಯಾಗಿದ್ದಾರೆ. ಪ್ರಸ್ತುತ ಬೆಂಗಳೂರಿನ ಕ್ರೀಡಾ ಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ಪ್ರಣಮ್, ಮೂಲತಃ ಶಿವಮೊಗ್ಗದ ವಿದ್ಯಾನಗರದವರು.   

ವಿದ್ಯಾನಗರದ 11ನೇ ಕ್ರಾಸ್ ನಿವಾಸಿಗಳಾದ ಮಂಜುನಾಥ್ ಪಿ. ಹಾಗೂ ಸುಧಾ ದಂಪತಿಯ ಪುತ್ರರಾಗಿರುವ ಇವರಿಗೆ ಬಾಲ್ಯದಲ್ಲಿಯೇ ಎಲ್ಲಿಲ್ಲದ ಕ್ರೀಡಾಸಕ್ತಿ ಇತ್ತು. ಓಟ, ಖೋಖೋ ಸೇರಿದಂತೆ ಫುಟ್‌ಬಾಲ್‌ನಲ್ಲಿ ಅತಿ ಹೆಚ್ಚು ಆಸಕ್ತಿ ಹೊಂದಿದ್ದ ಪ್ರಣಮ್, ಇದೀಗ ಫುಟ್‌ಬಾಲ್‌ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.   7ನೇ ತರಗತಿವರೆಗೆ ಶಿವಮೊಗ್ಗದ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ ಪ್ರಣಮ್, ಪ್ರಸ್ತುತ ಬೆಂಗಳೂರಿನ ಕ್ರೀಡಾ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರ ಅತ್ಯುತ್ತಮ ಕ್ರೀಡಾ ಪ್ರದರ್ಶನ ಹಾಗೂ ಅರ್ಹತೆಯ ಆಧಾರದ ಮೇಲೆ ಕರ್ನಾಟಕ ಶಾಲಾ ಶಿಕ್ಷಣ ಆಯುಕ್ತಾಲಯವು ರಾಷ್ಟ್ರೀಯ ಹಂತದಲ್ಲಿ ಭಾಗವಹಿಸಲು ಅರ್ಹತಾ ಪ್ರಮಾಣಪತ್ರವನ್ನು ನೀಡಿದೆ.   

ಫುಟ್‌ಬಾಲ್ ಕ್ರೀಡೆಯಲ್ಲಿ ತಮ್ಮದೇ ಆದ ವಿಶಿಷ್ಟ ಪ್ರತಿಭೆ ಹೊಂದಿರುವ ಪ್ರಣಾಮ್ ಎಂ., ರಾಷ್ಟ್ರಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವುದು ಅವರ ಶಾಲೆ ಹಾಗೂ ಪೋಷಕರಿಗೆ ಹೆಮ್ಮೆಯ ವಿಷಯವಾಗಿದೆ. ಈ ಯುವ ಕ್ರೀಡಾಪಟುವಿನ ಸಾಧನೆಗೆ ಶಾಲಾ ಆಡಳಿತ ಮಂಡಳಿ, ತರಬೇತುದಾರರು ಹಾಗೂ ಕ್ರೀಡಾಭಿಮಾನಿಗಳು ಶುಭ ಹಾರೈಸಿದ್ದಾರೆ.   

ಇದೇ ರೀತಿ ಮುಂದುವರಿದರೆ ಪ್ರಣಮ್ ಮುಂದೊಂದು ದಿನ ಕ್ರೀಡಾ ಕ್ಷೇತ್ರದಲ್ಲಿ ತಮ್ಮದೇ ಆದ  ಮೂಡಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಯುವ ಪ್ರತಿಭೆ ಹೀಗೆ ಕ್ರೀಡಾ ಕ್ಷೇತ್ರದಲ್ಲಿ ಮುಂದುವರಿದು ಜಿಲ್ಲೆಯ ಹೆಸರನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗಲಿ ಎಂಬುದು ಮಲೆನಾಡು ಟುಡೆ ಸುದ್ದಿ ಸಂಸ್ಥೆಯ ಆಶಯವಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor