KARNATAKA NEWS/ ONLINE / Malenadu today/ Aug 28, 2023 SHIVAMOGGA NEWS
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ಟೌನ್ ಪೊಲೀಸ್ ಸ್ಟೇಷನ್ನಲ್ಲಿ (Sagar Town Police Station) ನಲ್ಲಿ ಅಪ್ರಾಪ್ತೆಯೊಬ್ಬಳಿಗೆ ಪ್ರೀತಿಸು ಎಂದು ಹಿಂಸೆ ನೀಡಿ ಕೊಲೆ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ.
ಜೀವ ಬೆದರಿಕೆ ಆರೋಪ
ಸಾಗರ ಟೌನ್ನಲ್ಲಿ ಅಪ್ರಾಪ್ತೆಯನ್ನು ಪರಿಚಯ ಮಾಡಿಕೊಂಡಿದ್ದ ಯುವಕ ಆಕೆಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದನಂತೆ. ಅಪ್ರಾಪ್ತೆಯ ತಂದೆಯ ನಿಧನದ ನಂತರ ಪರಿಚಯನಾದ ಈತ, ಇತ್ತೀಚೆಗೆ ಚಾಕು ತೋರಿಸಿ ಬೆದರಿಕೆ ಹಾಕಿದ್ದನಂತೆ.
ಆರೋಪಿ ವಶಕ್ಕೆ
ಈ ವಿಚಾರವಾಗಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರ ಸಹಾಯ ಪಡೆದ ಅಪ್ರಾಪ್ತೆ ಸಾಗರ ಪೇಟೆ ಪೊಲೀಸರಿಗೆ ದೂರು ನೀಡಿದ್ದರು. ಸದ್ಯ ಪ್ರಕರಣ ಸಂಬಂಧ ಯುವಕನನ್ನ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸ್ತಿದ್ಧಾರೆ.
ಇನ್ನಷ್ಟು ಸುದ್ದಿಗಳು
ಪ್ರೀತಿ ಪೆಟ್ಟು ಹುಷಾರು! ಪ್ರೇಮಿಸಿದ ಯುವಕನನ್ನ ಕೂಡಿ ಹಾಕಿ ಹೊಡೆದ ಹುಡುಗಿ ಕಡೆಯವರು! ದಾಖಲಾಯ್ತು ಎಫ್ಐಆರ್!
ಮನೆ ಹಿತ್ತಲಲ್ಲಿದ್ದ ಬಾವಿಗೆ ಬಿದ್ದ ಮಹಿಳೆ! ಬಚಾವ್ ಆಗಿದ್ದೇ ಹೆಚ್ಚು! ನಡೆದಿದ್ದೇನು?