SHIVAMOGGA NEWS TODAY

ಡಾಕ್ಟರ್ ಸಮೀಕ್ಷಾ ರೆಡ್ಡಿಯ ಕೊನೆಯ ಕರೆಗಳು ಮತ್ತು ಕೇಜ್ ನ ಸಿಸಿ ಕ್ಯಾಮರ ಪೂಟೇಜ್ ಗಳು ಸತ್ಯಕ್ಕೆ ಬೆಳಕು ಚೆಲ್ಲಬಹುದೇ? ಜೆಪಿ ಬರೆಯುತ್ತಾರೆ.

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Dr. Sameeksha Case ಶಿವಮೊಗ್ಗ :  ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೃಗಾಲಯದಲ್ಲಿ ವನ್ಯಜೀವಿ ವೈದ್ಯೆಯೊಬ್ಬರು ನೀರಾನೆಗೆ ಬಲಿಯಾದ ಸುದ್ದಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ರಂಜಾನ್ ಸಂಭ್ರಮ. ಶಿವಮೊಗ್ಗದಲ್ಲಿ ಹೇಗಿತ್ತು ಆಚರಣೆ 

ತ್ಯಾವರೆಕೊಪ್ಪ ಹುಲಿ ಸಿಂಹಧಾಮದಲ್ಲಿ  ಈ ಘಟನೆ ನಡೆದಿದೆ. ಮದ್ಯರಾತ್ರಿ 12.30 ರ ಹೊತ್ತಿಗೆ ವನ್ಯಜೀವಿ ವೈದ್ಯೆ ಡಾಕ್ಟರ್ ಸಮೀಕ್ಷಾ ರೆಡ್ಡಿ ಗರ್ಬಾವಸ್ಥೆಯಲ್ಲಿದ್ದ ನೀರಾನೆಯ ಆರೋಗ್ಯ ತಪಾಸಣೆ ಮಾಡಲು ಆವರಣದೊಳಗೆ ಇಳಿದಾಗ ನೀರಾನೆ ದಾಳಿ ಮಾಡಿದೆ. ಪರಿಣಾಮ ಸಮೀಕ್ಷಾ ರೆಡ್ಡಿ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ. ಇಲ್ಲಿ ಮೃಗಾಯಲದ ಅಧಿಕಾರಿಗಳು ಎಸ್.ಓ.ಪಿ (ಪ್ರಮಾಣಿತ ಕಾರ್ಯಾಚರಣಾ ವಿಧಾನ) ಅನುಸರಿಸಲಾಗಿದೆಯಾ ಎಂಬುದು ಕಾಡತೊಡಗಿದೆ. 

ಹುಲಿ ಮತ್ತು ಸಿಂಹಧಾಮದಲ್ಲಿ 20-03-26 ರ ಮದ್ಯ ರಾತ್ರಿ ಡಾ. ಸಮೀಕ್ಷಾ ರೆಡ್ಡಿಯವರನ್ನ ಕೇಜ್ನೊಳಗೆ ಹೋಗುವಂತೆ ನಿರ್ದೇಶಿಸಿದ್ದು ಯಾರು? ಫೆಬ್ರವರಿ 1ರಂದು ಅಪ್ರೆಂಟಿಸ್‌ಶಿಪ್‌ಗಾಗಿ ಮೃಗಾಲಯಕ್ಕೆ ಸೇರಿದ್ದರು. ಕೇವಲ ಒಂದೂವರೆ ತಿಂಗಳ ಸೇವಾವಧಿಯಲ್ಲಿದ್ದ ತರಬೇತಿ ನಿರತ ವೈದ್ಯೆಯನ್ನು ಇಂತಹ ಅಪಾಯಕಾರಿ ಪ್ರಾಣಿಯ ಬಳಿ ಒಂಟಿಯಾಗಿ ಕಳುಹಿಸಿದ್ದು ಯಾಕೆ? ಇಲ್ಲಿ ಮೃಗಾಯಲದ ನಿಯಮಾವಳಿಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆಯಾ..ಎಸ್ ಓ. ಪಿ ನಿಯಮ ಏಕೆ ಪಾಲನೆಯಾಗಿಲ್ಲ,  

ಹೊರಗುತ್ತಿಗೆ ವೈದ್ಯರಾದ ಡಾ.ಮುರುಳಿ ಕಳೆದ ನಾಲ್ಕೈದು ದಿನಗಳಿಂದ ಬೇರೊಂದು ಕೆಲಸದ ನಿಮಿತ್ತ ತೆರಳಿದ್ದಾರೆ.ಅವರ ಅನುಪಸ್ಥಿತಿಯಲ್ಲಿ ಡಾ. ಸಮೀಕ್ಷಾ ರೆಡ್ಡಿ ಯಾವುದೇ ಸ್ವಯಂ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಹಾಗೊಂದು ವೇಳೆ ಕೇಜ್ನೊಳಗೆ ಹೋಗಲೇ ಬೇಕಾದ ಅನಿವಾರ್ಯತೆ ಇದ್ದಲ್ಲಿ ಡಿಸಿಎಫ್ .ಎಸಿಎಫ್ ರೆಂಜರ್ ಡಿ ಆರ್ ಎಫ್ ಓ ಸಮಕ್ಷಮದ ಅನುಮತಿಯ ಅಗತ್ಯವಿದೆ. ಆದರೆ ಘಟನೆ ನಡೆದ ಸಂದರ್ಭದಲ್ಲಿ ಯಾರು ಉಪಸ್ಥಿತಿಯು ಇರಲಿಲ್ಲ. ಅನುಮತಿಯು ಇರಲಿಲ್ಲ. ಹೀಗಿದ್ದರೂ ಅವರು ಕೇಜ್ನೊಳಗೆ ಹೋಗಿದ್ದಾರೆ.ಹಾಗಿದ್ದರೆ ಹೋಗುವಂತೆ ಮಾಡಿದ್ದು ಯಾರು? ಡಾಕ್ಟರ್ ಸಮೀಕ್ಷಾ ರ ಕೊನೆಯ ಮೊಬೈಲ್ ಕರೆಗಳನ್ನು ಅವಲೋಕಿಸಿದರೆ, ಯಾರ್ಯಾರು ಅವರ ಸಂಪರ್ಕದಲ್ಲಿದ್ದರು ಎಂಬುದು ಗೊತ್ತಾಗುತ್ತದೆ.

ಇನ್ನು ಪ್ರತಿ ಕೇಜ್ ಬಳಿಯೂ ಸಿಸಿ ಕ್ಯಾಮರ ಇರಬೇಕೆಂಬ ನಿಯಮವಿದೆ. ಅದರಂತೆ ಸಮೀಕ್ಷಾ ಕೇಜ್ ಒಳಗೆ ಹೊಗಿದ್ದರೆ. ಅದು ಸಿಸಿ ಕ್ಯಾಮರದಲ್ಲಿ ಸೆರೆಯಾಗಿರುತ್ತದೆ. ನೈಜ ಘಟನೆ ಏನೆಂಬುದು ದೃಷ್ಯಾವಳಿಗಳ ಮೂಲಕ ಗೊತ್ತಾಗುತ್ತದೆ. ಗರ್ಭಾವಸ್ಥೆಯಲ್ಲಿರುವ ಯಾವುದೇ ವನ್ಯಜೀವಿ ವೈಲ್ಡ್ ಆಗಿಯೇ ಇರುತ್ತದೆ. ಅದರಲ್ಲೂ ದೈತ್ಯವಾಗಿರುವ ನೀರಾನೆ ಅತ್ಯಂತ ವ್ಯಾಘ್ರವಾಗಿಯೇ ಇರುತ್ತದೆ. ಇಂತಹ ಸಂದರ್ಭದಲ್ಲಿ ಚಿಕಿತ್ಸೆ ನೀಡುವಾಗ ತಜ್ಞ ವೈದ್ಯರ ತಂಡ ಜೊತೆಗಿರಬೇಕಾಗುತ್ತದೆ.

ಈಗ ಮೇಲಾಧಿಕಾರಿಗಳು ತಮ್ಮದಲ್ಲದ ತಪ್ಪಿನಿಂದ ತನಿಖೆಯಿಂದ ಜಾರಿಕೊಳ್ಳಬಹುದು. ಸಾವಿನ ಘಟನೆಯ ಎಲ್ಲ ಹೊಣೆಗಾರಿಕೆಯನ್ನು  ಯುವ ವೈದ್ಯೆಯ ತಲೆಗೆ ಕಟ್ಟುವ ಎಲ್ಲಾ ಲಕ್ಷಣಗಳು ದಟ್ಟವಾಗಿದೆ. ಶವಾಗಾರದ ಬಳಿ ಧಾಮದ ಅಧಿಕಾರಿ ಸಿಬ್ಬಂದಿಗಳು ಮಾತನಾಡುತ್ತಿರುವುದನ್ನು ಗಮನಿಸಿದಾಗ ಈ ಅನುಮಾನಗಳು ದಟ್ಟವಾಗಿದೆ.

Dr. Sameeksha Case CCTV & Call Logs Truth
Dr. Sameeksha Case CCTV & Call Logs Truth

Dr. Sameeksha Case CCTV & Call Logs Truth

shivamogga car decor sun control house
shivamogga car decor sun control house

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.