SHIVAMOGGA NEWS TODAY

SSLC ಆಗಿದೆಯಾ, ಉದ್ಯೋಗ ಹುಡುಕ್ತಿದ್ದೀರಾ, ಹಾಗಾದ್ರೆ ಈ ಸುದ್ದಿ ಓದಿ

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ನಿರುದ್ಯೋಗಿ ಯುವಜನತೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯು ಬರುವ ಮಾರ್ಚ್ 27 ರಂದು ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಂಡಿದೆ. ಅಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಆವರಣದಲ್ಲಿ ಈ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ.

ಶಿವಮೊಗ್ಗದಲ್ಲಿ ಜೇಬು ಸುಡುತ್ತಿದೆ ಪ್ರೀಮಿಯಂ ಪೆಟ್ರೋಲ್, ಲೀಟರ್‌ಗೆ ₹3 ಏರಿಕೆ? 

ಈ ವಿಶೇಷ ಉದ್ಯೋಗ ಮೇಳದಲ್ಲಿ ನಾಡಿನ ಪ್ರತಿಷ್ಠಿತ ಸಂಸ್ಥೆಗಳಾದ ಶಾಹಿ ಎಕ್ಸ್ಪೋರ್ಟ್, ಅಪೋಲೋ ಫಾರ್ಮಸಿ ಹಾಗೂ ಮಹಾಂತ್ ಮೋಟಾರ್ಸ್ ಕಂಪನಿಗಳು ಪಾಲ್ಗೊಳ್ಳುತ್ತಿದ್ದು, ಆಸಕ್ತ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಿವೆ. ಎಸ್‌ಎಸ್‌ಎಲ್‌ಸಿ, ಪಿಯುಸಿ ಸೇರಿದಂತೆ ಐಟಿಐ, ಡಿಪ್ಲೊಮೋ ಮತ್ತು ಯಾವುದೇ ಪದವಿ ಶಿಕ್ಷಣ ಪೂರೈಸಿದ ಅಭ್ಯರ್ಥಿಗಳಿಗೆ ಇಲ್ಲಿ ಆದ್ಯತೆ ನೀಡಲಾಗುತ್ತದೆ.

ಉದ್ಯೋಗಾಕಾಂಕ್ಷಿಗಳು 18 ರಿಂದ 35 ವರ್ಷದ ವಯೋಮಿತಿಯೊಳಗಿರಬೇಕು ಹಾಗೂ ಸಂದರ್ಶನಕ್ಕೆ ಬರುವಾಗ ತಮ್ಮ ಅಪ್‌ಡೇಟೆಡ್ ಬಯೋಡೆಟಾ ಮತ್ತು ಆಧಾರ್ ಕಾರ್ಡ್ ಪ್ರತಿಗಳನ್ನು ತಪ್ಪದೇ ತರಬೇಕು. ಈ ಮೇಳಕ್ಕೆ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ಅರ್ಹ ಯುವಕ-ಯುವತಿಯರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ. 

ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಪಂಪನಗರದ ಗುತ್ಯಪ್ಪ ಕಾಲೋನಿ 2ನೇ ಕ್ರಾಸ್‌ನಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಖುದ್ದಾಗಿ ಭೇಟಿ ಮಾಡಬಹುದು. ಇಲ್ಲವೇ ಮೊಬೈಲ್ ಸಂಖ್ಯೆ 9380663606 ಅಥವಾ 9108235132 ಗೆ ಕರೆ ಮಾಡಿ ಅಗತ್ಯ ವಿವರಗಳನ್ನು ಪಡೆಯಬಹುದಾಗಿದೆ.

Job Fair in Shivamogga on March 27 Direct Recruitment

Job Fair in Shivamogga  Job Fair 2026 Post Office Recruitment ಶಿವಮೊಗ್ಗ ಅಂಚೆ ಇಲಾಖೆಯಲ್ಲಿ 57 ಹುದ್ದೆಗಳ ಭರ್ತಿShimoga Home Guards Recruitment 2026 RRB Group D RecruitmentRRB Group D RecruitmentAlvas Udyoga Mela ಶಿಕಾರಿಪುರದಲ್ಲಿ ಫೆ.20, 21ಕ್ಕೆ ಆಳ್ವಾಸ್​ ಬೃಹತ್ ಉದ್ಯೋಗ ಮೇಳ 75 ಕ್ಕೂ ಹೆಚ್ಚು ಕಂಪನಿ ಭಾಗಿ Alvas Udyoga Mela in Shikaripura on Feb 20, 21: Alvas Foundation & Vivekananda Institution
Job Fair in Shivamogga
shivamogga car decor sun control house
shivamogga car decor sun control house
END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.