Public Place / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ /ವಿಶೇಷವಾಗಿ ತುಂಗಾ ನಗರ ಪೊಲೀಸರು ಗಾಂಜಾ ಆಸಾಮಿಗಳ ಹಿಂದೆ ಬಿದ್ದಿದ್ದಾರೆ.ನಶೆ ಮುಕ್ತ ಅಭಿಯಾನ ಹಾಗೂ ಶಿವಮೊಗ್ಗ ಪೊಲೀಸ್ ಇಲಾಖೆಯ ಬೇಡ ಬ್ರೋ ಕ್ಯಾಂಪೆನ್ ಅಡಿಯಲ್ಲಿ ಕಾರ್ಯಾಚರಣೆ ನಡೆಸುತ್ತಲೇ ಇರುವ ತುಂಗಾನಗರ ಸ್ಟೇಷನ್ ಪೊಲೀಸ್ , ಸೂಳೆಬೈಲ್ ಜನಕ್ಕೆ ಉಪಟಳ ನೀಡುತ್ತಿದ್ದ ಆರೋಪಿಯೊಬ್ಬನನ್ನು ವಶಕ್ಕೆ ಪಡೆದು ಎನ್‌ಡಿಪಿಎಸ್ ಆಕ್ಟ್ ಅಡಿ ಕೇಸ್ ಹಾಕಿದ್ದಾರೆ.
ಸೂಳೆಬೈಲು ವ್ಯಾಪ್ತಿಯಲ್ಲಿ ತುಂಗಾನಗರ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ಪ್ರಶಾಂತ್ ಕುಮಾರ್ ಸಿಪಿಸಿ ನಿತಿನ್ ಕೆ. ಪೆಟ್ರೋಲಿಂಗ್ನಲ್ಲಿದ್ರು. ಈ ವೇಳೆ ರಸ್ತೆಯ ಬಳಿ ವ್ಯಕ್ತಿಯೊಬ್ಬ ಕಿರಿಕ್ ಮಾಡುತ್ತಿದ್ದಾನೆ ಎಂಬ ಕಂಪ್ಲೆಂಟಡ್ ಬಂದಿದೆ.
ದೂರನ್ನ ಆಧರಿಸಿ ಸ್ಥಳಕ್ಕೆ ಹೋದ ಸಿಬ್ಬಂದಿಯನ್ನ ಕಂಡು ಆರೋಪಿ ಎಸ್ಕೇಪ್ ಆಗಲು ಮುಂದಾಗಿದ್ದ. ಅಷ್ಟರಲ್ಲಿ ಜನರು ಪೊಲೀಸರು ಸೇರಿ ಆತನನ್ನು ಹಿಡಿದಿದ್ದಾರೆ. ಬಳಿಕ ಆತನನ್ನು ಸ್ಟೇಷನ್ ಹೌಸ್ ಆಫೀಸರ್ ಫರ್ಮಿಶನ್ ಪಡೆದು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಬೋಧನಾ ಆಸ್ಪತ್ರೆಗೆ ಕರೆದೊಯ್ದು ಮೆಡಿಕಲ್ ಟೆಸ್ಟ್ ಮಾಡಿಸಿದ್ದರು.
ಈ ವೇಳೆ ಆತ ಗಾಂಜಾ ಸೇದಿರುವುದು ಪಕ್ಕಾ ಆಗಿದೆ. ಹೀಗಾಗಿ ಮೆಡಿಕಲ್ ಸ್ಟೇಟ್ಮೆಂಟ್ ಮೇಲೆ ಆರೋಪಿ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ 1985 ರ ಕಲಂ 27(ಬಿ) ಪ್ರಕಾರ ಪ್ರಕರಣ ದಾಖಲಿಸಿ ಕ್ರಮವಹಿಸಿದ್ದಾರೆ ಎಂದು ಮಲೆನಾಡು ಟುಡೆಗೆ ಮಾಹಿತಿ ಲಭ್ಯವಾಗಿದೆ.
