ಶಿವಮೊಗ್ಗ: ಕಳೆದುಹೋಯ್ತು ಬಿಡು ಅಂದ್ಕೊಂಡಿದ್ದ ಮೊಬೈಲ್​ ಸಿಕ್ಬಿಡ್ತು, ರಿಕವರಿ ಆದ ಫೋನ್​ಗಳು​ ಇಷ್ಟೊಂದ !  

ಹಂಚಿಕೊಳ್ಳಿ
WhatsApp Facebook X Telegram
Shivamogga Police
Shivamogga Police

Shivamogga Police ಶಿವಮೊಗ್ಗ: ನಮ್ಮದ್ದೇನಾದರೂ ಮೊಬೈಲ್ ಕಳೆದು ಹೋದರೆ ಹೋಯ್ತು, ಅದು ಇನ್ನು ಸಿಗುವುದಿಲ್ಲ ಬಿಡು” ಎಂದು ಅಂದುಕೊಳ್ಳುವವರು ನಮ್ಮಲ್ಲಿ ತುಂಬಾ ಜನ ಇರುತ್ತೇವೆ. ಇದರ ನಡುವೆ ಕೆಲವೊಮ್ಮೆ ಮೊಬೈಲ್ ಕಳೆದುಹೋಗಿದೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿ, IMEI ನಂಬರ್ ಕೊಟ್ಟು ಬರುತ್ತೇವೆ. ಆದರೂ ಅದು ಮತ್ತೆ ಸಿಗುತ್ತದೆ ಎನ್ನುವ ನಂಬಿಕೆ ಬಹುತೇಕರಲ್ಲಿ ಇರುವುದಿಲ್ಲ. ಆದರೆ ಶಿವಮೊಗ್ಗ ಪೊಲೀಸರು ಇದೀಗ ವಿಶೇಷ ಕಾರ್ಯಾಚರಣೆ ನಡೆಸಿ ಬರೋಬ್ಬರಿ 50 ಮೊಬೈಲ್ ಫೋನ್‌ಗಳನ್ನು ರಿಕವರಿ ಮಾಡಿದ್ದು, ಅವುಗಳನ್ನು ವಾರಸುದಾರರಿಗೆ ತಲುಪಿಸಿದ್ದಾರೆ.

ಶಿವಮೊಗ್ಗ :  ಗುಡ್ಡೇಕಲ್​​  ಜಾತ್ರೆಗೆ ಡೇಟ್​ ಫಿಕ್ಸ್​​ : ಯಾವಾಗ ?

ಹೌದು, ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ಅಂದರೆ 2024 ರಿಂದ 2026ರ ಅವಧಿಯಲ್ಲಿ CEIR ಪೋರ್ಟಲ್ ಮೂಲಕ ಮೊಬೈಲ್ ಕಳುವಾಗಿರುವ ಕುರಿತು ಅನೇಕ ದೂರುಗಳು ಬಂದಿದ್ದವು. ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರ ತಂಡ, ಮೊಬೈಲ್ ಪತ್ತೆಗಾಗಿ ವಿಶೇಷ ಪಡೆಯನ್ನು ರಚಿಸಿತ್ತು. ತನಿಖೆ ನಡೆಸಿದ ಈ ತಂಡವು ಸುಮಾರು 50 ಮೊಬೈಲ್ ಫೋನ್‌ಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಇದೀಗ ಪತ್ತೆಯಾದ ಮೊಬೈಲ್‌ಗಳ ವಾರಸುದಾರರನ್ನು ಠಾಣೆಗೆ ಕರೆಸಿ, ಅವರ ಫೋನ್‌ಗಳನ್ನು ಅವರಿಗೆ ಹಿಂದಿರುಗಿಸಿದ್ದಾರೆ.

ನಮ್ಮ ಮೊಬೈಲ್ ಕಳೆದುಹೋಯ್ತು, ಇನ್ನು ಏನೂ ಮಾಡಲು ಆಗುವುದಿಲ್ಲ ಎಂದು ಸುಮ್ಮನಾಗದೆ, ಸಾರ್ವಜನಿಕರು ಸೂಕ್ತ ಸಮಯದಲ್ಲಿ ದೂರು ನೀಡಿದರೆ ಎಂತಹದ್ದೇ ಪ್ರಕರಣವನ್ನಾದರೂ ಪೊಲೀಸರು ಭೇದಿಸಿ ನ್ಯಾಯ ದೊರಕಿಸಿಕೊಡುತ್ತಾರೆ ಎನ್ನಲು ಈ ಘಟನೆಯೇ ಸ್ಪಷ್ಟ ಉದಾಹರಣೆಯಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor