ಶಿವಮೊಗ್ಗ : ಗಂಡು ಮಗುವಿನ ಭ್ರೂಣ ಪತ್ತೆ ! ಮಕ್ಕಳ ಸಹಾಯವಾಣಿ ಯೋಜನಾ ಸಂಯೋಜಕರಿಂದ ದೂರು

FIR Registered / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ /ಶಿವಮೊಗ್ಗ ನಗರದ ಆರ್.ಎಂ.ಎಲ್ ನಗರದ ರಸ್ತೆಯೊಂದರ ಬದಿಯಲ್ಲಿ ಗಂಡು ಭ್ರೂಣವೊಂದು ಪತ್ತೆಯಾಗಿದೆ. ಈ ಸಂಬಂಧ ಅಪರಿಚಿತ ಪೋಷಕರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿನಾಂಕ 18-06-2026 ರಂದು ಮಧ್ಯಾಹ್ನ ಮಕ್ಕಳ ಸಹಾಯವಾಣಿಗೆ ಬಂದ ಕರೆಯ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಯಾರೋ ಗರ್ಭಧರಿಸಿ ಪ್ರಸವವಾದ ಬಳಿಕ ಭ್ರೂಣ ಮೃತಪಟ್ಟಿದ್ದರಿಂದಲೋ ಅಥವಾ ಜನನವನ್ನು ಮರೆಮಾಚುವ ಉದ್ದೇಶದಿಂದಲೋ ಇದನ್ನು ಬೀಸಾಕಿ ಹೋಗಿರುವ ಶಂಕೆ ವ್ಯಕ್ತವಾಗಿದೆ.

ಮಕ್ಕಳ ಸಹಾಯವಾಣಿ 1098 ರ ಯೋಜನಾ ಸಂಯೋಜಕ ಅಭಿಷೇಕ್ ಸುಬ್ರಮಣ್ಯ ಅವರು ನೀಡಿದ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) 2023 ರ ಸೆಕ್ಷನ್ 94 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಮೃತ ಭ್ರೂಣವನ್ನು ಮೆಗ್ರಾನ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ವರದಿಯನ್ನು ಅವರೆನೆಸ್​ ಉದ್ದೇಶಕ್ಕಾಗಿಮಾತ್ರ ವರದಿಮಾಡಲಾಗಿದೆ.

ನಿಮ್ಮ ವಾಟ್ಸಾಪ್​ಗೆ ಸುದ್ದಿ ಕಳುಹಿಸಲು ಕ್ಲಿಕ್​ ಮಾಡಿ ಗ್ರೂಪ್​ಗೆ ಜಾಯಿನ್ ಆಗಿ :  Whatsapp / https://chat.whatsapp.com/JrsZ8He4nN600n0r3tJItz