ನನ್ನ ಹೃದಯ ಬಿಜೆಪಿಯಲ್ಲಿದೆ, ದೇಹ ಮಾತ್ರ ಹೊರಗಿದೆ: ಕೆ.ಎಸ್​. ಈಶ್ವರಪ್ಪ

ಹಂಚಿಕೊಳ್ಳಿ
WhatsApp Facebook X Telegram
KS Eshwarappa Re-entry to BJP
KS Eshwarappa Re-entry to BJP

ಶಿವಮೊಗ್ಗ: ನನ್ನ ಹೃದಯ ಯಾವಾಗಲೂ ಬಿಜೆಪಿಯಲ್ಲೇ ಇರುತ್ತದೆ, ಆದರೆ ದೇಹ ಮಾತ್ರ ಸದ್ಯಕ್ಕೆ ಹೊರಗಿದೆ ಎಂದು ಹೇಳುವ ಮೂಲಕ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ತಾವು ಮತ್ತೆ ಬಿಜೆಪಿಗೆ ಮರಳುವ ಕುರಿತಾದ ಚರ್ಚೆಯನ್ನು ಮುನ್ನೆಲೆಗೆ ತಂದಿದ್ದಾರೆ.

ಶಿವಮೊಗ್ಗ:  ಸಂಸದ ಬಿವೈ ರಾಘವೇಂದ್ರ ಹಾಗೂ ಶಾಸಕ ಎಸ್​ ಎನ್​ ಚನ್ನಬಸಪ್ಪಗೆ ಜಿಲ್ಲಾಧ್ಯಕ್ಷರು ಕರೆದು ಬುದ್ದಿ ಹೇಳಬೇಕು, ಹೆಚ್ ಸಿ ಯೋಗೀಶ್​

ಇಂದು ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಹೃದಯ ಬಿಜೆಪಿಗೆ ಮೀಸಲು. ನನ್ನ ದೇಹ ಮಾತ್ರ ಹೊರಗಿದೆಯೇ ಹೊರತು, ಮನಸ್ಸು ಪೂರ್ತಿಯಾಗಿ ಬಿಜೆಪಿಯಲ್ಲೇ ಇದೆ. ಆದರೆ ಪ್ರಸ್ತುತ ಬಿಜೆಪಿಯಲ್ಲಿ ಅನೇಕ ಸಮಸ್ಯೆಗಳಿದ್ದು, ಇದನ್ನು ನಾನು ಬಹಳ ಬೇಸರದಿಂದ ಹೇಳುತ್ತಿದ್ದೇನೆ. ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ನಾವು 25 ಸ್ಥಾನಗಳನ್ನು ಗೆದ್ದಿದ್ದೆವು, ಆದರೆ ನಂತರದ ದಿನಗಳಲ್ಲಿ ಆ ಸಂಖ್ಯೆ 17ಕ್ಕೆ ಇಳಿಯಿತು. ರಾಜ್ಯದ ಜನರು ಪಕ್ಷದ ಸಿದ್ಧಾಂತವನ್ನು ನೋಡಿ ಮತ ಹಾಕುತ್ತಾರೆ ಎಂದರು.

ಸದ್ಯ ರಾಜ್ಯ ಬಿಜೆಪಿಯಲ್ಲಿ ಸಂಘಟನೆ ಸರಿಯಾಗಿಲ್ಲ. ಪಕ್ಷದಲ್ಲಿ ಎಲ್ಲವೂ ಸರಿಯಾದ ಬಳಿಕ, ಹಿರಿಯರೊಂದಿಗೆ ಚರ್ಚಿಸಿ ನಾನು ಮತ್ತೆ ಬಿಜೆಪಿಗೆ ಸೇರುತ್ತೇನೆ ಎಂದು ಸ್ಪಷ್ಟಪಡಿಸಿದರು.

KS Eshwarappa Re-entry to BJP

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor