ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಜಿಲ್ಲೆಯಾದ್ಯಂತ ಅನೇಕ ಸಮಸ್ಯೆ ಎದುರಾದಾಗ ಜನರಿಗೆ ತಕ್ಷಣ ನೆನಪಾಗೋದು 112 ಪೊಲೀಸರು. ಮ್ಯಾಟರ್ ಎಷ್ಟೇ ದೊಡ್ಡದಿರ್ಲಿ, ಸಣ್ಣದಿರ್ಲಿ ಜನರು ಮಾಡುವ ಒಂದು ಕಾಲ್‌ಗೆ ತಕ್ಷಣ ಸ್ಪಂದಿಸಿ ಸ್ಥಳಕ್ಕೆ ಧಾವಿಸಿ ಸಮಸ್ಯೆಯನ್ನು ಬಗೆಹರಿಸುತ್ತಾರೆ. ಅದರಲ್ಲಿ ಕೆಲವೊಂದು ಮ್ಯಾಟರ್‌ಗಳು ಇಂಟ್ರೆಸ್ಟಿಂಗ್ ಆಗಿದ್ದು, ತುಂಗಾನಗರದಲ್ಲಿ ನಡೆದ ಒಂದು ಘಟನೆಯನ್ನು ಇಲ್ಲಿ ಹೇಳ್ತಿದ್ದೇವೆ ನೋಡಿ.
ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಿಂದ 112 ಸಿಬ್ಬಂದಿಗಳಿಗೆ ಫೋನ್ ಬಂದಿತ್ತು. ಫೋನ್ ಸ್ವೀಕರಿಸಿದಾಗ ನಮ್ಮ ಪಕ್ಕದ ಮನೆಯವರು ಅಡುಗೆ ಮಾಡ್ತಿದ್ದಾರೆ, ಇದರಿಂದ ನಮಗೆ ತೊಂದರೆಯಾಗುತ್ತಿದೆ ಎಂದು ದೂರಿದ್ದಾರೆ. ಈ ವೇಳೆ ಸಿಬ್ಬಂದಿಗಳು ಅರೆ, ಅಡುಗೆ ಮಾಡೋದ್ರಿಂದ ಏನ್ ಸಮಸ್ಯೆ? ಅಂತ ಕೇಳ್ದಾಗ, ಇಲ್ಲ ಸರ್, ಅವರು ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡುತ್ತಿದ್ದಾರೆ. ಇದರಿಂದ ಬರುವ ಹೊಗೆಯಿಂದ ಎಲ್ಲರಿಗೂ ಸಮಸ್ಯೆ ಆಗುತ್ತಿದೆ ಎಂದು ದೂರಿದ್ದಾರೆ.
ಈ ಹಿನ್ನೆಲೆಯಲ್ಲಿ ತಕ್ಷಣವೇ ಸ್ಥಳಕ್ಕೆ ತೆರಳಿದ ಸಿಬ್ಬಂದಿಗಳು, ಮನೆಯವರಿಗೆ ಇನ್ನುಮುಂದೆ ಎತ್ತರವಾಗಿ ಹೊಗೆ ಪೈಪ್ ಅಳವಡಿಸಿಕೊಳ್ಳಿ, ನಿಮ್ಮಿಂದ ಯಾರಿಗೂ ತೊಂದರೆ ಆಗದಿರಲಿ ಎಂದು ತಿಳುವಳಿಕೆ ಹೇಳಿದ್ದಾರೆ.
