ಶಿವಮೊಗ್ಗ: ಯೂಟ್ಯೂಬ್​​ನಲ್ಲಿ ಬಂದ ಕೇರಳ ಲಾಟರಿ ಜಾಹೀರಾತು ನಂಬಿ ಯುವಕ ಕಳೆದುಕೊಂಡಿದ್ದೆಷ್ಟು ಗೊತ್ತಾ?

ಹಂಚಿಕೊಳ್ಳಿ
WhatsApp Facebook X Telegram
CEN police station ಶಿವಮೊಗ್ಗ
CEN police station ಶಿವಮೊಗ್ಗ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಯೂಟ್ಯೂಬ್​ನಲ್ಲಿ ಬಂದ ಜಾಹೀರಾತು ನಂಬಿ ಶಿವಮೊಗ್ಗದ ವ್ಯಕ್ತಿಯೊಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಸಿಇಎನ್‌ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ

ದೂರುದಾರರು ಯೂಟ್ಯೂಬ್​ನಲ್ಲಿ ವಿಡಿಯೋ ನೋಡುತ್ತಿದ್ದಾಗ ಅವರಿಗೆ ಕೇರಳ ಲಾಟರಿಯ ಜಾಹೀರಾತು ಕಾಣಿಸಿದೆ. ಇದನ್ನು ಸತ್ಯವೆಂದು ನಂಬಿದ ಅವರು ಲಿಂಕ್​ ಮೇಲೆ ಕ್ಲಿಕ್​ ಮಾಡಿದ್ದಾರೆ. ಕ್ಲಿಕ್ ಮಾಡಿದ ಕೂಡಲೇ ಫಾರಂ ಒಂದು ಓಪನ್​ ಆಗಿದ್ದು, ದೂರುದಾರರು ಅದರಲ್ಲಿ ತಮ್ಮ ಮೊಬೈಲ್ ನಂಬ‌ರ್ ಮತ್ತು ಹೆಸರನ್ನು ನಮೂದಿಸಿದ್ದಾರೆ. ನಂತರ ನಂಬರ್‌ಗಳ ಚಾರ್ಟ್ ಓಪನ್ ಆಗಿದ್ದು, ಅದರಲ್ಲಿ ಒಂದು ನಂಬರನ್ನು ಸೆಲೆಕ್ಟ್ ಮಾಡಿದ್ದಾರೆ. ಆಗ ದೂರುದಾರರ ವಾಟ್ಸಾಪ್​​​ ಖಾತೆಗೆ ಕೇರಳ ಲಾಟರಿ ಎಂಬ ಹೆಸರಿನ ಖಾತೆಯಿಂದ 5ನೇ ವಿನ್ನರ್ ಎಂದು ದೂರುದಾರರ ಹೆಸರನ್ನು ಹಾಕಿ, 12 ಲಕ್ಷ ರೂ. ಲಾಟರಿ ಗೆದ್ದಿದ್ದೀರಾ ಎಂಬ ಮೆಸೇಜ್​​ ಅನ್ನು ವಂಚಕರು ಕಳುಹಿಸಿದ್ದಾರೆ.

ಇದನ್ನು ಸತ್ಯವೆಂದು ದೂರುದಾರರು ನಂಬಿದ್ದಾರೆ. ನಂತರ ವಂಚಕರು ನೀಡಿದ ಮೊಬೈಲ್​ ನಂಬರ್​ಗೆ ತಮ್ಮ ಅಕೌಂಟ್​​ ಡೀಟೇಲ್ಸ್​ ಅನ್ನು ಕಳುಹಿಸಿದ್ದಾರೆ. ಬಳಿಕ ಲಾಟರಿ ವಿಚಾರವನ್ನು ವಂಚಕರ ಬಳಿ ಕೇಳಿದಾಗ, ಲಾಟರಿ ಹಣ ವಿತ್‌ಡ್ರಾ ಮಾಡಲು ಸೆಸ್ ಚಾರ್ಜ್, ಟ್ಯಾಕ್ಸ್, ಆಡ್ ಆನ್ ಸರ್ವಿಸ್ ಹಾಗೂ ವಿವಿಧ ಕಾರಣಗಳನ್ನು ನೀಡಿ ಅವರು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ, ಯುಪಿಐ ಐಡಿ ಮತ್ತು ಕ್ಯೂಆರ್ ಕೋಡ್‌ಗಳಿಗೆ ದಿನಾಂಕ: 31-03-2026 ರಿಂದ 27-08-2026 ರವರೆಗೆ ಒಟ್ಟು 8,93,297/ ರೂ. ವರ್ಗಾಯಿಸಿಕೊಂಡಿದ್ದಾರೆ.

ಈ ರೀತಿಯಾಗಿ ಕೇರಳ ಲಾಟರಿ ಏಜೆನ್ಸಿಯವರಂತೆ ನಟಿಸಿ ದೂರುದಾರರಿಗೆ ಲಾಟರಿ ಬಂದಿರುವುದಾಗಿ ನಂಬಿಸಿ, ಲಾಟರಿ ಹಣ ಪಡೆಯಲು ವಿವಿಧ ಚಾರ್ಜಸ್ ನೀಡುವಂತೆ ಹೇಳಿ ಒಟ್ಟು 8,93,297/- ರೂ. ಹಣವನ್ನು ಮೋಸದಿಂದ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದವರನ್ನು ಪತ್ತೆ ಮಾಡಿ, ತಮ್ಮ ಹಣವನ್ನು ವಾಪಸ್ಸು ಕೊಡಿಸಬೇಕೆಂದು ದೂರುದಾರರು ಸಿಇಎನ್‌ ಪೊಲೀಸ್​ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor