ದೊಡ್ಡಪೇಟೆ : ಮೊದಲು ಮೂವರು, ಮೊನ್ನೆ ಮೂವರು! ಬೀಟ್​ ಪೊಲೀಸರ ಕಾರ್ಯಾಚರಣೆ! ಸರಣಿ ಸುಮುಟೋ ಕೇಸ್​ ದಾಖಲು

ಹಂಚಿಕೊಳ್ಳಿ
WhatsApp Facebook X Telegram
Shimoga Honda ActivaRowdy Sheeter Man Assaulted Shimoga Jewelry Stolen Burglary in Shivamogga Shimoga SIMS Hostel Shivamogga Bus Driver Assault Gold Robbery Scam Shivamogga crime news BNS 292 shivamogga doddapete caseshivamogga hero honda bike theft shivamogga news today
Shimoga Honda Activa Rowdy Sheeter Man Assaulted Shimoga Jewelry Stolen Burglary in Shivamogga Shimoga SIMS Hostel Shivamogga Bus Driver Assault Gold Robbery Scam Shivamogga crime news shivamogga doddapete caseshivamogga news today

Doddapete Police / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ದೊಡ್ಡಪೇಟೆ ಪೊಲೀಸ್ ಸ್ಟೇಷನ್​/ ಶಿವಮೊಗ್ಗ ದೊಡ್ಡಪೇಟೆ ಭಾಗದಲ್ಲಿ ಪೊಲೀಸರು ಗಾಂಜಾ ಆಸಾಮಿಗಳನ್ನು ಬೇಟೆಯಾಡುತ್ತಿದ್ದಾರೆ. ನಗರದ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ಸೇವಿಸಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಮೂವರು ಪ್ರತ್ಯೇಕ ವ್ಯಕ್ತಿಗಳನ್ನು ದೊಡ್ಡಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿಯು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಕೆಲದಿನಗಳ ಹಿಂದೆಯು ಈ ಸಂಬಂಧ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಮೂವರ ವಿರುದ್ಧ ಕೇಸ್ ದಾಖಲಸಿದ್ದರು. ಈ ಬಗ್ಗೆ ಮಲೆನಾಡು ಟುಡೆಯು ವರದಿ ಮಾಡಿತ್ತು,. ಆ ವರದಿಯು ಇಲ್ಲಿದೆ ಶಿವಮೊಗ್ಗ : ಸಿದ್ದಯ್ಯ ಸರ್ಕಲ್​, ಮಾರ್ಕೆಟ್, ಅಣ್ಣಾನಗರ, ಬಸ್​ಸ್ಟ್ಯಾಂಡ್​ ಬಳಿ ಒಟ್ಟು ನಾಲ್ವರ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ಸುಮುಟೋ ಕೇಸ್​

Doddapete Police

ಇದೀಗ ಮತ್ತೊಮ್ಮೆ ಕಾರ್ಯಾಚರಣೆ ನಡೆಸಿ ಸುಮುಟೋ ಕೇಸ್ ದಾಖಲಿಸಿದ್ದಾರೆ. ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಸಿಬ್ಬಂದಿ ದಿನಾಂಕ 18-06-2026 ರಂದು ಸಂಜೆ ಬುದ್ಧಾನಗರ, ಅಶೋಕ ವೃತ್ತ ಹಾಗೂ ಮಿಳ್ಳಘಟ್ಟ ವೃತ್ತದಲ್ಲಿ ಪ್ರತ್ಯೇಕ ಕಾರ್ಯಾಚರಣೆ ಕೈಗೊಂಡ ಪೊಲೀಸರು ಮೂವರ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸಸ್ ಕಾಯ್ದೆ 1985 ರ ಸೆಕ್ಷನ್ 27(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನಿಮ್ಮ ವಾಟ್ಸಾಪ್​ಗೆ ಸುದ್ದಿ ಕಳುಹಿಸಲು ಕ್ಲಿಕ್​ ಮಾಡಿ ಗ್ರೂಪ್​ಗೆ ಜಾಯಿನ್ ಆಗಿ :  Whatsapp / https://chat.whatsapp.com/JrsZ8He4nN600n0r3tJItz

ಪ್ರಕರಣದ ವಿವರ ಗಮನಿಸುವುದಾದರೆ, ದಿನಾಂಕ 18-06-2026 ರಂದು ಸಂಜೆ 07-00 ಗಂಟೆಗೆ ದೊಡ್ಡಪೇಟೆ ಠಾಣೆಯ ಸಿಪಿಸಿ ಇಂದ್ರಜೀತ್ ಜಿ. ಹಾಗೂ ಸಿಪಿಸಿ ಚಂದ್ರಪ್ಪ ಬಿ.ಜಿ. ಬಿ.ಹೆಚ್ ರಸ್ತೆ, ಮಿಳ್ಳಘಟ್ಟ ಹಾಗೂ ಬುದ್ಧಾನಗರ ಪ್ರದೇಶದಲ್ಲಿ ಗಸ್ತು ನಿರ್ವಹಿಸುತ್ತಿದ್ದರು. ಈ ವೇಳೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹಿಂಭಾಗದಲ್ಲಿ ಬರುವ ಬುದ್ಧಾನಗರದ ಸಾರ್ವಜನಿಕ ಸ್ಥಳದಲ್ಲಿ ಯುವಕನೊಬ್ಬ ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದು ಕಂಡುಬಂದಿದೆ. ಆತ ಸಾರ್ವಜನಿಕರಿಗೆ ಉಪಟಳ ನೀಡಬಹುದೆಂಬ ಅನುಮಾನದಲ್ಲಿ , ವಶಕ್ಕೆ ಪಡೆದು ಮೆಗ್ಜಿಗಾನ್ಲ್ಲಾ​ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್​ ಗೆ ಒಳಪಡಿಸಿದ್ದರು. ಮೆಡಿಕಲ್ ರಿಪೋರ್ಟ್​ನಲ್ಲಿ ಆತ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.

ಇನ್ನೂ ಅದೇ ದಿನ ಸಂಜೆ 06-30 ರ ಸುಮಾರಿಗೆ ದೊಡ್ಡಪೇಟೆ ಠಾಣೆಯ ಸಿಪಿಸಿ ಗುರುನಾಯ್ಕ್ ಆರ್. ಬಿ.ಹೆಚ್ ರಸ್ತೆ, ಕ್ಲಾರ್ಕ್ ಪೇಟೆ, ಕುಂಬಾರ ಬೀದಿ ಹಾಗೂ ಬಿ.ಬಿ ರಸ್ತೆಗಳಲ್ಲಿ ಗಸ್ತು ತಿರುಗುತ್ತಿದ್ದರು. ಆಗ ಅಶೋಕ ಸರ್ಕಲ್‌ನ ಸಮೀಪ ವ್ಯಕ್ತಿಯೊಬ್ಬ ಮದ್ಯದ ಅಮಲಿನಲ್ಲಿದ್ದಂತೆ ಕಂಡುಬಂದು ಆತನನ್ನು ವಿಚಾರಿಸಿದ್ದಾರೆ. ಬಳಿಕ ಅವನನ್ನು ಸಹ ವಶಕ್ಕೆ ಪಡೆದು ಮೆಗ್ರಾನ್ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಡಿಸಿದ್ಪದಾರೆ. ಗಾಂಜಾ ಸೇವನೆ ದೃಢಪಟ್ಟಿದ್ದರಿಂದ ಕೇಸ್​ ದಾಖಲಿಸಿದ್ದಾರೆ.

ಮತ್ತೊಂದು ಕಾರ್ಯಾಚರಣೆಯಲ್ಲಿ, ದೊಡ್ಡಪೇಟೆ ಠಾಣೆಯ ಸಿಹೆಚ್‌ಸಿ ಸಂದೀಪ ಮಿಳ್ಳಘಟ್ಟ, ಬುದ್ಧಾನಗರ ಮತ್ತು ಆರ್.ಎಂ.ಎಲ್ ನಗರದ ಕಡೆಗಳಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗ ಯುವಕನೊಬ್ಬನನ್ನು ಜನರಿಗೆ ತೊಂದರೆ ಕೊಡುವ ಸಾಧ್ಯತೆ ಮೇರೆಗೆ ವಶಕ್ಕೆ ಪಡೆದು ಮೆಡಿಕಲ್ ಟೆಸ್ಟ್ ಮಾಡಿಸಿದ್ದಾರೆ. ಆತನು ಸಹ ಗಾಂಜಾ ಸೇವಿಸಿದ್ದು ದೃಢಪಟ್ಟ ಹಿನ್ನಲೆಯಲ್ಲಿ ಕೇಸ್ ದರ್ಜ್​ ಮಾಡಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor