ಸೂಗೂರು ಬಳಿ ರಸ್ತೆ ಪಕ್ಕದ ಹೊಂಡಕ್ಕೆ ಉರುಳಿದ ಜೆಡಿಎಸ್ ಮುಖಂಡರ ಕಾರು

ಹಂಚಿಕೊಳ್ಳಿ
WhatsApp Facebook X Telegram
ಸೂಗೂರು ಬಳಿ ರಸ್ತೆ ಪಕ್ಕದ ಹೊಂಡಕ್ಕೆ ಉರುಳಿದ ಜೆಡಿಎಸ್ ಮುಖಂಡರ ಕಾರು

SHIVAMOGGA  |  Jan 21, 2024  |JD(S) leader’s car   ಶಿವಮೊಗ್ಗದ ಸೂಗೂರು ಬಳಿ ಕಾರೊಂದು ಹೊಂಡಕ್ಕೆ ಬಿದ್ದಿರುವ ಘಟನೆ ಸಂಭವಿಸಿದೆ. ನಿನ್ನೆ ಈ ಘಟನೆ ನಡೆದಿದ್ದು ಕಾರಿನಲ್ಲಿ  ಜೆಡಿಎಸ್​ ಮುಖಂಡರಾದ ಗೀತಾ ಸತೀಶ್ ಹಾಗೂ ಅವರ ಪತಿ ಸತೀಶ್​ರವರು ಇದ್ದರು ಎಂದು ಹೇಳಲಾಗಿದೆ. ಘಟನೆಯಲ್ಲಿ ಇಬ್ಬರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. 

JD(S) leader’s car 

ಶಿವಮೊಗ್ಗದಿಂದ ಸಿದ್ಲಿಪುರಕ್ಕೆ ಹೋಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಸೂಗೂರು ಬಳಿಯಲ್ಲಿ ಕಾರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿದ್ದ ತೋಟವೊಂದರ ಹೊಂಡಕ್ಕೆ ಉರುಳಿದೆ. ಕಾರು ಜಖಂಗೊಂಡಿದೆ. ಇನ್ನೂ ಘಟನೆ ಬಗ್ಗೆ ಶಾಸಕಿ ಶಾರದಾ ಪೊರ್ಯನಾಯ್ಕ್​   ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. 

JD(S) leader's car falls into roadside ditch near Sugur

 

ಜನಸಂಪರ್ಕ ಸಭೆ

ಮೆಸ್ಕಾಂ ಬೆಜ್ಜುವಳ್ಳಿ ಉಪವಿಭಾಗ ಕಚೇರಿಯಲ್ಲಿ ಜ.24 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ಜನ ಸಂಪರ್ಕ ಸಭೆ ನಡೆಯಲಿದ್ದು ಮೆಸ್ಕಾಂ ಅಧಿಕಾರಿ ಭಾಗವಹಿಸುವರು. ಸಂಬಂಧಪಟ್ಟ ಪ್ರದೇಶದ ಗ್ರಾಹಕರು ಸಭೆಯಲ್ಲಿ ಪಾಲ್ಗೊಂಡು ಅಹವಾಲುಗಳನ್ನು ನೀಡಬಹುದು. ಹೆಚ್ಚಿನ ಮಾಹಿತಿಗೆ 8277882835 ನ್ನು ಸಂಪರ್ಕಿಸಬಹುದೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

 


ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor