ಶಿವಮೊಗ್ಗದಲ್ಲಿ ಜೇಬು ಸುಡುತ್ತಿದೆ ಪ್ರೀಮಿಯಂ ಪೆಟ್ರೋಲ್, ಲೀಟರ್‌ಗೆ ₹3 ಏರಿಕೆ? 

ಹಂಚಿಕೊಳ್ಳಿ
WhatsApp Facebook X Telegram
Fuel Crisis Premium Petrol Hits 114 in Shivmogga
Fuel Crisis Premium Petrol Hits 114 in Shivmogga

ಶಿವಮೊಗ್ಗ: ಮಧ್ಯಪ್ರಾಚ್ಯ ದೇಶಗಳ ನಡುವಿನ ಯುದ್ಧದ ಕಾರ್ಮೋಡ ಇದೀಗ ನೇರವಾಗಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ. ಗ್ಯಾಸ್ ದರ ಏರಿಕೆಯ ಬೆನ್ನಲ್ಲೇ ಇದೀಗ ರಾಜ್ಯಾದ್ಯಂತ ಪ್ರೀಮಿಯಂ ಪೆಟ್ರೋಲ್ ದರವು ಲೀಟರ್‌ಗೆ ಅಂದಾಜು 3 ರೂಪಾಯಿಗಳಷ್ಟು ಏರಿಕೆಯಾಗಿದ್ದು, ವಾಹನ ಸವಾರರು ಕಂಗಾಲಾಗಿದ್ದಾರೆ. 

ಶಿವಮೊಗ್ಗ ಮೃಗಾಲಯದಲ್ಲಿ ನೀರಾನೆ ದಾಳಿ: ಬೆಂಗಳೂರು ಮೂಲದ ಪಶುವೈದ್ಯಾಧಿಕಾರಿ ಸಾವು !ನಡೆದಿದ್ದೇನು!

ಜಿಲ್ಲೆಯಲ್ಲಿ ಈ ಹಿಂದೆ ಲೀಟರ್‌ಗೆ ₹111.93 ಇದ್ದ ಪವರ್ ಪೆಟ್ರೋಲ್ ಬೆಲೆ ಈಗ ₹114.10 ಕ್ಕೆ ಜಿಗಿದಿದೆ. ಕೇವಲ ಪೆಟ್ರೋಲ್ ಮಾತ್ರವಲ್ಲದೆ, ಆಟೋ ಎಲ್‌ಪಿಜಿ ಗ್ಯಾಸ್ ಅಲಭ್ಯತೆ ಮತ್ತು ದರ ಏರಿಕೆಯಿಂದಾಗಿ ಆಟೋ ಚಾಲಕರು ಅನಿವಾರ್ಯವಾಗಿ ಬಾಡಿಗೆ ದರವನ್ನು ಹೆಚ್ಚಿಸಿದ್ದಾರೆ. ಇದು ಆಟೋ ಚಾಲಕರಿಗೆ ಮಾತ್ರವಲ್ಲದೆ, ದಿನನಿತ್ಯ ಪ್ರಯಾಣಿಸುವ ಸಾರ್ವಜನಿಕರಿಗೂ ದೊಡ್ಡ ಹೊರೆಯಾಗಿ ಪರಿಣಮಿಸಿದೆ. 

Fuel Crisis ಗಾಯದ ಮೇಲೆ ಬರೆ ಎಳೆದಂತಾದ ಬೆಲೆ ಏರಿಕೆ

ಈ ಬಗ್ಗೆ ಶಿವಮೊಗ್ಗದ ನಿವಾಸಿ ಸಂಜಯ್ ಮಾತನಾಡಿ, ಯುದ್ಧದ ಪರಿಣಾಮವಾಗಿ ಈಗಾಗಲೇ ಗ್ಯಾಸ್ ದರ ಹೆಚ್ಚಾಗಿದ್ದು ಜನ ಸಂಕಷ್ಟದಲ್ಲಿದ್ದಾರೆ. ಇದರ ನಡುವೆ ಪ್ರೀಮಿಯಂ ಪೆಟ್ರೋಲ್ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮುಂದಿನ ದಿನಗಳಲ್ಲಿ ಸಾಮಾನ್ಯ ಪೆಟ್ರೋಲ್ ದರವೂ ಹೆಚ್ಚಾಗುವ ಭೀತಿ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಮಧ್ಯಪ್ರವೇಶಿಸಿ ದರ ನಿಯಂತ್ರಿಸಬೇಕು ಎಂದು ಒತ್ತಾಯಿಸಿದ್ದಾರೆ.

Fuel Crisis Premium Petrol Hits 114 in Shivmogga

Fuel Crisis Premium Petrol Hits 114 in Shivmogga
Fuel Crisis Premium Petrol Hits 114 in Shivmogga
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor