ಮಲೆನಾಡು ಟುಡೆ ಇ-ಪೇಪರ್, ಶಿವಮೊಗ್ಗದ ಪ್ರಮುಖ ಸುದ್ದಿಗಳ ಪೂರ್ಣ ವಿವರ!

ಹಂಚಿಕೊಳ್ಳಿ
WhatsApp Facebook X Telegram
malenadu today epaper
malenadu today epaper

Malenadu Today E-Paper ಮಲೆನಾಡು ಟುಡೆ ಓದುಗರೆ, ಇಂದಿನ ಇ-ಪೇಪರ್ (ಮಂಗಳವಾರ, ಆಗಸ್ಟ್ 4, 2026) ನಿಮ್ಮ ಮುಂದಿದೆ. ಮಲೆನಾಡು ಭಾಗದ ಸಮಗ್ರ ಸುದ್ದಿಗಳು, ವಿಶ್ಲೇಷಣೆಗಳು ಹಾಗೂ ವಿಶೇಷ ವರದಿಗಳನ್ನು ಒಳಗೊಂಡಿರುವ ಇಂದಿನ ಸಂಚಿಕೆಯನ್ನು ನೀವು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಇಂದಿನ ಪತ್ರಿಕೆಯ ಕೆಲವು ಪ್ರಮುಖ ಮುಖ್ಯಾಂಶಗಳು

  • ಮಲೆನಾಡಿನಲ್ಲಿ ಮಳೆ ಇಳಿಕೆ, ಜಲಾಶಯಗಳ ಒಳಹರಿವು ಕುಸಿತ: ತಿಂಗಳ ಆರಂಭದಲ್ಲಿ ಅಬ್ಬರಿಸಿದ್ದ ಮಳೆ, ಕಳೆದ 24 ಗಂಟೆಗಳಲ್ಲಿ ಕೊಂಚ ತಗ್ಗಿದೆ. ಇದರಿಂದಾಗಿ ಲಿಂಗನಮಕ್ಕಿ, ಭದ್ರಾ ಮತ್ತು ತುಂಗಾ ಜಲಾಶಯಗಳ ಒಳಹರಿವಿನ ಪ್ರಮಾಣ ಅಂದಾಜು ಅರ್ಧದಷ್ಟು ಕಡಿಮೆಯಾಗಿದೆ. ಆದಾಗ್ಯೂ, ಲಿಂಗನಮಕ್ಕಿ ಜಲಮಟ್ಟ 1.20 ಅಡಿ ಏರಿಕೆ ಕಂಡಿದ್ದು, ವಾರಾಹಿ ವ್ಯಾಪ್ತಿಯಲ್ಲಿ ಮಳೆ ಮುಂದುವರಿದಿದೆ.
  • ಅನಧಿಕೃತ ವಾಹನಗಳ ತೆರವು ಕಾರ್ಯಾಚರಣೆ ಚುರುಕು: ಶಿವಮೊಗ್ಗ ನಗರದಲ್ಲಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗಿದ್ದ 84 ಅನಾಥ ವಾಹನಗಳ ಪೈಕಿ, ನೋಟಿಸ್ ನೀಡಿದರೂ ತೆರವುಗೊಳಿಸದ 16 ವಾಹನಗಳನ್ನು ಪೊಲೀಸ್ ಇಲಾಖೆ ಟೋಯಿಂಗ್ ಮೂಲಕ ಜಪ್ತಿ ಮಾಡಿದೆ.
  • ಬೇಳೂರು ಗೋಪಾಲಕೃಷ್ಣ ರಾಜೀನಾಮೆ ನಿರ್ಧಾರ ವಾಪಸ್: ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೇಸರಗೊಂಡು ರಾಜೀನಾಮೆಗೆ ಮುಂದಾಗಿದ್ದ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದ ಬಳಿಕ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
  • ಕಾಗೋಡು ತಿಮ್ಮಪ್ಪರಿಂದ ಸಾಂತ್ವನ ಮತ್ತು ಶುಭಾಶಯ: ನೂತನ ಸಚಿವ ಮಧು ಬಂಗಾರಪ್ಪಗೆ ಕರೆ ಮಾಡಿ ಶುಭಾಶಯ ತಿಳಿಸಿರುವ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ, ಅಸಮಾಧಾನಗೊಂಡಿದ್ದ ಶಾಸಕ ಬೇಳೂರು ಗೋಪಾಲಕೃಷ್ಣರಿಗೂ ಕರೆ ಮಾಡಿ ತಾಳ್ಮೆಯಿಂದಿರುವಂತೆ ಸಾಂತ್ವನ ಹೇಳಿದ್ದಾರೆ.
  • ವಾಲ್ಮೀಕಿ ಹಗರಣ – ಕಳಂಕಿತರಿಗೆ ಮಂತ್ರಿಗಿರಿ, ಬಿಜೆಪಿ ಆಕ್ರೋಶ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಆರೋಪಿಯಾಗಿದ್ದ ಬಿ. ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಂಡಿರುವುದನ್ನು ಖಂಡಿಸಿ ಶಾಸಕ ಎಸ್.ಎನ್. ಚನ್ನಬಸಪ್ಪ ವಾಗ್ದಾಳಿ ನಡೆಸಿದ್ದಾರೆ.
  • ತುಂಗಾ ನದಿಗೆ ಬಾಗಿನ ಅರ್ಪಣೆ: ಮೈದುಂಬಿ ಹರಿಯುತ್ತಿರುವ ತುಂಗಾ ನದಿಗೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ಪತ್ನಿ ಜಯಲಕ್ಷ್ಮಿ ಮತ್ತು ಕುಟುಂಬದ ಸದಸ್ಯರು ವಿಶೇಷ ಪೂಜೆ ಸಲ್ಲಿಸಿ ಬಾಗಿನ ಸಮರ್ಪಿಸಿದ್ದಾರೆ.
  • ‘ಪ್ರತಿಭಟನೆಯ ಧ್ವನಿಗಳು’ ಕೃತಿ ಲೋಕಾರ್ಪಣೆ: ಪ್ರಾಧ್ಯಾಪಕ ಡಾ. ಸಿ. ಚನ್ನಪ್ಪ ವಾಲೆಮನೆ ಅನುವಾದಿಸಿರುವ ‘ವಾಯ್ಸ್ ಆಫ್ ಪ್ರೊಟೆಸ್ಟ್’ ಇಂಗ್ಲಿಷ್ ಕೃತಿಯ ಕನ್ನಡ ಆವೃತ್ತಿ ‘ಪ್ರತಿಭಟನೆಯ ಧ್ವನಿಗಳು’ ಬಿಡುಗಡೆಗೊಂಡಿದೆ.

ಇ-ಪೇಪರ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?

ಇಂದಿನ ಸಂಪೂರ್ಣ ಇ-ಪೇಪರ್ ಓದಲು ಕೆಳಗೆ ನೀಡಿರುವ ಗೂಗಲ್ ಡ್ರೈವ್ ಲಿಂಕ್ ಬಳಸಿ.

ಇಂದಿನ ಮಲೆನಾಡು ಟುಡೆ ಇ-ಪೇಪರ್ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ ಮಲೆನಾಡು ಟುಡೆ ಇ ಪೇಪರ್​ ಲಿಂಕ್

ಅಥವಾ, ಇಲ್ಲಿಯೇ ನೀವು ನೇರವಾಗಿ ಇ ಪೇಪರ್​ನ್ನು ಓದಬಹುದು ಅಲ್ಲದೆ ಪೇಪರ್ ಅನ್ನು ಡೌನ್​ಲೋಡ್ ಮಾಡಬಹುದು ಮೇಲ್ಭಾಗದಲ್ಲಿರುವ ‘ಡೌನ್‌ಲೋಡ್’ (Download) ಐಕಾನ್ ಕ್ಲಿಕ್ ಮಾಡಿ ನಿಮ್ಮ ಸಾಧನಕ್ಕೆ ಸೇವ್ ಮಾಡಿಕೊಳ್ಳಬಹುದು

ಹೆಚ್ಚಿನ ಸ್ಥಳೀಯ ಸುದ್ದಿಗಳು ಮತ್ತು ಅಪ್‌ಡೇಟ್‌ಗಳಿಗಾಗಿ ಮಲೆನಾಡು ಟುಡೆ ವೆಬ್‌ಸೈಟ್‌ಗೆ ಭೇಟಿ ನೀಡಿ ಹಾಗೂ ನಮ್ಮ ವಾಟ್ಸಾಪ್ ಸಂಖ್ಯೆಯನ್ನು (9353314090) ಸೇವ್ ಮಾಡಿಕೊಳ್ಳಿ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor