ಶಿರಾಳಕೊಪ್ಪ | ಆಸ್ತಿ ಕೊಡದ ಅಪ್ಪ ಮತ್ತೊಂದು ಮದುವೆಯಾದ, ಸಿಟ್ಗಿಗೆದ್ದ ಮಕ್ಕಳು ಸುಪಾರಿ ಕೊಟ್ಟು ತಂದೆಯನ್ನೆ ಕೊಂದರು

ಹಂಚಿಕೊಳ್ಳಿ
WhatsApp Facebook X Telegram

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪದಲ್ಲಿ ಕೊಲೆ ಪ್ರಕರಣವೊಂದು ಬಯಲಾಗಿದೆ. ಕಳೆದ ತಿಂಗಳ 29 ನೇ ತಾರೀಖು ನಡೆದಿದ್ದ ಕೊಲೆ ಪ್ರಕರಣ ಸಂಬಂಧ ಕೇವಲ ಯುಡಿಆರ್​ ದಾಖಲಾಗಿತ್ತು. ಬಳಿಕ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಶಿರಾಳಕೊಪ್ಪ ಪೊಲೀಸರು (shiralakoppa police station) ಇದೀಗ ಕೇಸ್​ ಭೇದಿಸಿದ್ದು, ಪುಣೇದಹಳ್ಳಿಯ ಬಳಿಯಲ್ಲಿನ ಚರಡಿಯಲ್ಲಿ ಸಿಕ್ಕ ಹೆಣದ ಹಿಂದಿನ ರಹಸ್ಯ ಹೊರಹಾಕಿದ್ಧಾರೆ. 

ಇದನ್ನು ಸಹ ಓದಿ : ಶಿವಮೊಗ್ಗ ಚಿಕ್ಕಮಗಳೂರು ಹಾಸನ ಮತ್ತು ಕೊಡಗು ಇವತ್ತು ಮಳೆ ಇನ್ನೂಜೋರು

ತಂದೆಯನ್ನು ಕೊಲೆಗೆ ಮಕ್ಕಳ ಸುಪಾರಿ : ಇತ್ತೀಚೆಗೆ ತಂದೆಯೇ ಮಗನನ್ನ ಕೊಲ್ಲ ಸುಪಾರಿ ಕೊಟ್ಟಿದ್ದು ಸುದ್ದಿಯಾಗಿತ್ತು. ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದಲ್ಲಿ ಮಕ್ಕಳೇ ತಂದೆಯ ಕೊಲೆಗೆ ಸುಪಾರಿ ನೀಡಿರುವ ವಿಚಾರ ಈ ಪ್ರಕರಣದಲ್ಲಿ ಬೆಳಕಿಗೆ ಬಂದಿದೆ. ಇಷ್ಟಕ್ಕೂ ನಡೆದಿದ್ದು ಏನು ಎಂಬುದನ್ನ ತಿಳಿಯುತ್ತಾ ಹೋದರೆ, ಎಲ್ಲವೂ ಆಸ್ತಿಗಾಗಿ, ಎಲ್ಲವೂ ದುಡ್ಡಿಗಾಗಿ ಎಂಬ ಕಲಿಗಾಲದ ವಾಸ್ತವ ವಿಚಾರ ಎದುರಾಗುತ್ತದೆ. 

ಇದನ್ನು ನೋಡಿ : ಶಿವಮೊಗ್ಗದಲ್ಲಿ ಮಾಂಡೌಸ್ ಚಂಡಮಾರುತದ ಎಫೆಕ್ಟ್ ಹೇಗಿದೆ ಗೊತ್ತಾ? ವಿಡಿಯೋ ನೋಡಿ

ನಡೆದಿದ್ದು ಏನು ? 

ಶಿರಾಳಕೊಪ್ಪದ ಬೋಗಿ ಗ್ರಾಮದಲ್ಲಿ ಕೆಎಸ್​ಆರ್​ಪಿ ಆರ್​ಎಸ್​ಐ ಆಗಿದ್ದ ನಾಗೇಂದ್ರಪ್ಪರವರು ವಾಸವಿದ್ರು. ಇವರಿಗೆ ಐದುವರೆ ಎಕೆರೆ ಜಮೀನಿತ್ತು, ಈ ಪೈಕಿ ಐದು ಎಕೆರೆಗೆ ತೋಟ ಕೂರಿಸಿದ್ರು. ಅದು ಈಗೀಗ ಫಸಲು ಸಹ ಕೊಡುತ್ತಿತ್ತು. ಈ ಮಧ್ಯೆ ನಾಗೇಂದ್ರಪ್ಪ ಇನ್ನೊಬ್ಬಾಕೆಯನ್ನ ಮದುವೆಯಾಗಿದ್ಧಾರೆ. ಐವರು ಬೆಳೆದ ಮಕ್ಕಳಿಗೆ ಮದುವೆ ಮಾಡಿಸಿದ್ದ ನಾಗೇಂದ್ರಪ್ಪ, ಖುದ್ದು ಇನ್ನೊಂದು ಮದುವೆಯಾಗಿದ್ದು, ಮನೆಯ ಗಂಡು ಮಕ್ಕಳಿಗೆ ಸಹಿಸಲಾಗಿಲ್ಲ. ಆದಾಗ್ಯು ಅಪ್ಪನ ಚಟಕ್ಕೆ ವಿರೋಧ ಮಾಡದೇ, ಅಪ್ಪನ ಮದುವೆಗೆ ಸಾಕ್ಷಿಯಾಗಿದ್ದರು. 

ಈ ಮಧ್ಯೆ ನಾಗೇಂದ್ರಪ್ಪ, ತನ್ನ ಇನ್ನೊಂದು ಮದುವೆಗೆ ಸಾಕ್ಷಿಯಾಗಿ ಮಗುವೊಂದನ್ನ ಪಡೆದಿದ್ದ. ಈ ಮಧ್ಯೆ ಮಕ್ಕಳಿಗೆ ಆಸ್ತಿ ಪಾಲು ಮಾಡು ಕೊಡಬೇಕು ಎಂದು ಮೊದಲೆ ಹೆಂಡ್ತಿ ಮಕ್ಕಳು ತಂದೆಗೆ ದುಂಬಾಲು ಬಿದ್ದಿದ್ಧಾರೆ. ಆದರೆ ನಾಗೇಂದ್ರಪ್ಪ ಯಾರಿಗೂ ಆಸ್ತಿ ಪಾಲು ಮಾಡಿಕೊಟ್ಟಿರಲಿಲ್ಲ. ಇದೇ ವಿಚಾರಕ್ಕೆ ಊರಲ್ಲಿ ನ್ಯಾಯ ಪಂಚಾಯಿತಿ ಆಗಿದ್ದು, ಐದುವರೆ ಎಕೆರೆ ಜಾಗವನ್ನು ಮೂರು ಪಾಲು ಮಾಡಿ ಮಾತುಕತೆ ಸಂಧಾನಕ್ಕೆ ತಂದಿದ್ದರು. 

ಇದನ್ನು ಪೂರ್ತಿ ಓದಿ : ಸಾರ್ವಜನಿಕರಿಗೆ ಸೂಚನೆ | ಡಿ.13 ರವರೆಗೆ 6 ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್​| ಯಾವ್ಯಾವ ಜಿಲ್ಲೆಗಳಲ್ಲಿ ಯಾವಾಗ ಮಳೆಯಾಗಲಿದೆ ಎಂಬ ವಿವರ ಇಲ್ಲಿದೆ

ಆಸ್ತಿ ಕೊಡದ ಅಪ್ಪ, ಸುಪಾರಿ ಕೊಟ್ಟ ಮಕ್ಕಳು

ಆದರೆ ನಾಗೇಂದ್ರಪ್ಪ ಇದಕ್ಕೆ ಒಪ್ಪದೆ ಮಕ್ಕಳ ಜೊತೆ ಜಗಳ ತೆಗೆದಿದ್ದರಿಂದ, ಮಗ ಉಮೇಶ್ ಎಂಬಾತ ಭದ್ರಾವತಿ ಕೋರ್ಟ್​ನಲ್ಲಿ ಕೇಸ್ ಹಾಕಿದ್ದನಂತೆ. ಈ ಕೇಸ್​ ನಾಗೇಂದ್ರಪ್ಪನ ಅಂತ್ಯಕ್ಕೆ ಕಾರಣವಾಗುತ್ತೆ ಎಂಬುದು ಸ್ವತಃ ನಾಗೇಂದ್ರಪ್ಪನಿಗೆ ತಿಳಿದಿರಲಿಲ್ಲ. ಏಕೆಂದರೆ ಅತ್ತ ಇನ್ನೊಂದು ಮದುವೆಯಾಗಿದ್ದ ನಾಗೇಂದ್ರಪ್ಪ, ಇನ್ನೊಂದು ಮಗು ಮಾಡಿಕೊಂಡಿದ್ದರಿಂದ ಇತ್ತ ಮೊದಲ ಹೆಂಡ್ತಿ ಮಕ್ಕಳು ಮಂಜುನಾಥ್ ಹಾಗೂ ಉಮೇಶ್ ಸಿಟ್ಟಾಗಿದ್ದರು. ಹೀಗೆ ಬಿಟ್ಟರೇ, ಅಪ್ಪ ಹಿಸ್ಸೆ ಕೊಡಲಾರ ಎಂದುಕೊಂಡು ಆತನನ್ನ ಉಳಿಸಬಾರದು ಎಂಬ ತೀರ್ಮಾನಕ್ಕೆ ಬಂದಿದ್ಧಾರೆ. 

ಮನಸ್ಸಲ್ಲಿ ಬಂದ ಆಲೋಚನೆಯನ್ನ ಘಟ್ಟಿಗೊಳಿಸುತ್ತಾ ಮುಂದುವರಿದ ಮಂಜುನಾಥ್​ ಇದೇ ಬೋಗಿ ಗ್ರಾಮದ  ರಿಜ್ವಾನ್​, ಶಿಕಾರಿಪುರ ಪಟ್ಟಣದ ಹಬೀಬುಲ್ಲಾ, ಮತ್ತು ಸುಹೇಲ್​ ಎಂಬವರಿಗೆ ತಂದೆಯ ಕೊಲೆ ಸುಪಾರಿಯನ್ನು ನೀಡಿದ್ದಾರೆ. ಅಪ್ಪನನ್ನ ಕೊಂದು ಹುಗಿದರೆ, ಐದು ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದ್ಧಾನೆ.ಇನ್ನೂ ಸುಪಾರಿ ಪಡೆದ ದುಷ್ಕರ್ಮಿಗಳು, 09-11-2022 ರಂದು , ನಾಗೇಂದ್ರಪ್ಪ ಭದ್ರಾವತಿ ಕೋರ್ಟ್‌ ಗೆ ಹೋಗಿ ಬೈಕ್ ನಲ್ಲಿ ಬರುತ್ತಿರುವಾಗ ಕುಸೂರು ಹತ್ತಿರ ಲಗೇಜ್ ಆಟೋದಿಂದ ಡಿಕ್ಕಿ ಹೊಡಿಸಿ ಅಪಘಾತ ಪಡಿಸಿದ್ದರು. ಆದರೆ ಆ ಸಮಯದಲ್ಲಿ  ನಾಗೇಂದ್ರಪ್ಪರಿಗೆ ಯಾವುದೇ ರೀತಿಯ ಪ್ರಾಣ ಹಾನಿಯಾಗಿರಲಿಲ್ಲ. ಮೇಲಾಗಿ ಘಟನೆ ಬಗ್ಗೆ ಅವರು ಕಂಪ್ಲೇಂಟ್ ಕೂಡ ಕೊಟ್ಟಿರಲಿಲ್ಲ

ಇದನ್ನು ಓದಿ : ಶಿವಮೊಗ್ಗದಲ್ಲಿ ದಾವಣಗೆರೆಯ ಮೂಲದ ಮೂವರು ವಿದ್ಯಾರ್ಥಿಗಳ ದುರ್ಮರಣ | ಘಟನೆಗೆ ಕಾರಣವೇನು?

ಎರಡು ಸಲ ಕೊಲೆಗೆ ಯತ್ನ

ಪುನಃ ದಿನಾಂಕ 29-11-2022 ರಂದು ನಾಗೇಂದ್ರಪ್ಪ ಬೆಳಗ್ಗೆಯೇ ಭದ್ರಾವತಿ ನ್ಯಾಯಾಲಯಕ್ಕೆ ಹೋಗಿ ವಾಪಾಸ್‌ ಶಿಕಾರಿಪುರಕ್ಕೆ ಬಂದಿದ್ಧಾರೆ. ಈ ವೇಳೆ  ರಿಜ್ವಾನ್, ಹಬೀಬುಲಾ ಸುಹೈಲ್ ಲಗೇಜ್ ಆಟೋದಲ್ಲಿ ಶಿಕಾರಿಪುರದಲ್ಲಿ ನಾಗೇಂದ್ರಪ್ಪರನ್ನ ಮಾತನಾಡಿಸಿದ್ದಾರೆ. ಬಳಿಕ ತಮ್ಮ ಆಟೋದಲ್ಲಿಯೇ ನಾಗೇಂದ್ರಪ್ಪರನ್ನು ಹತ್ತಿಸಿಕೊಂಡು ಪುಣೇದಹಳ್ಳಿ, ಗ್ರಾಮದ ಹತ್ತಿರ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಅವರಿಗೆ ಆಟೋದಲ್ಲಿಯೇ 3 ಜನ ಸೇರಿಕೊಂಡು ಬಲವಂತವಾಗಿ ಮತ್ತು (ನಶೆ) ಬರುವ ಚೌಷದಿ ಕುಡಿಸಿ, ಉಸಿರುಗಟ್ಟಿಸಿದ್ದಾರೆ.  ಬಳಿಕ ಅದೇ ಆಟೋದಲ್ಲಿ ಅವರ ಹೆಣವನ್ನು ತೆಗೆದುಕೊಂಡು ಬಂದು ಪುಣೇದಹಳ್ಳಿ ಮಾರ್ಗವಾಗಿ ಉಡುಗಣಿ ಗ್ರಾಮದಿಂದ ಕುಸೂರು ಗ್ರಾಮಕ್ಕೆ ಹೋಗುವ ಮಣ್ಣಿನ ರಸ್ತೆಯ ಪಕ್ಕದಲ್ಲಿನ ಚರಂಡಿಗೆ ಬಿಸಾಡಿದ್ದಾರೆ. ನಂತರ ಕೆಲಸ ಆಯ್ತು ಎಂದು ಮಂಜುನಾಥ್​ಗೆ ತಿಳಿಸಿದ್ದಾರೆ. 

ಇದನ್ನು ಸಹ ಓದಿ  : ಪಿಕಪ್​ಗೆ ಹೊರಟಿದ್ದ ಟೂರಿಸ್ಟ್ ಗಾಡಿ ಆಕ್ಸಿಡೆಂಟ್​, ಪಲ್ಟಿಯಾಗಿ ಮೋರಿಗೆ ಬಿದ್ದ ಬಸ್​

ಸದ್ಯ ಈ ಸಂಬಂಧ ಶಿರಾಳಕೊಪ್ಪ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಅಂದರ್ ಮಾಡಿದ್ದಾರೆ. ಒಟ್ಟಾರೆ, ಮಕ್ಕಳಿಗೆ ಕೊಡಬೇಕಾಗಿದ್ದನ್ನ ಕೊಡದೇ ಸತಾಯಿಸಿದ ತಂದೆ, ಇಳಿಗಾಲದಲ್ಲಿ ಇನ್ನೊಂದು ಮದುವೆಯಾಗಿ ಬೆಳೆದ ಮಕ್ಕಳನ್ನ ಅನಾಥ ಮಾಡಲು ಹೊರಟನೆಂಬ ಸಿಟ್ಟಿಗೆ ಮಂಜುನಾಥ್​ ಅಪ್ಪನ ಕೊಲೆಗೆ ಸುಪಾರಿ ಕೊಟ್ಟಿದ್ದಾನೆ. ತಮ್ಮ ಅಣ್ಣನ ಕೃತ್ಯಕ್ಕೆ ಬೆನ್ನಲೆಬಾಗಿ ನಿಂತಿದ್ಧಾನೆ. ಕೊಲೆಯೊಂದು ಮುಚ್ಚಿಹೋಗುತ್ತೆ ಎಂದುಕೊಂಡವರಿಗೆ ಶಿರಾಳಕೊಪ್ಪ ಪೊಲೀಸರು ಶಾಕ್ ಕೊಟ್ಟು, ಅಂದರ್ ಮಾಡಿದ್ದಾರೆ. 

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor