
ಮಲೆನಾಡು ಟುಡೆ ಸುದ್ದಿ / ಜಿಲ್ಲೆಯ ಶಿಕಾರಿಪುರ ತಾಲೂಕಿನ ತರಲಘಟ್ಟ ಕ್ಯಾಂಪ್ ಸಮೀಪ ಜಸ್ಟ್ ಒಂದು ಆಕ್ಸಿಡೆಂಟ್ ಆಗಿರುವ ಬಗ್ಗೆ ವರದಿಯಾಗಿದೆ. ಘಟನೆಯಲ್ಲಿ ಕಾರು ಮತ್ತು ಕ್ಯಾಂಟರ್ ನಡುವೆ ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದ ಮೂವರಿಗೆ ತೀವ್ರ ಪೆಟ್ಟು ಬಿದ್ದಿದೆ. ಈ ಪೈಕಿ ಇಬ್ಬರು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇಷ್ಟೆ ಅಲ್ಲದೆ ಇನ್ನಿಬ್ಬರು ಗಂಭೀರವಾಗಿದ್ದು, ಒಟ್ಟು ಐದು ಮಂದಿಗೆ ಗಾಯಗಳಾಗಿದೆ.
ಈ ಬಗ್ಗೆ ಮಲೆನಾಡು ಟುಡೆ ಸ್ಥಳೀಯವಾಗಿ ಮಾಹಿತಿ ಲಭ್ಯವಾಗಿದ್ದು, ಎರಡು ವೆಹಿಕಲ್ಗಳು ಮುಖಾಮುಖಿ ಡಿಕ್ಕಿಯಾಗಿದೆ. ಹೀಗಾಗಿ ಕಾರು ನುಜ್ಜುಗುಜ್ಜಾಗಿದೆ, ಘಟನೆ ಸ್ಥಳದ ವಿಡಿಯೋ ಕೂಡ ಮಲೆನಾಡು ಟುಡೆಗೆ ಲಭ್ಯವಾಗಿದೆ. ಶಿವಮೊಗ್ಗ–ಶಿಕಾರಿಪುರ–ಹಾನಗಲ್ ರಾಜ್ಯ ಹೆದ್ದಾರಿಯ ತರಲಘಟ್ಟ ಕ್ಯಾಂಪ್ ಬಳಿ ಈ ಅಪಘಾತ ಸಂಭವಿಸಿದೆ. ಶಿರಾಳಕೊಪ್ಪ ಸಮೀಪದ ಮುತ್ತಿಗೆ ಗ್ರಾಮದ ನಿವಾಸಿಗಳಾದ ಕಾರು ಚಾಲಕ ಸಿದ್ದು (34) ಹಾಗೂ ಲಲಿತಮ್ಮ (65) ಮೃತಪಟ್ಟವರು ಎಂದು ತಿಳಿದುಬಂದಿದೆ.



ಮುತ್ತಿಗೆ ಗ್ರಾಮದ ಐವರು ಕಾರಿನಲ್ಲಿ ಶಿವಮೊಗ್ಗದ ಆಸ್ಪತ್ರೆಗೆ ಹೋಗಿದ್ದರಂತೆ. ಅಲ್ಲಿಂದ ವಾಪಸ್ ಊರಿಗೆ ಬರ್ತಿದ್ದಾಗ ಘಟನೆ ಸಂಭೌಇಸಿದೆ. ಅಡಿಕೆ ತುಂಬಿಕೊಂಡು ಹೋಗ್ತಿದ್ದ ಕ್ಯಾಂಟರ್ ಹಾಗೂ ಕಾರು ನೇರವಾಗಿ ಹೊಡೆದುಕೊಂಡಿವೆ. ಘಟನೆಯಲ್ಲಿ ಉಜ್ಜಪ್ಪ (74), ಹನುಮಂತಪ್ಪ (65) ಹಾಗೂ ಜಯಮ್ಮ (55) ಗಾಯಗೊಂಡಿದ್ದಾರೆ. ಇವರನ್ನ ಶಿಕಾರಿಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

