SHIVAMOGGA | Jan 21, 2024 | ಸ್ಕೂಲ್ ಬಸ್ನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ ಪ್ರಕರಣವೊಂದು ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ನಡೆದಿದೆ. ಈ ಸಂಬಂಧ IPC 1860 (U/s-323,324,504,506,34) ಅಡಿಯಲ್ಲಿ ಕೇಸ್ ದಾಖಲಾಗಿದ್ದು 8 ಮಂದಿ ವಿರುದ್ಧ ಪ್ರಕರಣ ದರ್ಜ್ ಆಗಿದೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ಘಟನೆ / ಸ್ಕೂಲ್ ಬಸ್ನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿ ಮಲೆ ಹಲ್ಲೆ
ಕಳೆದ 18 ರಂದು ನಡೆದಿದ್ದ ಘಟನೆಯ ವಿಡಿಯೋ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಈ ದೃಶ್ಯ ಪೊಲೀಸರ ಕೈ ಸೇರಿದೆ. ವಿದ್ಯಾರ್ಥಿನಿಯೊಬ್ಬಳನ್ನು ಟಾರ್ಗೆಟ್ ಮಾಡಿದ ಒಂದೇ ಕುಟುಂಬದ ಮಹಿಳೆಯರು ಹಾಗೂ ಪುರುಷರು ಆಕೆಯ ಜಡೆ ಎಳೆದು, ಯೂನಿಫಾರ್ಮ್ ಹರಿದು ಹಲ್ಲೆ ಮಾಡಿದ್ಧಾರೆ. ಈ ವೇಳೆ ಸಹಾಯಕ್ಕೆ ಬಂದ ಸ್ಕೂಲ್ ಡ್ರೈವರ್ ವಿದ್ಯಾರ್ಥಿನಿಯನ್ನು ಕಾಪಾಡಿದ್ದಾರೆ. ಹಲ್ಲೆ ಮಾಡಿದವರಿಂದ ವಿದ್ಯಾರ್ಥಿನಿಯನ್ನ ರಕ್ಷಿಸಿದ ಡ್ರೈವರ್ ನೇರವಾಗಿ ಶಾಲೆ ಬಸ್ ಕೊಂಡೊಯ್ದಿದ್ದಾರೆ. ಬಳಿಕ ವಿದ್ಯಾರ್ಥಿನಿಯ ಸಂಬಂಧಿಕರು ಬಂದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹಲ್ಲೆಗೆ ಸ್ಪಷ್ಟ ಕಾರಣ ತಿಳಿದಬಂದಿಲ್ಲ. ಹಲ್ಲೆಗೊಳಗಾದ ವಿದ್ಯಾರ್ಥಿನಿ ಹಾಗು ಹಲ್ಲೆ ಮಾಡಿದವರು ಸಂಬಂಧಿಕರು ಎಂದು ತಿಳಿದುಬಂದಿದೆ. ವಿದ್ಯಾರ್ಥಿನಿಯ ಕಾರಣಕ್ಕೆ ಖಾಸಗಿ ವಿಚಾರಗಳನ್ನು ಗೌಪ್ಯವಾಗಿ ಇಡಲಾಗಿದೆ. ಸದ್ಯ ಪ್ರಕರಣ ದಾಖಲಿಸಿರುವ ಶಿಕಾರಿಪುರ ತಾಲ್ಲೂಕು ಪೊಲೀಸರು ತನಿಖೆ ನಡೆಸ್ತಿದ್ದಾರೆ. ಇನ್ನೊಂದೆಡೆ ಹಲ್ಲೆಗೊಳಗಾದ ಕುಟುಂಬಸ್ಥರು ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ರವರ ರಕ್ಷಣೆ ಕೇಳಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
